ಸ್ಥಳೀಯಾಡಳಿತ ಚುನಾವಣೆ-ಯುಡಿಎಫ್ ಒಳಜಗಳ ಗಂಭೀರ ಸ್ವರೂಪ
ಮಂಜೇಶ್ವರ: ಮಂಜೇಶ್ವರದಲ್ಲಿ ಸ್ಥಳೀಯಾಡಳಿತ ಚುನಾವಣೆಯನ್ನು ಮುನ್ನಡೆಸುವ ಹಿನ್ನೆಲೆ ಯುಡಿಎಫ್ ಒಳಜಗಳ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯುಡಿಎಫ್ ಮೈತ್ರಿಯೊಳಗಿನ ಪಕ್ಷ ಹಂಚಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗೆ ಸೀಟು ನೀಡದಿರುವುದು ಹೊಸ ತಳಹದಿಯ ಉದ್ವಿಗ್ನತೆಯನ್ನು ಉಂಟುಮಾಡಿದೆ. ಇದರ ಪರಿಣಾಮವಾಗಿ ಬಾನುವಾರ ಬೆಳಿಗ್ಗೆ ಮಂಜೇಶ್ವರ ಹೊಸಂಗಡಿಯಲ್ಲಿ ಇರುವ ಕಾಂಗ್ರೆಸ್ ಕಚೇರಿಯನ್ನು ಸ್ಥಳೀಯ ಕಾರ್ಯಕರ್ತರು ಸಂಕೇತಾತ್ಮಕವಾಗಿ ಮುಚ್ಚುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕಚೇರಿ ಮುಚ್ಚುವ ಸಂದರ್ಭ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೇತಾರರು ಈ ಬಾರಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಂಜೇಶ್ವರ ಕಾಂಗ್ರೆಸ್ ನೇತಾರರು…
