ಆಂಬುಲೆನ್ಸ್ ಪಲ್ಟಿ; ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಸಾವು: ನಾಲ್ಕು ಮಂದಿಗೆ ಗಾಯ

​ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಬಂದಿಯೋಡ್‌ನಲ್ಲಿ ಸೇವಾಭಾರತಿಯ ಆಂಬುಲೆನ್ಸ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಹೊಡೆದು ಮಗುಚಿಬಿದ್ದ ಪರಿಣಾಮ, ಆಂಬುಲೆನ್ಸ್‌ನಲ್ಲಿದ್ದ ರೋಗಿ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.ಉಪ್ಪಳ ಕೆಎಸ್‌ಇಬಿ ಗುತ್ತಿಗೆದಾರ ಬಂದಿಯೋಡ್ ಅಡ್ಕದ ಅಶೋಕ (41) ಸಾವನ್ನಪ್ಪಿದ ದುರ್ದೈವಿ. ಅನಾರೋಗ್ಯದಿಂದ ಉಪ್ಪಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಆಸ್ಪತ್ರೆಗೆ ಸಾಗಿಸುವಾಗ ಈ ದುರ್ಘಟನೆ ನಡೆದಿದೆ.ಅಪಘಾತದಲ್ಲಿ ಅಶೋಕ ಅವರ ಪತ್ನಿ ಪ್ರತಿಭಾ, ಸಹೋದರ ರಾಜೇಶ್, ರಾಜೇಶ್ ಪತ್ನಿ ಹಾಗೂ ಆಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಸರಗೋಡು…

Read More

ಕಾರು ಡಿಕ್ಕಿ: ಪಾದಾಚಾರಿ ಯುವಕ ಸಾವು : ಮತ್ತೊಬ್ಬರಿಗೆ ಗಂಭೀರ ಗಾಯ

​ಕಾಸರಗೋಡು: ಪಯ್ಯನ್ನೂರಿನ ಪೆರುಂಬಾದಲ್ಲಿ ಕಾರು ಡಿಕ್ಕಿಹೊಡೆದು ಪಾದಾಚಾರಿ ಯುವಕನೊಬ್ಬ ದಾರುಣವಾಗಿ ಸಾವನ್ನ ಸ್ವಿದ್ದಾನೆ.ಮಯಿಲ್ ನಿರತ್ತುಪಾಲಂ ನಿವಾಸಿ ಶಾಹಿದ್ (21) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ಅವರೊಂದಿಗೆ ಇದ್ದ ತಿರುವಟ್ಟೂರು ನಿವಾಸಿ ಶಿಬಿಲ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ​ ಕಾಲ್ನಡಿಗೆಯಲ್ಲಿದ್ದ ಯುವಕರ ಮೇಲಿಗೆ ಕಾರು ಹರಿದು ಈ ಅಪಘಾತ ಸಂಭವಿಸಿದೆ.ಅಪಘಾತದ ಬಳಿಕ ನಿಲ್ಲಿಸದೆ ಪರಾರಿಯಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Read More

ರಾಜಕೀಯ ವೈಷಮ್ಯ ಮರೆತ ಓಣಂ ಆಚರಣೆ: ಉರುಳಿತು ಮಡಕೆ, ಗುರಿಯಾಯ್ತು ವಿಪಕ್ಷ ಸದಸ್ಯೆಯ ತಲೆ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಓಣಂ ಹಬ್ಬದ ಆಚರಣೆಯು ಕೇವಲ ಸಾಂಸ್ಕೃತಿಕ ಸಂಭ್ರಮವಷ್ಟೇ ಅಲ್ಲದೆ, ರಾಜಕೀಯ ಪಕ್ಷಗಳ ನಡುವಿನ ಅಚ್ಚರಿಯ ಸಾಮರಸ್ಯ ಹಾಗೂ ನಗೆಯ ಅಲೆ ಎಬ್ಬಿಸಿದ ತಮಾಷೆಯ ಘಟನೆಗೆ ಸಾಕ್ಷಿಯಾಗಿದೆ. ​ಹಬ್ಬದ ಅಂಗವಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ‘ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಹೊಡೆಯುವ ಸ್ಪರ್ಧೆ’ಯನ್ನು ಏರ್ಪಡಿಸಲಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷದ ಎನ್ನದೆ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರು ಉತ್ಸಾಹದಿಂದ ಈ ವಿನೋದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ​ಈ ಸಡಗರದ…

Read More

ಕಾಸರಗೋಡಿನಲ್ಲಿ ಮಳೆಯ ಅಬ್ಬರ: ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿತ

​ಕಾಸರಗೋಡು : ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೊಹಮ್ಮದ್ ಶರೀಫ್ ಎಂಬುವವರ ಮನೆಯ ಟೆರಸ್ ಮೇಲಿದ್ದ ಹಂಚಿನ ಮೇಲ್ಚಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿದೆ. ನೆಲ್ಲಿಕುಂಜೆ ಮುಹ್ಯುದ್ದೀನ್ ಜುಮಾ ಮಸ್ಜಿದ್ ರಸ್ತೆಯಲ್ಲಿರುವ ಇವರ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ​ಅಪಘಾತ ಸಂಭವಿಸಿದ ಸಮಯದಲ್ಲಿ ಶರೀಫ್ ಮತ್ತು ಅವರ ಕುಟುಂಬ ಸದಸ್ಯರು ಕೆಳಮಹಡಿಯಲ್ಲಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡ ಶಬ್ದ ಕೇಳಿ ಬಂದು ಪರಿಶೀಲಿಸಿದಾಗ ಮೇಲ್ಚಾವಣಿ ಕುಸಿದಿರುವುದು ಗೊತ್ತಾಗಿದೆ. ಈ ದುರಂತದಿಂದ ಸುಮಾರು…

Read More

ಉಪ್ಪಳ ಬಸ್ ನಿಲ್ದಾಣದಲ್ಲಿ ತೀವ್ರ ಸಂಚಾರ ದಟ್ಟಣೆ: ಪ್ರವೇಶ ದ್ವಾರದಲ್ಲಿನ ಅನಧಿಕೃತ ಪಾರ್ಕಿಂಗ್‌ನಿಂದ ಬಸ್ ಸಂಚಾರಕ್ಕೆ ಅಡ್ಡಿ

ಉಪ್ಪಳ: ಉಪ್ಪಳ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸಲು ಸಾಧ್ಯವಾಗದಷ್ಟು ಅನಧಿಕೃತ ಪಾರ್ಕಿಂಗ್ ಸಮಸ್ಯೆ ತೀವ್ರಗೊಂಡಿದೆ. ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಪ್ರವೇಶ ದ್ವಾರದ ಬಳಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಬಸ್‌ಗಳನ್ನು ನಿಲ್ದಾಣದೊಳಗೆ ಕೊಂಡೊಯ್ಯಲು ಸಾಧ್ಯವಾಗದೆ ಚಾಲಕರು, ಸಿಬ್ಬಂದಿ ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆಯ ಕೆಳಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಪಂಚಾಯಿತಿ ವತಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದ್ದರೂ, ಅನೇಕ ವಾಹನ ಸವಾರರು ಅದನ್ನು ಬಳಸುತ್ತಿಲ್ಲ. ಬದಲಾಗಿ ಬಸ್ ನಿಲ್ದಾಣದೊಳಗೆ ಹಾಗೂ ಪ್ರವೇಶ ದ್ವಾರಗಳ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು…

Read More

ನೆಟ್ಟಣಿಗೆ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಫಲ ಕಳ್ಳತನ ಯತ್ನ: ಹುಂಡಿ ಕಳವು ಮಾಡಲಾರದೆ ಪರದಾಡಿದ ಕಳ್ಳರು

ಕಾಸರಗೋಡು:ಸ್ಥಳೀಯರ ಆರಾಧ್ಯ ದೈವವಾದ ನೆಟ್ಟಣಿಗೆ ಶ್ರೀಮಹತೋಭಾರ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ವರದಿಯಾಗಿದೆ.ರಾತ್ರಿ ವೇಳೆ ಸುತ್ತುಗೋಪುರದ ಬಾಗಿಲನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕದ್ದೊಯ್ದಿದ್ದಾರೆ. ​ಆದರೆ, ಹುಂಡಿಯನ್ನು ಒಡೆಯಲು ಸಾಧ್ಯವಾಗದೆ ಹತಾಶರಾದ ಕಳ್ಳರು, ಅದನ್ನು ಸಮೀಪದ ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕರು ಪೂಜೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಕ್ಷೇತ್ರ ಆಡಳಿತ ಸಮಿತಿಯವರು ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು…

Read More

ರೈಲಿನಲ್ಲಿ ಮಹಿಳೆಯರೊಂದಿಗೆ ವಿಕೃತ ವರ್ತನೆ: ಕಾಸರಗೋಡು ಡಿಎಫ್‌ಒ ಅಮಾನತು

​ಕಾಸರಗೋಡು:ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರ ಮುಂದೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಚೇಷ್ಟೆ ಎಸಗಿದ ಆರೋಪ ಎದುರಿಸುತ್ತಿದ್ದ ಕಾಸರಗೋಡು ಡಿಎಫ್‌ಒ ಅರಣ್ಯಾಧಿಕಾರಿ ಜೋಸ್ ಮ್ಯಾಥ್ಯೂ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ​ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್ ಹುದ್ದೆಯಲ್ಲಿದ್ದ ಜೋಸ್ ಗಿರಿ ನಿವಾಸಿ ಜೋಸ್ ಮ್ಯಾಥ್ಯೂ ವಿರುದ್ಧ ಈ ಕಠಿಣ ಶಿಸ್ತು ಕ್ರಮ ಜರುಗಿಸಲಾಗಿದೆ.ಕಾಸರಗೋಡು ತಲುಪಿದ ‘ಓಖಾ ಎಕ್ಸ್‌ಪ್ರೆಸ್’ ರೈಲಿನಲ್ಲಿ ಈ ಘಟನೆ ನಡೆದಿದೆ. ಮಹಿಳೆಯರ ಮುಂದೆ ವಿಕೃತ ಮೆರೆದ ಈ ಅಧಿಕಾರಿಯ ಕೃತ್ಯದ ವಿರುದ್ಧ ಪೊಯಿನಾಚಿ ನಿವಾಸಿ ಮಹಿಳೆ ರೈಲ್ವೆ ಪೊಲೀಸರಿಗೆ…

Read More

ಆ.31ರಂದು ಪುತ್ತೂರು ಚಲೋ: ನ್ಯಾಯಕ್ಕಾಗಿ ಪ್ರತಿಭಟನೆಗೆ ಕರೆ

ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿ ಆ.31ರಂದು ‘ಪುತ್ತೂರು ಚಲೋ’ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ತಿಳಿಸಿದ್ದಾರೆ. ಗಾಯಗೊಂಡು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುವ ಅಂಜನಾ ಪೈ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖಂಡರು, ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು, ಘಟನೆಯ ಹಿಂದಿರುವ ನಿಷೇಧಿತ ಪಿಎಫ್‌ಐ…

Read More

ಪುತ್ತೂರಿನಲ್ಲಿ ಬಂದ್ ಹಿನ್ನೆಲೆ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಅರುಣ್ ಕುಮಾರ್

ಪುತ್ತೂರು: ಹಿಂದೂ ಜಾಗರಣ ವೇದಿಕೆ ವತಿಯಿಂದ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರು ಪುತ್ತೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ ಇಂದು ಈದ್ ಮಿಲಾದ್ ಆಚರಣೆ ನಡೆಯುತ್ತಿದ್ದು, ಜಿಲ್ಲೆಯಾದ್ಯಂತ ಈದ್ ಮಿಲಾದ್ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿವೆ. ಪುತ್ತೂರು ನಗರದಲ್ಲೂ ಬೆಳಗ್ಗೆ ಈದ್ ಮಿಲಾದ್ ಮೆರವಣಿಗೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆದಿದೆ. ಬಂದ್ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪುತ್ತೂರು ನಗರದಲ್ಲಿ ಹೆಚ್ಚಿನ ಪೊಲೀಸ್ ತುಕಡಿಗಳನ್ನು…

Read More

ವಾಹನ ಗ್ಲಾಸ್‌ಗೆ ಸ್ಟಿಕ್ಕರ್ ಅಳವಡಿಸಿದವರಿಗೆ ಪುತ್ತೂರು ಪೊಲೀಸರ ದಂಡ

ಪುತ್ತೂರು: ವಾಹನ ಚಾಲನೆಗೆ ಅಡ್ಡಿಯಾಗುವ ರೀತಿಯಲ್ಲಿ ಗ್ಲಾಸ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಹಾಗೂ ವಾಹನದ ನೋಂದಣಿ ಸಂಖ್ಯೆಯನ್ನು ಮರೆಮಾಚುವಂತೆ ಸ್ಟಿಕ್ಕರ್ ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಪುತ್ತೂರು ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು, ಅಂತಹ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ-ಹರಿದಿನಗಳು ಹಾಗೂ ಇತರ ಕಾರ್ಯಕ್ರಮಗಳ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಾಹನಗಳ ಗ್ಲಾಸ್‌ಗಳಿಗೆ ಚಾಲನೆಗೆ ಅಡ್ಡಿಯಾಗುವ ರೀತಿಯಲ್ಲಿ…

Read More
error: Content is protected !!