ಡಿಸಿ ಬಂಗಲೆ ನಾಮಫಲಕದಿಂದ ಪತ್ನಿಯ ಹೆಸರು ತೆರವುಗೊಳಿಸಲು ಪ್ರತಿಭಾ ಕುಳಾಯಿ ಆಗ್ರಹ

ಮಂಗಳೂರು:ಮಂಗಳೂರು ಜಿಲ್ಲಾಧಿಕಾರಿಗಳ ಅಧಿಕೃತ ಬಂಗಲೆಯ ನಾಮಫಲಕದಲ್ಲಿ ಜಿಲ್ಲಾಧಿಕಾರಿಗಳ ಪತ್ನಿಯ ಹೆಸರನ್ನು ನಮೂದಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ಪ್ರದರ್ಶಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಪ್ರಶ್ನೆ ಎತ್ತಿದ್ದಾಗಿ ತಿಳಿಸಿದರು. “ಮಂಗಳೂರು ಜಿಲ್ಲಾಧಿಕಾರಿಗಳ ಬಂಗಲೆಯ ಹೊರಭಾಗದಲ್ಲಿರುವ ನಾಮಫಲಕದಲ್ಲಿ ಮೊದಲಿಗೆ ಜಿಲ್ಲಾಧಿಕಾರಿಗಳ ಪತ್ನಿಯ ಹೆಸರನ್ನು ಹಾಗೂ…

Read More

‘ಪುತ್ತೂರು ಚಲೋ’ ಸವಾಲಿಗೆ ಪ್ರತಿಭಾ ಕುಳಾಯಿ ತಿರುಗೇಟು

ಮಂಗಳೂರು: ಬಿಜೆಪಿ ಮುಖಂಡರು ಆಯೋಜಿಸಲು ಉದ್ದೇಶಿಸಿರುವ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಸಂಬಂಧಿಸಿ ತನಗೆ ಸವಾಲು ಹಾಕಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ ಮಹಿಳೆಗೆ ಅನ್ಯಾಯವಾದರೂ ತಾನು ಆಕೆಯ ಪರವಾಗಿ ನಿಲ್ಲುವುದಾಗಿ ಅವರು ಹೇಳಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ‘ಪುತ್ತೂರು ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾನು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಸವಾಲು…

Read More

ಬಂಟ್ವಾಳ : ಅಕ್ರಮ ಮಾರಾಟಕ್ಕೆ ಸಂಗ್ರಹಿಸಿದ್ದ 11 ಕೆಜಿ ದನದ ಮಾಂಸ ವಶ

ಬಂಟ್ವಾಳ : ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಸುಮಾರು 11 ಕೆ.ಜಿ. ದನದ ಮಾಂಸವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ಕಾವಳಪಡೂರು ಗ್ರಾಮದ ಗುಂಪುಕಲ್ಲು ಎಂಬಲ್ಲಿ ನಡೆದಿದೆ. ಆ.29ರಂದು ಮಧ್ಯಾಹ್ನ 3.20ರ ಸುಮಾರಿಗೆ ದೊರೆತ ಮಾಹಿತಿಯ ಆಧಾರದಲ್ಲಿ ಪೊಲೀಸರು ಗುಂಪುಕಲ್ಲು ನಿವಾಸಿ ಸಿರಾಜ್ ಅವರ ಮನೆಯ ಹಿಂಬದಿಯ ಶೆಡ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್’ನ ಮೇಲ್ಬಾಗದಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಾಂಸ ಪತ್ತೆಯಾಗಿದೆ. ತಲಾ ಒಂದು ಕೆ.ಜಿ.ಯಂತೆ 10 ಪಾರದರ್ಶಕ ಕವ‌ರ್‌ಗಳು ಹಾಗೂ ಒಂದು ಕಪ್ಪು ಕವರ್‌ನಲ್ಲಿದ್ದ…

Read More

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಕರಾವಳಿ ಜಿಲ್ಲೆಗಳ ಪ್ರಸ್ತಾವನೆಗಳಿಗೆ ಆದ್ಯತೆ

ಮಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯನ್ನು ಸೆಪ್ಟೆಂಬರ್ 18, 2026ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದ ಅಗತ್ಯ ಪ್ರಸ್ತಾವನೆಗಳನ್ನು ತಕ್ಷಣ ಸಿದ್ಧಪಡಿಸಿ, ಸಚಿವ ಸಂಪುಟದ ಮುಂದೆ ಮಂಡಿಸಲು ಬೇಕಾದ ಸಚಿವ ಸಂಪುಟ ಟಿಪ್ಪಣಿಗಳನ್ನು ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕರಾವಳಿ ಭಾಗದ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು…

Read More

ದ.ಕ. ಜಿಲ್ಲಾ ಮುಂಡಾಲ ಮಹಾಸಭಾ ಪದಗ್ರಹಣ ಸಮಾರಂಭ ಹಾಗೂ ಸ್ನೇಹ ಸಂಗಮ ಸೆ.6ರಂದು … !

ಮಂಗಳೂರು: ಮುಂಡಾಲ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸಮಿತಿ ಪದಗ್ರಹಣ ಸಮಾರಂಭ, ಮುಂಡಾಲ ಸಮುದಾಯದ ಸ್ನೇಹ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮವು ಸೆಪ್ಟೆಂಬರ್ 6ರಂದು ಭಾನುವಾರ ಬೆಳಗ್ಗೆ 11.30ಕ್ಕೆ ನಗರದ ಲಾಲ್‌ಬಾಗ್‌ನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದೆ. ಕಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಹಾಗೂ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚಿತ್ರದುರ್ಗದ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಷಡಕ್ಷರಮುನಿ…

Read More

ಕುಂಬಳೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಕುಂಬಳೆ: ಮೊರ ಶ್ರೀ ಐವರ್ ಭಗವತಿ ಸಂಘ, ಶ್ರೀ ಭುವನ ಮಾಳಿಂಗರೆ ಇಲ್ಲಿ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ನಡೆಯಿತು. ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗೇಶ್ ಕುಂಬುಳೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಧಾಕರ ಕುಂಬುಳೆ, ಮಾಧವ ಕುಂಬಳೆ, ಸಾವಿತ್ರಿ ಪೆರ್ವಾಡ್, ಜಯಂತಿ ಪೆರ್ವಾಡ್, ಭಾರತಿ ಪೆರ್ವಾಡ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕುಂಬಳೆ ಮಾಳಿಂಗರೆ ಎಸ್.ಎನ್.ಡಿ.ಪಿ. ಹಾಗೂ ಶ್ರೀ ಗುರು ಅನುಗ್ರಹ ವನಿತಾ ಸ್ವಸಹಾಯ ಸಂಘದ…

Read More

ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಗಂಭೀರ

​ಮಂಜೇಶ್ವರ: ವೈದ್ಯರೊಬ್ಬರು ಚಲಾಯಿಸುತ್ತಿದ್ದ ಕಾರು ಹಾಗೂ ಬೈಕ್ ಪರಸ್ಪರ ಭೀಕರವಾಗಿ ಡಿಕ್ಕಿ ಹೊಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ​ತಲಪಾಡಿ ಭಾಗದಿಂದ ಬರುತ್ತಿದ್ದ ಡಾಕ್ಟರ್ ಜಯಪಾಲ್ ಶೆಟ್ಟಿ ಅವರ ಕಾರು ಹಾಗೂ ಕುಂಜತ್ತೂರು ಭಾಗದಿಂದ ತಲಪಾಡಿ ಕಡೆಗೆ ಸಾಗುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಾಗೂ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ​ಈ ಅಪಘಾತದಲ್ಲಿ ಕುಂಜತ್ತೂರು ನಿವಾಸಿ ನಿಯಾಸ್ (ಬೈಕ್ ಸವಾರ) ಗಂಭೀರ ಗಾಯಗೊಂಡಿದ್ದು, ತಕ್ಷಣವೇ…

Read More

ಮನೆ ಮಂದಿ ಇಲ್ಲದ ಸಮಯ ನೋಡಿ ಕಳ್ಳತನ: ಶಾಲಾ ವಿದ್ಯಾರ್ಥಿನಿಯ ಕಲಿಕಾ ನಿಧಿ ಕಳವು

​ಮಂಜೇಶ್ವರ: ಓಣಂ ರಜೆಗಾಗಿ ಮನೆ ಮಂದಿ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು, ಶಾಲಾ ವಿದ್ಯಾರ್ಥಿನಿಯೊಬ್ಬಳ ಕಲಿಕೆಯ ಖರ್ಚಿಗಾಗಿ ತೆಗೆದಿಟ್ಟಿದ್ದ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಮಂಜೇಶ್ವರ ಸಮೀಪದ ತೂಮಿನಾಡಿನಲ್ಲಿ ನಡೆದಿದೆ. ​ಕುಂಜತ್ತೂರು ಸಮೀಪದ ತೂಮಿನಾಡಿನಲ್ಲಿರುವ ದಿವಂಗತ ದೇವಕಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಈ ಮನೆಯಲ್ಲಿ ಎರಡು ಕುಟುಂಬಗಳು ವಾಸವಾಗಿದ್ದು, ಇವರಲ್ಲಿ ಸತೀಶ್ ಎಂಬವರ ಕುಟುಂಬವು ಓಣಂ ರಜೆ ನಿಮಿತ್ತ ಬುಧವಾರ ಸಂಬಂಧಿಕರ ಮನೆಗೆ ತೆರಳಿತ್ತು.​ಸೋಮವಾರ ಮರಳಿ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲು…

Read More

ಚಿಪ್ಪಾರ್‌ನಲ್ಲಿ ಮಾನವ ಮೈತ್ರಿಯ ಸಂಗಮವಾದ ಓಣಂ ಆಚರಣೆ

ಚಿಪ್ಪಾರ್:ಜನಶಕ್ತಿ ಫ್ರೆಂಡ್ಸ್ ಕ್ಲಬ್ ಚಿಪ್ಪಾರ್‌ನ ಆಶ್ರಯದಲ್ಲಿ ಆಯೋಜಿಸಿದ್ದ ಓಣಂ ಆಚರಣೆ ಭಾರಿ ಜನಪಾಲ್ಗೊಳ್ಳುವಿಕೆಯಿಂದ ಗಮನ ಸೆಳೆಯಿತು. ಜಾತಿ, ಧರ್ಮ ಹಾಗೂ ರಾಜಕೀಯ ಭೇದವಿಲ್ಲದೆ ಸಾವಿರಾರು ಮಂದಿ ಭಾಗವಹಿಸಿದ ಈ ಕಾರ್ಯಕ್ರಮವು ಮಾನವ ಮೈತ್ರಿಯ ಸಂಗಮವಾಗಿ ಮಾರ್ಪಟ್ಟಿತು. ಪ್ರಸಿದ್ಧ ಚಲನಚಿತ್ರ ಹಾಗೂ ನಾಟಕ ನಟಿ ರೂಪಶ್ರೀ ವೋರ್ಕಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯೆ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಕೈಯಾರ್ ಕ್ರೈಸ್ಟ್ ಕಿಂಗ್ ಚರ್ಚ್‌ನ ಫಾದರ್ ವಿಶಾಲ್ ಮೋನಿಷ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಂಚಾಯತ್ ಸದಸ್ಯರಾದ ಝಕೀರ್…

Read More

ಕುಂಬಳೆ ಪ್ರೆಸ್ ಫೋರಂನಲ್ಲಿ ‘ಮಾಧ್ಯಮೋಣಂ’ ಸಂಭ್ರಮ

ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೇತೃತ್ವದಲ್ಲಿ ‘ಮಾಧ್ಯಮೋಣಂ’ ಹೆಸರಿನಲ್ಲಿ ಓಣಂ ಆಚರಣೆಯನ್ನು ಆಯೋಜಿಸಲಾಯಿತು. ಮಾಧ್ಯಮ ಪ್ರತಿನಿಧಿಗಳು ಹಾಗೂ ಕುಟುಂಬ ಸದಸ್ಯರ ಸಂಗಮಕ್ಕೆ ವೇದಿಕೆಯಾದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಓಣಂ ಸದ್ಯವನ್ನು ಏರ್ಪಡಿಸಲಾಗಿತ್ತು. ಸದಸ್ಯರ ಕುಟುಂಬಗಳ ಮಕ್ಕಳಿಗಾಗಿ ಮ್ಯೂಸಿಕಲ್ ಚೇರ್, ಬಲೂನ್ ಒಡೆಯುವಿಕೆ, ಓಣಂ ಹಾಡು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಪ್ರೆಸ್ ಫೋರಂ ಸದಸ್ಯರಿಗೆ ನೀಡಲಾದ ಓಣಂ ಕಿಟ್‌ಗಳನ್ನು ಯುವ ವ್ಯಾಪಾರಿ ಅಶ್ರಫ್ ಸ್ಕೈಲರ್ ವಿತರಿಸಿದರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ…

Read More
error: Content is protected !!