ಕುಂದಾಪುರ: ಹೆದ್ದಾರಿ ಮಧ್ಯೆ ನಾನಾ ಭಂಗಿಯಲ್ಲಿ ವೀಲಿಂಗ್ ಮಾಡಿದ ಪುಂಡ- ಪ್ರಕರಣ ದಾಖಲು

ಉಡುಪಿ: ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ನಡುವೆ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆಯೇ ನಾನಾ ಭಂಗಿಯಲ್ಲಿ ‘ಸರ್ಕಸ್’ ಮಾಡಿದ್ದ ಪುಂಡನ ವಿಡಿಯೋ ವೈರಲ್ ಆಗಿದ್ದು, ಇದೀಗ ವಿಡಿಯೋ ಪರಿಶೀಲಿಸಿದ ಕುಂದಾಪುರ ಸಂಚಾರ ಠಾಣೆ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾ.20ರಂದು ಸ್ಕೂಟರ್ ಅನ್ನು ಸವಾರ ವೀಲಿಂಗ್ ಮಾಡುತ್ತಾ, ಹೆಲ್ಮಟ್ ಧರಿಸದೇ, ಸಂಚಾರ ನಿಯಮ ಉಲ್ಲಂಘಿಸಿ, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನಿಂದ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಮಾನವ ಜೀವಕ್ಕೆ ಹಾಗೂ ಇತರರ ಸ್ವತ್ತಿಗೆ ಹಾನಿ ಉಂಟು ಮಾಡುವ…

Read More

ರಾಮ ಹನುಮ ಜ್ಯೋತಿ ರಥಯಾತ್ರೆ ಅಯೋಧ್ಯೆ ತಲುಪಿ ಪೂಜೆ ನೆರವೇರಿಕೆ

ಪುತ್ತೂರು : ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.9ರಿಂದ 12ರ ತನಕ ನಡೆಯಲಿದ್ದು, ಅಯೋಧ್ಯೆಯಿಂದ ಜ್ಯೋತಿ ಹಾಗೂ ಮೂಲ ಮೃತ್ತಿಕೆಯನ್ನು ತರಲು ಹನುಮಗಿರಿಯಿಂದ ರಾಮಹನುಮ ಜ್ಯೋತಿ ರಥಯಾತ್ರೆ ರಾಮ ಜನ್ಮಭೂಮಿ ಅಯೋಧ್ಯೆಗೆ ಹೊರಟಿದ್ದು, ಅಯೋಧ್ಯೆ ತಲುಪಿರುವ ರಥಯಾತ್ರೆಗೆ ಸಕಲ ಪೂಜಾ ಕೈಂಕರ್ಯ ನೆರವೇರಿದೆ. ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀ ರಾಮನ ಪರಮ ಭಕ್ತ ಆಂಜನೇಯ ಹುಟ್ಟಿರುವ ಅಂಜನಾದ್ರಿಗೆ ಬಂದು ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ಆಗಮಿಸಲಿದೆ. ರಾಮ ದೀಕ್ಷೆಯನ್ನು…

Read More

ಉಡುಪಿ: ಯಕ್ಷಗಾನ ಪ್ರದರ್ಶನದ ನಡುವೆ ಪ್ರೇಕ್ಷಕರಿಗೆ ತರಾಟೆ — ಕಲಾವಿದರ ನಡೆ ಕುರಿತು ಚರ್ಚೆ

ಉಡುಪಿ: ಕುಂದಾಪುರ ತಾಲೂಕಿನ ಹೆನ್ನಾಬೈಲಿನಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಪ್ರೇಕ್ಷಕರ ವರ್ತನೆಗೆ ಕಿಡಿ ಕಾರಿದ ಘಟನೆ ಯಕ್ಷಗಾನ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಯಕ್ಷಗಾನದ ಭಾಗವತಿಕೆ ನಡೆಯುತ್ತಿದ್ದ ವೇಳೆ ಒಬ್ಬ ಪ್ರೇಕ್ಷಕ ಶಿಳ್ಳೆ ಹಾಕಿದ ಹಿನ್ನೆಲೆ ಕಲಾವಿದ ಅಶೋಕ್ ಭಟ್ ಉಜಿರೆ ವೇಷಧಾರಿಯಲ್ಲಿಯೇ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು. ಯಕ್ಷಗಾನ ಪ್ರದರ್ಶನ ವೇಳೆ ಸೌಜನ್ಯ ಮೀರಬಾರದು ಎಂದು ಎಚ್ಚರಿಕೆ ನೀಡಿದ ಅವರು, “ನಿಮ್ಮಂಥ ಪ್ರೇಕ್ಷಕರ ಅಗತ್ಯ…

Read More

2026ರ ತಮಿಳುನಾಡು ಚುನಾವಣೆಯಲ್ಲಿ. ಮಧುರೈ ಜಿಲ್ಲೆಯ. ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಪುತ್ತೂರಿನ ಅಕ್ಷಯ್ ರೈ ದoಬೆಕಾನಾ ಆಯ್ಕೆ.

ಪುತ್ತೂರು :ಕಳೆದ ಬಾರಿ 2021ರ ಚುನಾವಣೆಯಲ್ಲಿ. ತಮಿಳುನಾಡಿನ ಕನ್ಯಾಕುಮಾರಿ ಕೊಳಚಿಲ್ ಎಂಬ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಪಡೆದುಕೊಂಡಿದ್ದರು. ತದನಂತರದ ದಿನಗಳಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ. ಚಿತ್ರದುರ್ಗ ಜಿಲ್ಲೆಯ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಕೆಲಸ ಮಾಡಿರುತ್ತಾರೆ. ಪ್ರಸ್ತುತ ಇದೀಗ ಇವರು ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣದಲ್ಲಿ. ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದೀಗ 2026ರ ತಮಿಳುನಾಡು ಚುನಾವಣೆಯಲ್ಲಿ. ಮಧುರೈ ಜಿಲ್ಲೆಯ. ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ. ಪ್ರಭಾರಿಯಾಗಿ ಪುತ್ತೂರಿನ ಅಕ್ಷಯ್ ರೈ ದoಬೆಕಾನಾ ಆಯ್ಕೆಯಾಗಿರುತ್ತಾರೆ. ಇವರು ಈ ಹಿಂದೆ…

Read More

ಹೊಸ ಬಾವಿ ಕಾಮಗಾರಿ ದುರಂತ: 30 ಅಡಿ ಎತ್ತರದಿಂದ ಬಿದ್ದ ಬಕೆಟ್ — ವಲಸೆ ಕಾರ್ಮಿಕ ಸಾವು

ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಮೂವತ್ತು ಅಡಿ ಎತ್ತರದಿಂದ ತಲೆಯ ಮೇಲೆ ಬಿದ್ದ ಪರಿಣಾಮ ವಲಸೆ ಕಾರ್ಮಿಕನೋರ್ವನು ದಾರುಣ ಮೃತ ಪಟ್ಟ ದುರ್ಘಟನೆ ಶುಕ್ರವಾರ ಸಂಜೆ ಕುತ್ತಾರು ಪದವಿನ ಸಲಾತ್ ನಗರ ಎಂಬಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ ( 30)ಮೃತ ವ್ಯಕ್ತಿ.ಉಳ್ಳಾಲ ತಾಲೂಕಿನ ಕುತ್ತಾರುವಿನ ಸಲಾತ್ ನಗರದ ಖಾಲಿ ಸೈಟೊಂದರಲ್ಲಿ ಹೊಸ ಬಾವಿ…

Read More

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ

ಮಂಗಳೂರು:ಈಶ್ವರನ ಹೂದೋಟ ಎಂದೇ ಪ್ರಸಿದ್ದಿ ಪಡೆದ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಏಪ್ರಿಲ್ 7ರಂದು ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ಹೇಳಿದರು. ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು ವಿಶೇಷವಾಗಿದೆ, (ಗಂಗೆ,…

Read More

ಮಂಗಳೂರು: ಹೊಸ ನಿಯಮಗಳಿಂದ ಇ-ರಿಕ್ಷಾ ಚಾಲಕರು ಸಂಕಷ್ಟದಲ್ಲಿ — ಜಿಲ್ಲಾಡಳಿತಕ್ಕೆ ಸಂಘದ ಮನವಿ

ಮಂಗಳೂರು: ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯ ಭಾಗವಾಗಿ ಎಲೆಕ್ಟ್ರಿಕ್ ರಿಕ್ಷಾಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ರಿಕ್ಷಾಗಳಿಗೆ ಪರ್ಯಾಯವಾಗಿ ಇ-ರಿಕ್ಷಾಗಳು ಬೆಳವಣಿಗೆಯ ಹಾದಿಯಲ್ಲಿ ಮುಂದುವರಿದವು.ಆರಂಭಿಕ ಹಂತದಲ್ಲಿ, ಆರ್‌ಟಿಓ ನಿಯಮಗಳ ಪ್ರಕಾರ ಎಲೆಕ್ಟ್ರಿಕ್ ರಿಕ್ಷಾಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸ್ಥಳೀಯ ಸಂಸ್ಥೆಗಳ ಪರವಾನಿಗೆ (ಪರ್ಮಿಟ್) ಅಗತ್ಯವಿರಲಿಲ್ಲ. ಇದೇ ಹಿನ್ನೆಲೆದಲ್ಲಿ, ವಿಶೇಷವಾಗಿ ಕೊರೋನಾ ಕಾಲದಲ್ಲಿ ಅನೇಕ ಯುವಕರು ಮತ್ತು ಕೆಲ ಮಹಿಳೆಯರೂ ಸಹ ಇ-ರಿಕ್ಷಾಗಳನ್ನು ಖರೀದಿಸಿದ್ದರು ಆದರೆ ಜಿಲ್ಲಾಧಿಕಾರಿಗಳ ಶರತ್ತುಗಳಿಂದ ಇ-ರಿಕ್ಷಾ ಚಾಲಕರು ಸಮಸ್ಯೆಯನ್ನು…

Read More

ಮಂಗಳೂರು ವಿಶ್ವವಿದ್ಯಾನಿಲಯ 44ನೇ ಘಟಿಕೋತ್ಸವ: ಹರೇಕಳ ಹಾಜಬ್ಬ, ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು 44ನೇ ವಾರ್ಷಿಕ ಘಟಿಕೋತ್ಸವ ವಿವಿ ಆವರಣದ ಮಂಗಳ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು, ಅಕ್ಷರ ಸಂತ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮತ್ತು ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಈ ಸಂದರ್ಭದಲ್ಲಿ ಮಾಡಿದರು. ಇದೇ ವೇಳೆ ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಅವರಿಗೆ ಘೋಷಣೆಯಾಗಿರುವ ಗೌರವ…

Read More

ಉಡುಪಿ: ಜಿಲ್ಲೆಯ ಇಬ್ಬರು ಆರೋಪಿಗಳು ಗಡಿಪಾರು

ಉಡುಪಿ: ಜಿಲ್ಲೆಯ ಇಬ್ಬರು ಆರೋಪಿಗಳಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ನೌಫಿಲ್ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಹಾನ್ ಪೂಜಾರಿ ಇವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮಾ.26 ರಂದು ಗಡಿಪಾರು ಆದೇಶ ಜಾರಿಗೊಳಿಸಿದ್ದಾರೆ.ಶಿರ್ವ ಠಾಣಾ ವ್ಯಾಪ್ತಿಯ ಸೂರ್ಯಗುಡ್ಡೆ, ಕಳತ್ತೂರು ಗ್ರಾಮ ನಿವಾಸಿ ಮಹಮ್ಮದ್ ನೌಫಿಲ್ ವಿರುದ್ಧ ಐದು ಪ್ರಕರಣಗಳು ದಾಖಲಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಹಾಗೆ, ಮಲ್ಪೆ ಠಾಣಾ…

Read More

ಕುಂಬಳೆ ಪೆರಾಲ್‌ನಲ್ಲಿ ಕಾಣಿಸಿಕೊಂಡ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡುವ ಫ್ಲಕ್ಸ್ ಬೋರ್ಡ್

ವಿಧಾನಸಭಾ ಚುನಾವಣೆ ದಿನಾಂಕ ಹತ್ತಿರ ಬಂದಂತೆ ಮಂಜೇಶ್ವರದಲ್ಲಿ ಹೊಸ ತಿರುವು , ವಿವಾದಗಳು ಸಮಸ್ಯೆಗಳು ಹೊರಬರುತ್ತಿದೆ.ಯುಡಿಎಫ್‌ನ ಶಕ್ತಿ ಕೇಂದ್ರವೆಂದು ಕರೆಯಲ್ಪಡುವ ಕುಂಬಳೆ ಗ್ರಾಮ ಪಂಚಾಯತ್‌ನ ಪೆರಾಲ್‌ನಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡುವ ಫ್ಲಕ್ಸ್ ಬೋರ್ಡ್ ಕಾಣಿಸಿಕೊಂಡಿದೆ. ಫ್ಲಕ್ಸ್ ಬೋರ್ಡ್ ನ್ನು ಕಳೆದ ದಿನ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ವಾರ್ಡ್ ವಿಭಾಗದಲ್ಲಿ ಪೆರಾಲ್ ವಾರ್ಡ್‌ನಿಂದ ಸುಮಾರು 70 ಮನೆಗಳನ್ನು ಬೇರ್ಪಡಿಸಿರುವುದನ್ನು ವಿರೋಧಿಸಿ ಫ್ಲಕ್ಸ್ ಬೋರ್ಡ್‌ ಮೂಲಕ ಚುನಾವಣೆಯನ್ನು ಬಹಿಷ್ಕರಿಸಲು ಕರೆ…

Read More
error: Content is protected !!