ಸುರತ್ಕಲ್ ವೆಟ್‌ವೆಲ್‌ನಲ್ಲಿ ಅಕ್ರಮ ಮರ ಕಡಿತ ಆರೋಪ; ತನಿಖೆಗೆ ಎಂ.ಜಿ. ಹೆಗಡೆ ಆಗ್ರಹ
ಸುರತ್ಕಲ್:* ಸುರತ್ಕಲ್ ಸಮೀಪದ ಮಾದವ ನಗರದ ವೆಟ್‌ವೆಲ್ ಒಳಗಿರುವ ಎಸ್‌ಟಿಸಿ ಆವರಣದಲ್ಲಿ ಪೂರ್ವಾನುಮತಿ ಪಡೆಯದೆ ಮರಗಳನ್ನು ಕಡಿದು ಸಾಗಿಸಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಆಗ್ರಹಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಬಂಧಪಟ್ಟ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಯಾವುದೇ ಮಾಹಿತಿ ನೀಡದೆ ಮತ್ತು ಅರಣ್ಯ ಕಾಯ್ದೆಯಡಿ ಅಗತ್ಯ ಅನುಮತಿ ಪಡೆಯದೆ ವಿವಿಧ ಜಾತಿಯ ಮರಗಳನ್ನು ಕಡಿದು ಸಾಗಿಸಲಾಗಿದೆ…
