ಮಂಗಳೂರಿಗೆ ‘ಅಪೋಲೊ ಓಷಿಯನ್’ ಎಲ್‌ಪಿಜಿ ಟ್ಯಾಂಕರ್ ಆಗಮನ – ಇಂಧನ ಭದ್ರತೆಗೆ ಬಲ

ಮಂಗಳೂರಿನ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗುಜರಾತ್‌ನಿಂದ ಹೊರಟಿದ್ದ ‘ಅಪೋಲೊ ಓಷಿಯನ್’ ಬೃಹತ್ ಎಲ್‌ಪಿಜಿ ಟ್ಯಾಂಕರ್ ಬುಧವಾರ ರಾತ್ರಿ ನವ ಮಂಗಳೂರು ಬಂದರನ್ನು ತಲುಪಿದೆ. ಈ ಹಡಗು ಸುಮಾರು 17,600 ಮೆಟ್ರಿಕ್ ಟನ್ ಎಲ್‌ಪಿಜಿ ಅನಿಲವನ್ನು ಹೊತ್ತು ತಂದಿದ್ದು, ಈ ಸರಕು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಇಂತಹ ಹಡಗುಗಳ ನಿರಂತರ…

Read More

28ರಂದು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ, ಕಾಸರಗೋಡು – ಕರ್ನಾಟಕ ಚುಟುಕು ಕವಿಗೋಷ್ಠಿ

ಕಾಸರಗೋಡು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ ಮಾರ್ಚ್ 28ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಜರಗಲಿದೆ. ಅಪರಾಹ್ನ 2.30ಕ್ಕೆ ಚುಟುಕು ಸಾಹಿತ್ಯ ಪರಿಷತ್ ಕೇಂದ್ರಸಮಿತಿ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್ ಅರಸ್ ಮೈಸೂರು ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ರಾಧಾಕೃಷ್ಣ. ಕೆ. ಉಳಿಯತಡ್ಕ ದಿಕ್ಸೂಚಿ…

Read More

ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ರೌಡಿಶೀಟರ್ ಆರಿಫ್ ಹತ್ಯೆ

ಮಂಗಳೂರು ಸಮೀಪದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಇಂದು ಮುಂಜಾನೆ ಭೀಕರ ಹತ್ಯೆ ಘಟನೆ ನಡೆದಿದೆ. ಕಿನ್ಯ ಅಜ್ಜಿನಡ್ಕ ನಿವಾಸಿಯಾಗಿರುವ ಆರಿಫ್ ಎಂಬ ರೌಡಿಶೀಟರ್ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾನೆ. ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದ ಆರಿಫ್, ಮುಂಜಾನೆ ಬೈಕ್‌ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ಬಳಿ ದುಷ್ಕರ್ಮಿಗಳು ಅವನನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ನಡೆಸಿದ ಪರಿಣಾಮ ಆರಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರಿಫ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆ, ಈ ಹತ್ಯೆ ಹಳೆಯ ವೈಮನಸ್ಸಿನ ಪರಿಣಾಮವಾಗಿರಬಹುದೆಂದು…

Read More

ಬೆಂಗ್ರೆ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 60ನೇ ಬೆಂಗ್ರೆ ವಾರ್ಡ್‌ನ ಪಡುಹೊಯ್ಗೆ ಮೊಗವೀರ ಗ್ರಾಮ ಸಭಾ ಬೆಂಗರೆ (ರಿ.) ವ್ಯಾಪ್ತಿಯ ಸ್ಯಾಂಡ್ ಪಿಟ್ ಬೆಂಗರೆ ಬಳಿ ವಿಶೇಷ ಅನುದಾನದಡಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿತು. ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವ ವಹಿಸಿದ್ದರು. ಭೂಮಿ ಪೂಜೆ ಬಳಿಕ ಮಾತನಾಡಿದ ಅವರು, ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಅಗತ್ಯ ಅನುದಾನವನ್ನು ಸಂಗ್ರಹಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ…

Read More

ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ-ಮಮತಾ ಗಟ್ಟಿ

ಮಂಗಳೂರು,ಮಾ.26; ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ,ಜಿಲ್ಲೆಯ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯನ್ನು ಕಷ್ಟಪಟ್ಟು ಎಚ್ಚರಿಕೆ ಯಿಂದ ಮಾಡುತ್ತಾ ಬಂದಿದ್ದಾರೆ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.ಅವರು ಮಹಿಳಾ ದಿನಾಚರಣೆಯ ಅಂಗವಾಗಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಛೇರಿ ಸಭಾಂಗಣ ಗುರುವಾರ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರುಇದರ ಸಂಯುಕ್ತ ಆಶ್ರಯ ದಲ್ಲಿಮಹಿಳಾ ದಿನಾಚರಣೆ ಮತ್ತುಮಹಿಳಾ…

Read More

ಮಂಗಳೂರಿನಲ್ಲಿ ಚಿರತೆ ಸೆರೆ: ಸ್ಥಳೀಯರಲ್ಲಿ ಆತಂಕಕ್ಕೆ ತೆರೆ

ಮಂಗಳೂರು: ನಗರದ ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸಂಚರಿಸುತ್ತಿದ್ದ ಬೃಹತ್ ಗಾತ್ರದ ಚಿರತೆಯನ್ನು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಕೆಲರಾಯ್ ಕ್ರಾಸ್‌ನ ನೆಕ್ಕರೆ ಪದವು ಪ್ರದೇಶದಲ್ಲಿ ಬೋನು ಅಳವಡಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಯ ಸಂಚಾರದ ಬಗ್ಗೆ ಆತಂಕಗೊಂಡ ಸ್ಥಳೀಯರು ಮಾಜಿ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಭಾಸ್ಕರ್ ಕೆ. ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಪಂದಿಸಿ ಅರಣ್ಯ ಇಲಾಖೆಗೆ…

Read More

ಸಂವಿಧಾನ ಪೀಠಿಕೆ ಜಾಗೃತಿ: ಬ್ಯಾಂಕ್‌ಗಳು, ಸಹಕಾರ ಸಂಘಗಳಲ್ಲಿ ಬೋರ್ಡ್ ಅಳವಡಿಕೆ ಅಭಿಯಾನ

ಮಂಗಳೂರು: ನೇತಾಜಿ ಸುಭಾಸ್‌ಚಂದ್ರಬೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆ, ಹುಬ್ಬಳ್ಳಿ ವತಿಯಿಂದ ಮಂಗಳೂರು ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ವ್ಯವಸ್ಥಾಪಕ ಸಂಗೊಳ್ಳಿ ಸೋಮಣ್ಣ ಮಾತನಾಡಿ, ಸಹಕಾರ ಇಲಾಖೆ ಅಡಿಯಲ್ಲಿ ಬರುವ ಖಾಸಗಿ ಬ್ಯಾಂಕ್‌ಗಳು, ಪತ್ತಿನ ಸಹಕಾರ ಸಂಘಗಳು, ಕೋಆಪರೇಟಿವ್ ಸಂಸ್ಥೆಗಳು ಹಾಗೂ ಕೆಎಂಎಫ್ ಡೈರಿ ಮತ್ತು ಹಾಲು ಉತ್ಪಾದಕರ ಸಂಘಗಳಲ್ಲಿ ಭಾರತದ ಸಂವಿಧಾನದ ಪೀಠಿಕೆ ಬೋರ್ಡ್ ಅಳವಡಿಸಲು ಅನುಮತಿ ದೊರೆತಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸಂಸ್ಥೆ…

Read More

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ

ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಂದಾಪುರದ ಕೋಟೇಶ್ವರ ಸಮೀಪದ ಯುವ ಮೆರಿಡಿಯನ್ ಹೆಲಿಪ್ಯಾಡ್ ಬಳಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಆಡಳಿತದಲ್ಲಿರುವ ಪಕ್ಷದ ಪರ ಮತದಾರರ ಒಲವು ಇರುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆಮನೆಗೂ ತಲುಪಿದ್ದು, ಜನರ ಆದಾಯವೂ ಹೆಚ್ಚಾಗಿದೆ. ವಿಶೇಷವಾಗಿ…

Read More

‘ಪುತ್ತೂರು ಶಾಪಿಂಗ್ ಹಬ್ಬ’ ಮೆಗಾ ಡ್ರಾ ಮಾ.29ರಂದು

ಪುತ್ತೂರು: ಸ್ಥಳೀಯ ಗ್ರಾಹಕರನ್ನು ಪುತ್ತೂರಿನಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಪ್ರಥಮ ಬಾರಿಗೆ ಆಯೋಜಿಸಿರುವ ‘ಪುತ್ತೂರು ಶಾಪಿಂಗ್ ಹಬ್ಬ’ದ ಮೆಗಾ ಡ್ರಾ ಮಾ.29ರಂದು ಸಂಜೆ 5.30ಕ್ಕೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಶಾಪಿಂಗ್ ಹಬ್ಬದ ಅಂಗವಾಗಿ ವಿವಿಧ ವಾಣಿಜ್ಯ ಮಳಿಗೆಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ಕೂಪನ್‌ಗಳನ್ನು ವಿತರಿಸಲಾಗಿದ್ದು, ಕಳೆದ 8 ವಾರಗಳಿಂದ ಪ್ರತಿ ವಾರ…

Read More

ಮೊಬೈಲ್ ಸುಳಿಗೆ ಪ್ರಕರಣ,ತಲೆಮರೆಸಿದ್ದ ಆರೋಪಿಯ ದಸ್ತಗಿರಿ ಮಾಡಿದ ಉಳ್ಳಾಲ ಪೊಲೀಸರು.

ಮಂಗಳೂರು : ಮನೆಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಆತನ ಮೊಬೈಲ್ ಸುಳಿಗೆ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಉಳ್ಳಾಲ ಖಿಲ್ರಿಯಾ ನಗರ ನಿವಾಸಿ ನಿಫಾನ್ ಅಹ್ಮದ್ ಪಾಷ(33)ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ನಿಫಾನ್ ಕಳೆದ ಫೆಬ್ರವರಿ 5 ರಂದು ಮಧ್ಯರಾತ್ರಿ ತನ್ನ ಸಹವರ್ತಿಗಳಾದ ನಿಝಪತ್ ಅಲಿ ಮತ್ತು ಅಮೀರ್ ಸುಹೈಲ್ ಜೊತೆ ಸೇರಿ ಕೋಟೆಪುರದ ಮಹಮ್ಮದ್ ತಸ್ವೀರ್ ಎಂಬವರ ಮನೆಗೆ ನುಗ್ಗಿದ್ದಲ್ಲದೆ,ತಸ್ವೀರ್ಗೆ ಹಲ್ಲೆಗೈದು ಅವರ ಮೊಬೈಲ್…

Read More
error: Content is protected !!