ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಅವರಿಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ

ಬೆಂಗಳೂರು:* ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿಗೆ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ 32 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕ್ರೀಡಾ ಬರವಣಿಗೆ ಹಾಗೂ ಕ್ರೀಡಾ ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್ಚಂದ್ರ ಅಂಚನ್ ಅವರು ಇದುವರೆಗೆ 4,500ಕ್ಕೂ ಅಧಿಕ ಕ್ರೀಡಾ ಲೇಖನಗಳು ಮತ್ತು ಅಂಕಣ ಬರಹಗಳನ್ನು ರಚಿಸಿದ್ದಾರೆ. ಅವರ ಬರಹಗಳು ಜಿಲ್ಲೆ, ರಾಜ್ಯ ಹಾಗೂ…

Read More

ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಮಾಹಿತಿ ಪತ್ರ ಅನಾವರಣ, ಸಾರ್ವಜನಿಕ ರಜೆ ಘೋಷಿಸುವಂತೆ ಸರಕಾರಕ್ಕೆ ಮನವಿ

ಸೆಪ್ಟೆಂಬರ್ 4, ಶುಕ್ರವಾರ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನವು ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ವಿವರಗಳನ್ನೊಳಗೊಂಡ ಮಾಹಿತಿ ಪತ್ರದ ಅನಾವರಣ ಇತ್ತೀಚೆಗೆ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಜರಗಿತು. ಪುಟಾಣಿಗಳಾದ ಶಿವಾವೃತ ಮತ್ತು ಪ್ರಗ್ಯಾ ಅವರ ಉಪಸ್ಥಿತಿಯಲ್ಲಿ ನಿವೃತ್ತ ಅಪರ ಜಿಲ್ಲಾಧಿಕಾರಿ ಡಾ. ಪ್ರಭಾಕರ ಶರ್ಮ ಮಾಹಿತಿ ಪತ್ರ ಅನಾವರಣಗೊಳಿಸಿ ಸ್ಪರ್ಧೆಯು ಅರ್ಥಪೂರ್ಣವಾಗಿ ನೆರವೇರಲೆಂದು ಹಾರೈಸಿದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ…

Read More

ಕೇರಳ ಸಮಾಜಂ ಮಂಗಳೂರು ವತಿಯಿಂದ ಓಣಂ 2026 ಸಂಭ್ರಮಾಚರಣೆ

ಮಂಗಳೂರು : ಕೇರಳ ಸಮಾಜಂ ಮಂಗಳೂರು ವತಿಯಿಂದ ಓಣಂ 2026 ಅನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಮಂಗಳೂರಿನ ಕೂಟಕಲಾ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವು ಮಲಯಾಳಿ ಸಮುದಾಯದ ಸದಸ್ಯರು, ಗಣ್ಯ ಅತಿಥಿಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ನೇಹ ಸಮ್ಮಿಲನ ಮತ್ತು ಹಬ್ಬದ ಸಂಭ್ರಮದಿಂದ ಕಂಗೊಳಿಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸಮಾಜಂ ಮಂಗಳೂರಿನ ಅಧ್ಯಕ್ಷರಾದ ಶ್ರೀ ಟಿ.ಕೆ. ರಾಜನ್ ವಹಿಸಿದ್ದರು. ಸಮಾಜದ ಕಾರ್ಯದರ್ಶಿ ಶ್ರೀ ಮ್ಯಾಕ್ಸಿನ್ ಸೆಬಾಸ್ಟಿಯನ್ ಅವರು ಸಭಿಕರನ್ನು ಸ್ವಾಗತಿಸಿ,…

Read More

ತೊಕ್ಕೊಟ್ಟಿನಲ್ಲಿ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕೃಷ್ಣಾಷ್ಟಮಿ ಸಂಭ್ರಮ

ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮುದ್ದುಕೃಷ್ಣ ಸಂಸ್ಕೃತಿಕ ಟ್ರಸ್ಟ್ (ರಿ) ತೊಕ್ಕೋಟು ಇದರ ವತಿಯಿಂದ ಮೊದಲ ಹಂತದ ಕಾರ್ಯಕ್ರಮಗಳನ್ನು ಕ್ಲಿಕ್ ಸಭಾಂಗಣ ಒಳಪೇಟೆ ತೊಕ್ಕೊಟ್ಟು ಇಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಪುಟಾಣಿಗಳಾದ ಪ್ರಾಧ್ಯಾ ಬಜ್ಪೆ, ಆದಿತ್ಯ ರಾಜ್ ಭಟ್, ತ್ರಿಷಿಕಾ, ಅಭಿಷ್ಟ ಕೃಷ್ಣ, ಅಗಮ್ಯ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ವಾನ್ ಕೆ.ವಿ ರಮಣಾಚಾರ್ಯರು ಪೂರ್ಣಾವಧಿ ಪ್ರಚಾರಕರು ಕೋಟಿಗೀತ ಲೇಖನ ಯಜ್ಞ ಗೀತ ಮಂದಿರ ಶ್ರೀ ಪುತ್ತಿಗೆ ಮಠ ಉಡುಪಿ…

Read More

ವರ್ತಕರಿಗೆ ತೊಂದರೆ ನೀಡುತ್ತಿದ್ದ ಯುವಕನಿಗೆ ಮಾನವೀಯ ನೆರವು

ಸಾಲೆತ್ತೂರು: ಕೊಳ್ನಾಡು ಗ್ರಾಮದ ಸಾಲೆತ್ತೂರು ಪೇಟೆಯಲ್ಲಿ ಅಲೆಮಾರಿಯಾಗಿ, ಅನಾಥನಂತೆ ತಿರುಗಾಡುತ್ತಿದ್ದ ಯುವಕನಿಂದ ಸ್ಥಳೀಯ ವರ್ತಕರು ಹಲವು ದಿನಗಳಿಂದ ತೊಂದರೆ ಅನುಭವಿಸುತ್ತಿದ್ದರು. ಅಂಗಡಿ ಮಾಲೀಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಯುವಕ, ಕೆಲ ಸಂದರ್ಭಗಳಲ್ಲಿ ಗಲಾಟೆಗೂ ಮುಂದಾಗುತ್ತಿದ್ದ ಎನ್ನಲಾಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಾಮಾಜಿಕ ಮುಖಂಡ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಮಧ್ಯಪ್ರವೇಶಿಸಿ ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ, ಯುವಕ ವಿದ್ಯಾವಂತನಾಗಿದ್ದು, ಕೆಲವು ಪರಿಸ್ಥಿತಿಗಳ ಕಾರಣದಿಂದ ಅನಾಥನಂತೆ ಅಲೆದಾಡುತ್ತಿದ್ದ ನತದೃಷ್ಟನಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ…

Read More

ಪೊಸೋಟು ಜಮಾಅತ್ ವತಿಯಿಂದ ವಿಜೃಂಭಣೆಯ ಈದ್ ಮಿಲಾದ್: ಸಡಗರದ ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು

​ಮಂಜೇಶ್ವರ: ಇಸ್ಲಾಂ ಧರ್ಮದ ಅಂತಿಮ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ‘ಈದ್ ಮಿಲಾದ್’ ಹಬ್ಬವನ್ನು ಪೊಸೋಟು ಜಮಾಅತ್ ವತಿಯಿಂದ ಅತ್ಯಂತ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ​ಹಬ್ಬದ ಅಂಗವಾಗಿ ಪೊಸೋಟು ಜಮಾಅತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಧಾರ್ಮಿಕ ಮೆರವಣಿಗೆಯು ಕಣ್ಮನ ಸೆಳೆಯಿತು. ಮಸೀದಿ ಅಧ್ಯಕ್ಷರಾದ ಆರ್.ಕೆ. ಬಾವ ಹಾಜಿ ಮೆರವಣಿಗೆಗೆ ಚಾಲನೆ ನೀಡಿದರು. ಜಮಾಅತ್ ಕಾರ್ಯದರ್ಶಿ ಉಸ್ಮಾನ್ ಹಾಜಿ, ಕೋಶಾಧಿಕಾರಿ ಕೆ.ಟಿ. ಅಬ್ದುಲ್ಲ ಹಾಜಿ, ಮುದರ್ರಿಸ್ ಸಯ್ಯದ್ ಹರಿಸ್ ತಂಘಲ್, ಸದರ್ ಮುಅಲ್ಲಿಮ್…

Read More

ಸಡಗರ-ಸಂಭ್ರಮದಿಂದ ಜರಗಿದ ಈದ್ ಮಿಲಾದ್ ಆಚರಣೆ: ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಬೃಹತ್ ಮೆರವಣಿಗೆ

​ಮಂಜೇಶ್ವರ: ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ‘ಈದ್ ಮಿಲಾದ್’ ಹಬ್ಬವನ್ನು ಮಂಜೇಶ್ವರ ತಾಲೂಕಿನಾದ್ಯಂತ ಮಂಗಳವಾರದಂದು ಅತ್ಯಂತ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ವಿಶೇಷ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಮಸೀದಿ ಅಧ್ಯಕ್ಷರಾದ ಸಯ್ಯದ್ ಯು.ಕೆ. ಸೈಪುಲ್ಲಾ ತಂಘಲ್, ಕಾರ್ಯದರ್ಶಿ ಇಬ್ರಾಹಿಂ ಬಟರ್‌ಫ್ಲೈ, ಪ್ರಮುಖರಾದ ಎಸ್.ಎಂ. ಬಶೀರ್, ಇಬ್ರಾಹಿಂ ಉಮ್ಮರ್ ಹಾಜಿ ಸೇರಿದಂತೆ ಹಲವು ಗಣ್ಯರು ಹಾಗೂ ಧಾರ್ಮಿಕ ನೇತಾರರು ಮೆರವಣಿಗೆಗೆ ಚಾಲನೆ ನೀಡಿ, ನೇತೃತ್ವ…

Read More

ಮಡಿವಾಳ ಸಂಘದ ಆಶ್ರಯದಲ್ಲಿ ಗುರುಪುರದಲ್ಲಿ ವಿಜೃಂಭಣೆಯಿಂದ ನಡೆದ ‘ಕೆಸರ್ದ ಕಂಡಡೊಂಜಿ ದಿನ’

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ, ರಜಕ ಯತ್, ಮಹಿಳಾ ಘಟಕ ಕುಡ್ಲ ಹಾಗೂ ಸರ್ವ ತಾಲೂಕು ಸಂಘಗಳ ಆಶ್ರಯದಲ್ಲಿ, ಸೇವಾ ಬ್ರಿಗೇಡ್ ಗುರುಪುರದ ಸಹಕಾರದೊಂದಿಗೆ ಮಡಿವಾಳ ಸಮಾಜದವರಿಗಾಗಿ ಆಯೋಜಿಸಿದ್ದ ‘ಕೆಸರ್ ದ ಕಂಡಡೊಂಜಿ ದಿನ’ ಕಾರ್ಯಕ್ರಮವು ಆಗಸ್ಟ್ 23ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ಬಂಡಿಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಮೋಹನ ಅಳಪೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ…

Read More

ಕುಂಬಳೆ ಪಂಚಾಯತ್ ಓಣಂ ಆಚರಣೆ ವಿವಾದ:ಖಾಸಗಿ ಮನೆಯಲ್ಲಿ ಕಾರ್ಯಕ್ರಮಕ್ಕೆ ಆಕ್ರೋಶ

ಮಂಜೇಶ್ವರ: ಕುಂಬಳೆ ಪಂಚಾಯತ್‌ನ ಓಣಂ ಆಚರಣೆಯು ವಿವಾದಕ್ಕೆ ಕಾರಣವಾಗಿದೆ. ಅಧಿಕೃತ ಸಭಾಂಗಣವಿದ್ದರೂ, ಪಂಚಾಯತ್ ಸದಸ್ಯನಲ್ಲದ ಹಾಗೂ ವಿವಾದಿತ ವ್ಯಕ್ತಿಯೊಬ್ಬರ ಮನೆಯಲ್ಲಿ ಕಾರ್ಯಕ್ರಮ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ​ಆಚರಣೆಯ ದಿನಾಂಕ ನಿಗದಿಯಾಗಿದ್ದರೂ ಸ್ಥಳವನ್ನು ಕೊನೆಯ ಕ್ಷಣದವರೆಗೆ ಗೌಪ್ಯವಾಗಿರಿಸಲಾಗಿತ್ತು. ರೆಸಾರ್ಟ್ ಅಥವಾ ಅತಿಥಿಗೃಹ ಎಂದು ನಂಬಿಸಿ ಕೊನೆಗೆ ಖಾಸಗಿ ವ್ಯಕ್ತಿಯ ಮನೆಯಲ್ಲಿ ಆಯೋಜಿಸಿರುವುದು ಸ್ಥಳೀಯರ ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ​ಸ್ಥಳಕ್ಕೆ ತೆರಳಿದ ಕೆಲ ಬಿಜೆಪಿ ನೇತಾರರು ಪ್ರತಿಭಟಿಸಿ ವಾಪಸಾದರೆ, ಇನ್ನು ಮೂವರು ಸದಸ್ಯರು ಭೋಜನಕೂಟ ಹಾಗೂ ಕಾರ್ಯಕ್ರಮದಲ್ಲಿ…

Read More

ಕುಂಬಳೆಯಲ್ಲಿ ದುರಂತ:ಊಟ ಮಾಡುತ್ತಿದ್ದ ವೇಳೆ ಕುಸಿದುಬಿದ್ದ ವಿದ್ಯಾರ್ಥಿ ಮೃತ್ಯು

ಮಂಜೇಶ್ವರ : ಆಹಾರ ಸೇವಿಸುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕುಂಬಳೆ ಕುಂಟಂಗೇರಡ್ಕದ ಅಬ್ದುಲ್ಲ ಎಂಬವರ ಪುತ್ರ ಮುಬಾರಿಸ್ (18) ಸಾವನ್ನಪ್ಪಿದ ದುರ್ದೈವಿ.​ಈತ ಮಂಗಳೂರಿನ ಶ್ರೀ ದೇವಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದನು. ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡುವ ವೇಳೆ ಮುಬಾರಿಸ್ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ…

Read More
error: Content is protected !!