ಬದಿಯಡ್ಕ–ಕುಂಬಳೆ ರಸ್ತೆಯಲ್ಲಿ ಕೋಳಿ ತ್ಯಾಜ್ಯ ಕಸ: ಸಾರ್ವಜನಿಕರಿಗೆ ತೀವ್ರ ತೊಂದರೆ

ಬದಿಯಡ್ಕ ಕುಂಬಳೆ ರಸ್ತೆ ಹಾದುಹೋಗುವ ನೈಫ್ ಜಂಕ್ಷನ್‌ ಬಸ್ ಸ್ಟಾಪ್ ಬಳಿ, ಕೋಳಿ ತ್ಯಾಜ್ಯ ಸೇರಿದಂತೆ ದುರ್ವಾಸನೆ ಬೀರುವ ಕಸವನ್ನು ರಸ್ತೆಬದಿಯಲ್ಲಿ ಸುರಿಯಲಾಗಿದ್ದು, ಪ್ರಯಾಣಿಕರು ಮತ್ತು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭಯ ಸ್ಥಳೀಯರಲ್ಲಿದೆ. ಸಾಮಾಜಿಕ ಕಾರ್ಯಕರ್ತರಾದ ಹ್ಯಾರಿಸ್ ಬಿಡಿಕೆ, ರಫೀಕ್ ಆರ್‌ಕೆ, ಮುಹಮ್ಮದ್ ಅಲಿ ಪೆರ್ಡಾಲ ಹಾಗೂ ಅಶ್ರಫ್ ಲಿಟಲ್ ಡ್ರೀಮ್ಸ್ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Read More

ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲದಲ್ಲಿ ದಕ್ಷಿಣ ದ್ವಾರದ ಶಿಲಾನ್ಯಾಸ ಹಾಗೂ ಉದ್ಘಾಟನಾ ಫಲಕ ಅನಾವರಣ

ಉಳ್ಳಾಲ: ಶ್ರೀ ಚೀರುಂಭ ಭಗವತಿ ಕ್ಷೇತ್ರದ ದಕ್ಷಿಣ ಭಾಗದ ಪ್ರವೇಶ ದ್ವಾರದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ (28-03-2026) ಬೆಳಿಗ್ಗೆ 9:00 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಲಾಯಿತು. ಅಸ್ತ್ರಗ್ರೂಪ್‌ನ CEO ಆಗಿರುವ ಶ್ರೀ ಲಂಚುಲಾಲ್ ಕೆ. ಎಸ್ ಅವರ ಕೊಡುಗೆಯಿಂದ ದಕ್ಷಿಣ ದ್ವಾರದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಶುಭ ಹಾರೈಸಿದರು….

Read More

ಮಂಜೇಶ್ವರದಲ್ಲಿ ಯುಡಿಎಫ್ ಪಂಚಾಯತ್ ಸಮಾವೇಶಗಳು ಪೂರ್ಣ

ಮಂಜೇಶ್ವರದ ಚುನಾವಣಾ ಗೆಲುವಿಗಾಗಿ ಆಯೋಜಿಸಲಾದ ಪಂಚಾಯತ್ ಸಮಾವೇಶಗಳು ಪೂರ್ಣಗೊಂಡಿವೆ. ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಚುನಾವಣೆಯ ಗೆಲುವಿಗಾಗಿ ಆಯೋಜಿಸಲಾದ ಪಂಚಾಯತ್ ಸಮಾವೇಶಗಳು ಪೂರ್ಣಗೊಂಡಿವೆ.ಇದರೊಂದಿಗೆ, ಪ್ರಚಾರವು ಎರಡನೇ ಹಂತವನ್ನು ತಲುಪಿದೆ. ಮಂಜೇಶ್ವರ ಪಂಚಾಯತ್ ಸಮಾವೇಶವನ್ನು ಕರ್ನಾಟಕ ಗೇರು ನಿಗಮದ ಅಧ್ಯಕ್ಷರಾದ ಶ್ರೀಮತಿ ಮಮತಾ ಗಟ್ಟಿ ಉದ್ಘಾಟಿಸಿದರು.ಯುಡಿಎಫ್ ಪಂಚಾಯತ್ ಅಧ್ಯಕ್ಷ ಹಝಿಜ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಸಂಚಾಲಕ ಹನೀಫ್ ಪಡಿ0ಜಾರ್ ಸ್ವಾಗತಿಸಿದರು. ಮಂಜುನಾಥ ಆಳ್ವ, ಹಝಿಜ್ ಮೇರಿಕೆ, ಸೋಮ ಶೇಖರ್, ಡಿಎಂಕೆ ಮುಹಮ್ಮದ್, ಲಕ್ಷ್ಮಣ್ ಪ್ರಭು, ಟಿ.ಎ. ಮೂಸಾ, ಎಂ.ಅಬ್ಬಾಸ್,…

Read More

ಫಲ್ಗುಣಿ ನದಿ ಕಲುಷಿತಕ್ಕೆ ಕೈಗಾರಿಕೆ ಕಾರಣವಲ್ಲ: ಕೆನರಾ ಕೈಗಾರಿಕ ಸಂಘ ಸ್ಪಷ್ಟನೆ

ಮಂಗಳೂರು:ಫಲ್ಗುಣಿ ನದಿ ನೀರು ಕಲುಷಿತಗೊಳ್ಳಲು ಕೈಗಾರಿಕೆಗಳು ಕಾರಣ ಎನ್ನುವ ಆರೋಪವನ್ನು ಕೆನರಾ ಕೈಗಾರಿಕ ಸಂಘ ತಳ್ಳಿ ಹಾಕಿದ್ದು, ಕೈಗಾರಿಕ ಪ್ರದೇಶದ ಹಾಗೂ ಪಕ್ಕದ ಪುನರ್ವಸತಿ ಪ್ರದೇಶದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನದಿ ಸೇರುತ್ತಿದೆ ಹೊರತು ಕೈಗಾರಿಕೆಗಳ ಸಂಸ್ಕರಿಸದ ತ್ಯಾಜ್ಯ ನೀರು ಅಲ್ಲ ಎಂದು ಕೈಗಾರಿಕ ಪ್ರತಿನಿಧಿಗಳು ತಿಳಿಸಿದ್ದಾರೆ. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಕೈಗಾರಿಕ ಸಂಘದ ಉಪಾಧ್ಯಕ್ಷ ಬಿ.ಎ. ಇಕ್ಬಾಲ್ ಅವರು, ಕೈಗಾರಿಕ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿದೆ. ಆದರೆ ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿ…

Read More

ಕಳವಾರು ಪೇಜಾವರ ಚರ್ಚಿನಲ್ಲಿ ಮಾ.31ರಂದು ಶಿಲುಬೆಯ ಯಾತ್ರೆ

ಮಂಗಳೂರು:ಕಳವಾರು ಪೇಜಾವರ ಸಂತ ಜೋಸೆಫರ ದೇವಾಲಯದಲ್ಲಿ ಎರಡೂವರೆ ಶತಮಾನಗಳ ಹಿಂದೆ ಆರಂಭವಾದ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಶಿಲುಬೆಯ ಯಾತ್ರೆ ಈ ಬಾರಿ ಮಾ.31ರಂದು ನಡೆಯಲಿದೆ ಎಂದು ಪೇಜಾರ್ ವಲಯದ ಪ್ರಧಾನ ಧರ್ಮಗುರು ವಂ| ಫಾ| ರೂಡಾಲ್ಫ್ ರವಿ ಡೇಸಾ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಿರಂತರ ಪ್ರಾರ್ಥನೆ, ಸ್ತುತಿ ಆರಾಧನೆ ಹಾಗೂ ದೇವರ ವಾಕ್ಯದ…

Read More

​ಮರಳು ಮಾಫಿಯಾಗಳಿಗೆ ಪೊಲೀಸರ ‘ಸಿಂಹಸ್ವಪ್ನ’: ಗಡಿಪಾರು ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ

​ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕುಂಬಳೆ ಪೊಲೀಸರು ಯುದ್ಧ ಘೋಷಿಸಿದ್ದು, ಕಠಿಣ ‘ಕಾಪಾ’ ಕಾಯ್ದೆಯಡಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಪಾಚಾಣಿ, ಉಳುವಾರು ಸೇರಿದಂತೆ ವಿವಿಧ ಹೊಳೆಗಳಿಂದ ಅವಿರತವಾಗಿ ನಡೆಯುತ್ತಿರುವ ಮರಳು ಲೂಟಿಯನ್ನು ತಡೆಯಲು ಇನ್ಸ್‌ಪೆಕ್ಟರ್ ಬೈಜು ಕೆ. ಥೋಮಸ್ ನೇತೃತ್ವದ ತಂಡ ಈ ಮುನ್ನೆಚ್ಚರಿಕೆ ನೀಡಿದೆ. ​ದಂಧೆಕೋರರನ್ನು ಕೇವಲ ಬಂಧಿಸುವುದಷ್ಟೇ ಅಲ್ಲದೆ, ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು. ಒಂದು ವೇಳೆ ಗಡಿಪಾರು ಆದೇಶ ಉಲ್ಲಂಘಿಸಿದರೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲು…

Read More

ಮಂಗಳೂರಿನಿಂದ ದಿವ್ಯ ದ್ವಾರಕಾ–ಸೋಮನಾಥ ಯಾತ್ರೆ: ಐಆರ್‌ಸಿಟಿಸಿ ವಿಶೇಷ ರೈಲು ಮೇ 10ರಿಂದ

ಮಂಗಳೂರು:ಭಾರತೀಯ ರೈಲ್ವೇ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ ಲಿಮಿಟೆಡ್‌ (ಐಆರ್‌ಸಿಟಿಸಿ)ನಿಂದ ದಿವ್ಯ ದ್ವಾರಕಾಸೋಮನಾಥ ಯಾತ್ರೆ ಎಂಬ ವಿಶೇಷ ಪ್ರವಾಸಿ ರೈಲು ಯಾತ್ರೆ ಹಾಗೂ ಶಿರಡಿಗೆ ವಿಶೇಷ ವಿಮಾನ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಐಆರ್‌ಸಿಟಿಸಿಯ ಜಂಟಿ ಜನರಲ್‌ ಮ್ಯಾನೇಜರ್‌ ಸ್ಯಾಮ್‌ ಜೋಸೆಫ್‌ ಪಿ ತಿಳಿಸಿದರು.ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಿಶೇಷ ರೈಲು ಯಾತ್ರೆಯು ಮೇ 10ರಂದು ಮಂಗಳೂರು ಮೂಲಕ ಹೊರಡಲಿದೆ ಎಂದರು. 10 ದಿನಗಳ ತೀರ್ಥ ಯಾತ್ರೆಯಲ್ಲಿ ಗುಜರಾತ್‌ನ ಪ್ರಮುಖ ಆಧ್ಯಾತ್ಮಿಕ ಸ್ಥಳಗಳು ಹಾಗೂ…

Read More

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ: ಹರೇಕಳ ಹಾಜಬ್ಬ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಬಾರಿ ಶಿಕ್ಷಣ, ಕಲೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ಷರ ಸಂತ’ ಎಂದು ಖ್ಯಾತಿ ಪಡೆದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಯಕ್ಷಗಾನ ರಂಗದ ಹಿರಿಯ ಕಲಾವಿದ ಸೂರೆಕುಮೇರು ಗೋವಿಂದ ಭಟ್ ಹಾಗೂ ದೈವ ನರ್ತಕ ಡಾ. ರವೀಶ್ ಪಡುಮಲೆ…

Read More

ಬೋಯ್‌ರೈನ್ ಡ್ಯಾನ್ಸ್ ಅಕಾಡೆಮಿಯಿಂದ ಮಂಗಳೂರು ಉತ್ಸವಕ್ಕೆ ಸಜ್ಜು

ಮಂಗಳೂರು: ಬೋಯ್‌ರೈನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಎ.4ರಿಂದ 12ರವರೆಗೆ ಮಂಗಳೂರು ಉತ್ಸವ ಎಂಬ ಮನರಂಜನಾ ಕಾರ್ಯಕ್ರಮ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದುಬೋಯ್‌ರೈನ್ ಡ್ಯಾನ್ಸ್ ಅಕಾಡೆಮಿಯ ಮಂಜು ಸುವರ್ಣ ಸದಸ್ಯರಾದ ಮಂಜು ಸುವರ್ಣ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ನೃತ್ಯ ಉತ್ಸವದ ಜತೆಗೆ ರಾಜ್ಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಫುಡ್ ಫೆಸ್ಟಿವಲ್, ಸೆಲೆಬ್ರಿಟಿಗಳಿಂದ ಪ್ರದರ್ಶನ, ಐಸ್‌ಕ್ರೀಂ ಫೆಸ್ಟಿವಲ್, ಅಟೋ ಕಾನಿವಲ್, ಅಮ್ಯೂಸ್‌ಮೆಂಟ್…

Read More

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಕನಿಲ: ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಏಪ್ರಿಲ್ 18ರಿಂದ 23ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಏಪ್ರಿಲ್ 26ರಿಂದ ಮೇ 3ರವರೆಗೆ ಭರಣಿ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು. ಅಸ್ತ್ರ ಗ್ರೂಪ್ ಮಾಲಕ, ನಿರ್ಮಾಪಕ ಹಾಗೂ ನಟ ಲಂಚುಲಾಲ್ ಕೆ.ಎಸ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ಕುದುರು, ಜೀರ್ಣೋದ್ಧಾರ ಸಮಿತಿಯ…

Read More
error: Content is protected !!