ಎಸ್‌ಡಿಪಿಐ 18ನೇ ಸಂಸ್ಥಾಪನಾ ದಿನಾಚರಣೆ: ಕೊಪ್ಪಳದಲ್ಲಿ ಬ್ರಾಂಚ್ ಕಚೇರಿ ಉದ್ಘಾಟನೆ
“ಹಸಿವಿಲ್ಲದ, ಭಯವಿಲ್ಲದ ಭಾರತ ನಿರ್ಮಾಣವೇ ಪಕ್ಷದ ಗುರಿ” – ನಾಸರ್ ಬಂಬ್ರಾಣ ಮಂಜೇಶ್ವರ, ಜೂನ್ 21: ಎಸ್‌ಡಿಪಿಐಯ 18ನೇ ಸಂಸ್ಥಾಪನಾ ದಿನದ ಅಂಗವಾಗಿ ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಕೊಪ್ಪಳದಲ್ಲಿ ನೂತನ ಬ್ರಾಂಚ್ ಕಚೇರಿಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ, ಕಳೆದ ಹದಿನೆಂಟು ವರ್ಷಗಳಿಂದ ಪಕ್ಷವು ದೇಶದ ದಲಿತ, ಹಿಂದುಳಿದ ಹಾಗೂ ಅಂಚಿನಲ್ಲಿರುವ ಸಮುದಾಯಗಳ ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ…
