ರಬ್ಬರ್ ಬೆಳೆಗಾರರ ಸಮಸ್ಯೆಯ ಪರಿಹಾರಕ್ಕೆ ನವೆಂಬರ್ 29 ರಂದು ಉಜಿರೆಯಲ್ಲಿ ರಾಜ್ಯಮಟ್ಟದ ಒಂದು ದಿನದ ರಬ್ಬರ್ ಬೆಳೆಗಾರರ ಸಮ್ಮೇಳನ …. !

ಮಂಗಳೂರು: ಕರ್ನಾಟಕ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ. ಉಜಿರೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿ., ಉಜಿರೆ ಹಾಗೂ ಕರ್ನಾಟಕ ರಾಜ್ಯದ ರಬ್ಬರು ಮಾರ್ಕೆಟಿಂಗ್ ಸೊಸೈಟಿಗಳ ಜಂಟಿ ಆಶ್ರಯದಲ್ಲಿ ನವೆಂಬರ್ 29 ರಂದು ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಪೂರ್ವಾಹ್ನ ೧೦ ರಿಂದ ರಾಜ್ಯಮಟ್ಟದ ಒಂದು ದಿನದ ರಬ್ಬರ್ ಬೆಳೆಗಾರರ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಭಿಡೆ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ…

Read More

ನವೆಂಬರ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದಿವ್ಯ ಹಸ್ತದಿಂದ ಗೋಕರ್ಣ ಪರ್ತಗಾಳಿಯಲ್ಲಿ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆಯ ಲೋಕಾರ್ಪಣೆ … !

ಮಂಗಳೂರು: ಗೋವಾ ಕಾಣಕೋಣ: ಸಮೀಪದ ಪರ್ತಗಾಳಿ ಕೇಂದ್ರ ಮಠದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 07 ರ ತನಕ 11 ದಿನಗಳ ಸಾರ್ಧಪಂಚ ಶತಮಾನೋತ್ಸವ ಕಾರ್ಯಕ್ರಮವು ನಡೆಯಲಿದೆ . ಇದರ ಭಾಗವಾಗಿ ನವೆಂಬರ್ 28 ರಂದು ಮಧ್ಯಾಹ್ನ 3.30 ರಿಂದ ಸಾಯಂಕಾಲ 5.00 ಗಂಟೆ ತನಕ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯಲಿದ್ದು . ಈ ಸಂದರ್ಭದಲ್ಲಿ ಅವರು ಪ್ರಭು ಶ್ರೀ ರಾಮನ ಮೂರ್ತಿಯ ಅನಾವರಣದ ಜೊತೆಗೆ ಶ್ರೀ ರಾಮಾಯಣ ಥೀಮ್ ಪಾರ್ಕ,…

Read More

ಬೀಡಿ ಮಾಲಕರ ವಂಚನೆಯ ವಿರುದ್ಧ ಬೀದಿಗಿಳಿದ ಬೀಡಿ ಕಾರ್ಮಿಕರು – ರಾತ್ರಿ ಹಗಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಉದ್ಘಾಟನೆ

ಮಂಗಳೂರು : ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ಮೀನಾ ಮೇಷ ಎಣಿಸುವ ರಾಜ್ಯ ಸರಕಾರದ ವಿರುದ್ದ ಬೀಡಿ ಕಾರ್ಮಿಕರು CITU ನೇತ್ರತ್ವದಲ್ಲಿ ಇಂದಿನಿಂದ (24-11-2025) ನಗರದ ಕ್ಲಾಕ್ ಟವರ್ ಬಳಿಯಲ್ಲಿ ರಾತ್ರಿ ಹಗಲು ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.ಪ್ರಾರಂಭದಲ್ಲಿ ಧರಣಿನಿರತರು ಬೀಡಿ ಮಾಲಕರು ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ…

Read More

ಡಿಸೆಂಬರ್ 16ರಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ , ಜಾಥಾ ಮತ್ತು ಮಹಿಳೆಯರನ್ನು ಕೊಂದವರು ಯಾರು ಎನ್ನುವ ಜನಾದೋಲನ ಕಾರ್ಯಕ್ರಮ … !

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಸತ್ಯವನ್ನು ಬೆಳಕಿಗೆ ತರುವ ಉದ್ದೇಶದಿಂದ “ಕೊಂದವರು ಯಾರು?” ಅಭಿಯಾನವನ್ನು ಡಿಸೆಂಬರ್ 16ರಂದು ಬೆಳ್ತಂಗಡಿಯಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನ ಸದಸ್ಯೆಯರು ಘೋಷಿಸಿದರು. ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ದಹಲಿಯ ನಿರ್ಭಯಾ ಪ್ರಕರಣ ನಡೆದ ದಿನವಾದ ಡಿಸೆಂಬರ್ 16 ಅನ್ನು ಮಹಿಳಾ ಸಂಘಟನೆಗಳು ದೇಶವ್ಯಾಪಿ ಅತ್ಯಾಚಾರ ವಿರೋಧಿ ದಿನವೆಂದು ಆಚರಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಅದೇ…

Read More

ಸಂತ ಅಲೋಶಿಯಸ್ ಉರ್ವಾದ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜೇನ್ ಜೆರುಶ ಪಿಂಟೋ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಗುಂಡು ಎಸೆತ ಹಾಗೂ ಚಕ್ರಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನುಗಳಿಸಿ ಮಧ್ಯ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕರು ವಂ ಗುರುಗಳಾದ ಬೆಂಜಮಿನ್ ಪಿಂಟೋ , ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಅಲೋಶಿಯಸ್ ಡಿಸೋಜ ,ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಮೋದ್, ಸುಧಾಕರ್ ಮತ್ತು ಹರಿಣಾಕ್ಷಿ ಇವರು ಶಾಲಾವತಿಯಿಂದ ಅಭಿನಂದಿಸಿ ಶುಭ ಹಾರೈಸಿದರು.

Read More

370ನೇ ವಿಧಿ ರದ್ದತಿ, SIR ಬಗ್ಗೆ ತೀರ್ಪು: 53ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್!

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆಯುವ 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ ಹಲವಾರು ಮಹತ್ವದ ತೀರ್ಪುಗಳ ಭಾಗವಾಗಿರುವ ನ್ಯಾಯಮೂರ್ತಿ ಸೂರ್ಯಕಾಂತ್ ಸೋಮವಾರ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ನವೆಂಬರ್ 23 ರಂದು ನಿವೃತ್ತರಾಗಿದ್ದು, ಅವರ ನಂತರ ಸೂರ್ಯಕಾಂತ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ…

Read More

ಕಾಸರಗೋಡು : ರಸಮಂಜರಿ ಕಾರ್ಯಕ್ರಮದ ವೇಳೆ ಕಾಲ್ತುಳಿತ – 15 ಮಂದಿಗೆ ಗಾಯ

ಕಾಸರಗೋಡು:  ನಗರದ ಹೊರವಲಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಿಂದ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತದಿಂದ ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಸರಗೋಡು ನಗರದ ಹಲವು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಫ್ಲೀ ಯುವಜನ ಸಂಘಟನೆ ವತಿಯಿಂದ ನುಳ್ಳಿಪ್ಪಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಹೆಸರಾಂತ, ಗಾಯಕ ಹನಾನ್ ಷಾ ಅವರ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರಿದ್ದರು. ಕಾರ್ಯಕ್ರಮಕ್ಕೆ…

Read More

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ “ಇನ್ನೋವೇಷನ್ ಶೋಕೆಸ್–2025” ಮತ್ತು “ಸಿಥೇರಿಯನ್–2025 ಹ್ಯಾಕಥಾನ್” ಭವ್ಯ ಉದ್ಘಾಟನೆ

ಮಂಗಳೂರು: ಮಂಗಳೂರಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನಿಕಲ್ ಆಕ್ಟಿವಿಟಿ ಸೆಲ್ ಹಾಗೂ CSE, ISE, AI & ML, ECE, CSD ಮತ್ತು CSBS ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ “ಇನ್ನೋವೇಷನ್ ಶೋಕೆಸ್: ಮೇಜರ್ ಪ್ರಾಜೆಕ್ಟ್ ಎಕ್ಸಿಬಿಷನ್–2025” ಮತ್ತು “ಸಿಥೇರಿಯನ್–2025: 24-ಗಂಟೆಗಳ ಹ್ಯಾಕಥಾನ್” ಕಾರ್ಯಕ್ರಮಗಳು ನವೆಂಬರ್ 22 ಮತ್ತು 23, 2025 ರಂದು ಭವ್ಯವಾಗಿ ಜರುಗಿದವು. ಉದ್ಘಾಟನಾ ಸಮಾರಂಭವು ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸಭಾಂಗಣದಲ್ಲಿ ನೆಡೆಯಿತು. ಮುಖ್ಯ ಅತಿಥಿ ಡಾ. ನಿರಂಜನ್…

Read More

ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ಶ್ರೀಮತಿ ರೂಪಕಲಾ ದಂಪತಿ ವಿವಾಹ “ರಜತ ಸಂಭ್ರಮ “

ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಮುಂದಾಳು ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ರೂಪಕಲಾ ದಂಪತಿಗಳ ವಿವಾಹದ 25ನೇ ವರ್ಷಚಾರಣೆ, ವಿವಾಹ ರಜತ ಸಂಭ್ರಮ ಕಾರ್ಯಕ್ರಮ, ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ 15.11.2025 ರಂದು ಅದ್ದೋ ರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೊಳ್ಳ ದಂಪತಿಗಳು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ಸೀರೆ, ಧೋತಿ ವಸ್ತ್ರ, ಗಳೊಂದಿಗೆ ಭಾಗಿನ ಸಮರ್ಪಿಸಿ ಗೌರವಿಸಿದರು. ಸುಮಾರು 25 ಮಂದಿ…

Read More

ಕೇಂದ್ರ ಸರಕಾರ ಜಾರಿ ಮಾಡಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ

ಮಂಗಳೂರು: ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಹಾಗೂ ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿ ಇಂದು(22-11-2025) ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು CITU ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ…

Read More
error: Content is protected !!