ಪಿಂಚಣಿ ಪ್ರಸ್ತಾವನೆಗೆ ಕ್ರಮವಿಲ್ಲ; ಅಧಿಕಾರಿಯ ವಿರುದ್ಧ ಲೋಕಾಯುಕ್ತ ಮೆಟ್ಟಿಲೇರಿದ ವಿಧವೆ

ಮಂಗಳೂರು:ಪಿಂಚಣಿ ಮಂಜೂರಾತಿಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ ತೋರಲಾಗಿದೆ ಎಂದಾರೋಪಿಸಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನಲ್ಲಿ ಅನುದಾನಿತ ಹುದ್ದೆಯಲ್ಲಿ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದ ಕಾಂತಪ್ಪ ಅವರ ಮರಣಾನಂತರದ ಕುಟುಂಬ ಪಿಂಚಣಿ ಮತ್ತು ಇತರ ಆರ್ಥಿಕ ಸೌಲಭ್ಯಗಳನ್ನು ಅವರ ಪತ್ನಿಗೆ ನಿರಾಕರಿಸಲಾಗಿತ್ತು. ಈ ಬಗ್ಗೆ ಮೃತ ಕಾಂತಪ್ಪ ಅವರ ಪತ್ನಿ ಗಿರಿಜಾ ಅವರು ಕಾಲೇಜು ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದರು. ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯು…

Read More

ಪುತ್ತೂರಿನಲ್ಲಿ ವಿಹಿಂಪ, ಬಜರಂಗದಳ, ಹಿಂದು ಜಾಗರಣ ವೇದಿಕೆ ‘ಚಲೋ

ಪುತ್ತೂರು: ಕೆಲ ದಿನಗಳ ಹಿಂದೆ ಪುತ್ತೂರಿನ ದರ್ಬೆಯ ಅಂಗಡಿಯೊಂದರಲ್ಲಿ ನಡೆದ ಘಟನೆ ಖಂಡಿಸಿ ಹಾಗೂ ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಆ.31 ರಂದು ಪುತ್ತೂರು ಚಲೋ ಜನಜಾಗೃತಿ ಆಂದೋಲನ ನಡೆಯಿತು. ದರ್ಬೆಯ ಪ್ರವಾಸಿ ಮಂದಿರದ ಪಕ್ಕದಿಂದ ಮೆರವಣಿಗೆ ಆರಂಭವಾಗಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಅಂಜನಾ ಪೈ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ…

Read More

ರಾಷ್ಟ್ರೀಯ ಮಟ್ಟದ ಅಂತರ್‌ಕಾಲೇಜು ಉತ್ಸವ ‘AIKYAM-2026’

ಮಂಗಳೂರು: ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಪದವಿ ವಿಭಾಗದ ವತಿಯಿಂದ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ದಿನದ ರಾಷ್ಟ್ರೀಯ ಮಟ್ಟದ ಅಂತರ್‌ಕಾಲೇಜು ಉತ್ಸವ ‘AIKYAM-2026’ ಸೆಪ್ಟೆಂಬರ್ 17ರಂದು ನಡೆಯಲಿದೆ. ಉತ್ಸವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ, ಸೃಜನಶೀಲತೆ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದ್ದು, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕೌಶಲ್ಯಾಧಾರಿತ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 10 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ aikyam2627@gmail.com ಸಂಪರ್ಕಿಸುವಂತೆ ಉತ್ಸವದ…

Read More

ಉಡುಪಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಳಸರ್ಪ ಯೋಗ ಪ್ರಸ್ತಾಪ: ದೇಶ-ಲೋಕಕ್ಕೆ ಅನಾಹುತದ ಭೀತಿ! |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಳಸರ್ಪ ಯೋಗದ ಪರಿಣಾಮದಿಂದ ಜಗತ್ತಿನಲ್ಲಿ ವಿವಿಧ ಅನಾಹುತಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಪ್ರಸ್ತಾಪವಾಗಿದೆ ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.ಮಠದ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ರಾಹು ಮತ್ತು ಕೇತುಗಳ ಮಧ್ಯೆ ಉಳಿದ ಎಲ್ಲ ಗ್ರಹಗಳು ಬರುವ ಕಾಳಸರ್ಪ ಯೋಗದ ಕುರಿತು ಚರ್ಚೆಯಾಗಿದ್ದು, ಇದರ ಪರಿಣಾಮ ಭೂಮಂಡಲದ ಮೇಲೆ ಇರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಪ್ರಾಕೃತಿಕ ವಿಕೋಪಗಳು, ರಾಜಕೀಯ ಅಸ್ಥಿರತೆ,…

Read More

ಅಷ್ಟಮಿಗೆ ಸಮುದ್ರ ಜೀವಿಯ ವೇಷದಲ್ಲಿ ರವಿ ಕಟಪಾಡಿ; ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ನೆರವು

ಉಡುಪಿ: ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಕಳೆದ 14 ವರ್ಷಗಳಿಂದ ವಿವಿಧ ವೇಷ ಧರಿಸಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ಸಮಾಜಸೇವಕ ರವಿ ಕಟಪಾಡಿ ಹಾಗೂ ಅವರ ತಂಡ, ಈ ಬಾರಿ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲು ನಿರ್ಧರಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರವಿ ಕಟಪಾಡಿ, ‘ಕಳೆದ 10 ವರ್ಷಗಳಲ್ಲಿ ನಮ್ಮ ತಂಡವು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಒಟ್ಟು ₹1.85 ಕೋಟಿ…

Read More

ಮೂಡ ಮಾಸ್ಟರ್ ಪ್ಲಾನ್‌ಗೆ ಮೊದಲ ಆದ್ಯತೆ: ಸಂತೋಷ್ ಕುಮಾರ್ ಶೆಟ್ಟಿ

ಮಂಗಳೂರು: ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸಂತೋಷ್ ಕುಮಾರ್ ಶೆಟ್ಟಿ, ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಮೂಡ ಮಾಸ್ಟರ್ ಪ್ಲಾನ್‌ಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ. ಮೂಡ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್‌ಗೆ ಸಂಬಂಧಿಸಿದ ಸಣ್ಣಪುಟ್ಟ ತೊಡಕುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮಗೊಳಿಸುವ ಪ್ರಯತ್ನ ನಡೆಸಲಾಗುವುದು ಎಂದರು. ಮೂಡವು ಕೇವಲ ನಿವೇಶನ ಹಂಚಿಕೆಗೆ ಸೀಮಿತವಾಗದೆ, ಮಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ…

Read More

ಭಾರತ್‌ ಜೋಡೋ ಯುವ ಸಂಘಟನೆಗೆ ಯುವಕರ ನೋಂದಣಿಗೆ ಕಾಂಗ್ರೆಸ್‌ನಿಂದ ಆಂದೋಲನ ರೂಪದ ಕಾರ್ಯಕ್ರಮ: ಐವನ್‌ ಡಿʼಸೋಜಾ

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನಲ್ಲೂ ಭಾರತ್‌ ಜೋಡೋ ಯುವ ಸಂಘಟನೆಯನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನೋಂದಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ರೂಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ ಪಕ್ಷದ ಯುವ ಸಂಘಟನೆಯ ಉಸ್ತುವಾರಿ ಐವನ್‌ ಡಿʼಸೋಜಾ ತಿಳಿಸಿದ್ದಾರೆ. ಪ್ರತಿ 10 ಸಾವಿರ ಜನಸಂಖ್ಯೆಗೆ ಒಂದು ಭಾರತ್‌ ಜೋಡೋ ಯುವ ಸಂಘಟನೆಯನ್ನು ರಚಿಸುವ ಮೂಲಕ ಯುವಕರಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ…

Read More

ಐವನ್ ಡಿಸೋಜಾ ಶಿಫಾರಸ್ಸು; 7 ಅರ್ಜಿದಾರರಿಗೆ ಪರಿಹಾರ ಧನ ಬಿಡುಗಡೆ

ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 7 ಜನ ಅರ್ಜಿದಾರರಿಗೆ ರೂ.5,64,694/- ( ರೂಪಾಯಿ ಐದು ಲಕ್ಷದ ಆರವತ್ತನಾಲ್ಕು ಸಾವಿರದ ಅರುನೂರ ತೊಂಬತ್ತನಾಲ್ಕು) ಪರಿಹಾರ ಧನಅರ್ಜಿದಾರರ ಖಾತೆಗೆ ಬಿಡುಗಡೆ. ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರ ಮನವಿಯ ಮೇರೆಗೆ ಶ್ರೀ ನವೀನ್ ಕೋಟ್ಯಾನ್ ಬೋಳೂರು ಇವರಿಗೆ ರೂ.2.00ಲಕ್ಷ, ಶ್ರೀಮತಿ…

Read More

ಕರಾವಳಿಯಲ್ಲಿ ಮೋಡ–ಬಿಸಿಲಿನ ವಾತಾವರಣ; ಸಂಜೆ–ರಾತ್ರಿ ಮಳೆ ಸಾಧ್ಯತೆ

ಕರಾವಳಿಯ ದ.ಕ. ಕಾಸರಗೋಡು ಉಡುಪಿ ಉ.ಕ ಜಿಲ್ಲೆಗಳಲ್ಲಿ ನಿನ್ನೆ ರಾತ್ರಿ ಸಾಮಾನ್ಯ ಮಳೆಯಾಗಿದೆ. ಮಲೆನಾಡಿನ ಘಟ್ಟಪ್ರದೇಶಗಳಲ್ಲಿ ಮಳೆಯಾಗಿದ್ದು , ತೀರ್ಥಹಳ್ಳಿ ಶೃಂಗೇರಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿತ್ತು. ತುಮಕೂರಿನ ಶಿರಾ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದ್ದು ಉಳಿದಂತೆ ಒಳನಾಡಿನ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ – ಬಿಸಿಲಿನ ವಾತಾವರಣ ಇರಲಿದ್ದು ಕಾಸರಗೋಡು ದ.ಕ. ಉಡುಪಿ ಉ.ಕ ಜಿಲ್ಲೆಗಳಲ್ಲಿ ಸಂಜೆ – ರಾತ್ರಿ 10-30mm ತನಕ ಒಂದೆರಡು ಸಾಮಾನ್ಯ ಮಳೆಯಾಗಬಹುದು. ಹಗಲು…

Read More

ಜನ್ಮಭೂಮಿ ಸಂಸ್ಕಾರ ಕೇಂದ್ರದ 9ನೇ ವಾರ್ಷಿಕೋತ್ಸವ: ಸೆ.4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಮಂಗಳೂರು:ಜನ್ಮಭೂಮಿ ಫೌಂಡೇಶನ್ (ರಿ.), ಮಂಗಳೂರು ಹಾಗೂ ಜನ್ಮಭೂಮಿ ಸಂಸ್ಕಾರ ಕೇಂದ್ರ, ಮರೋಳಿ ವತಿಯಿಂದ ಮರೋಳಿ ಶ್ರೀ ಸೂರ್ಯನಾರಾಯಣ ದೇವರ ಸನ್ನಿಧಿಯಲ್ಲಿ ಜನ್ಮಭೂಮಿ ಸಂಸ್ಕಾರ ಕೇಂದ್ರದ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಸೆಪ್ಟೆಂಬರ್ 4ರಂದು ಶುಕ್ರವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ ಎಂದು ಮರೋಳಿ ಶ್ರೀ ಸೂರ್ಯನಾರಾಯಣ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಶೆಟ್ಟಿ ಜೆಪ್ಪುಗುಡ್ಡೆಗುತ್ತು ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕೃಷ್ಣ ವೇಷ ಸ್ಪರ್ಧೆಯಲ್ಲಿ 500ಕ್ಕೂ…

Read More
error: Content is protected !!