ಗಣೇಶೋತ್ಸವದಲ್ಲಿ ಹಿರಿಯ ವಕೀಲ ಅರುಣ್ ಶ್ಯಾಮ್ ಮಂಜೇಶ್ವರ ಭಾಗಿ

ಮಂಜೇಶ್ವರ: ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಮಂಜೇಶ್ವರ ಅವರು ಮಂಜೇಶ್ವರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಗಣೇಶನ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ನ್ಯಾ. ನವೀನ್ ರಾಜ್, ಪದ್ಮನಾಭ ಕಡಪರ, ಅವಿನಾಶ್ ಹೆಗ್ಡೆ, ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ವಕೀಲರಾಗಿ ಕಾಣಿಸಿಕೊಂಡಿರುವ ಅರುಣ್ ಶ್ಯಾಮ್ ಮಂಜೇಶ್ವರ…

Read More

ಅವೈಜ್ಞಾನಿಕ ಚರಂಡಿ ನಿರ್ಮಾಣ: ಪೊಸೋಟು ಕುಟುಂಬಕ್ಕೆ ನಿಲ್ಲದ ಸಂಕಷ್ಟ – ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

​ಮಂಜೇಶ್ವರ: ನೂತನವಾಗಿ ನಿರ್ಮಿಸಲಾದ ಪಟ್ಪಥ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಕಳೆದ ಮೂರು ವರ್ಷಗಳಿಂದ ಪೊಸೋಟು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಬದಿಯಲ್ಲಿರುವ ಕುಟುಂಬವೊಂದು ತೀವ್ರ ಸಂಕಷ್ಟ ಎದುರಿಸುತ್ತಿದೆ. ​ಸಮೀಪದ ಗೋವಿಂದ ಪೈ ಕಾಲೇಜು, ಅದರ ತಳಭಾಗ ಸೇರಿದಂತೆ ನಾಲ್ಕೂ ದಿಕ್ಕುಗಳಿಂದ ಹರಿದುಬರುವ ಮಳೆ ನೀರು ಹಾಗೂ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ಹರಿದು ಬರುವ ಕಲುಷಿತ ನೀರು ನೇರವಾಗಿ…

Read More

ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಾರಿನಲ್ಲಿ ಸಂಚಾರ; ಇಬ್ಬರು ಯುವಕರ ಬಂಧನ

ಕುಂಬಳೆ : ​ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರು ಸಹಿತ ಇಬ್ಬರು ಯುವಕರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಕಯ್ಯಾರುವಿನ ಮೂಸಾ ಅಫೂಲ್ (26) ಮತ್ತು ನಿಜಾಮುದ್ದೀನ್ (19) ಬಂಧಿತ ಆರೋಪಿಗಳು. ​ಕಯ್ಯಾರುವಿನ ಚೇವಾರ್ ರೆಸೋರ್ಟ್ ಬಳಿ ಗಸ್ತು ತಿರುಗುತ್ತಿದ್ದ ಎಸ್‌ಐ ಗಣೇಶನ್ ಕೆ.ಪಿ. ನೇತೃತ್ವದ ಪೊಲೀಸ್ ತಂಡವು ಅನುಮಾನಾಸ್ಪದ ಕಾರನ್ನು ತಪಾಸಣೆ ನಡೆಸಿದಾಗ ಈ ಜಾಲ ಬೆಳಕಿಗೆ ಬಂದಿದೆ.ಕಾರಿನ ಅಸಲಿ ನಂಬರ್ ಪ್ಲೇಟನ್ನು ಒಳಗಿಟ್ಟು, ನಕಲಿ ಪ್ಲೇಟ್ ಅಳವಡಿಸಿಕೊಂಡಿರುವುದು ಕಂಡುಬಂದಿದೆ. ​ಆರೋಪಿಗಳು ಯಾವುದೇ ಅಕ್ರಮ ಕೃತ್ಯಕ್ಕೆ…

Read More

ಅಕ್ರಮ ಮರಳುಗಾರಿಕೆ ವಿರುದ್ಧ ಕುಂಬಳೆ ಪೊಲೀಸರ ಸಮರ

ಕುಂಬಳೆ : ​ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಣೆ ವಿರುದ್ಧ ಸಮರ ಸಾರಿರುವ ಕುಂಬಳೆ ಪೊಲೀಸರು, ಕಾರ್ಯಾಚರಣೆ ನಡೆಸಿ ಎರಡು ಅಕ್ರಮ ಕಡವುಗಳನ್ನು ಹಾಗೂ ಮೂರು ದೋಣಿಗಳನ್ನು ಜೆಸಿಬಿ ಬಳಸಿ ನಾಶಪಡಿಸಿದ್ದಾರೆ. ​ಮೊಗ್ರಾಲ್ ಕೆಕೆ ಪುರದಲ್ಲಿ ಕಂಡ್ಲಾ ಕಾಡುಗಳ ನಡುವೆ ಬಚ್ಚಿಡಲಾಗಿದ್ದ ಎರಡು ದೋಣಿಗಳನ್ನು ಪತ್ತೆಹಚ್ಚಿ, ಕಡವಿನೊಂದಿಗೆ ಧ್ವಂಸಗೊಳಿಸಲಾಯಿತು. ಅದೇ ರೀತಿ, ಶಿರಿಯ ಹೊಳೆಯ ಪಾಚಾಣಿಯಲ್ಲೂ ಸಹ ಒಂದು ದೋಣಿ ಹಾಗೂ ಅಕ್ರಮ ಕಡವನ್ನು ಪೊಲೀಸರು ನೆಲಸಮಗೊಳಿಸಿದ್ದಾರೆ. ​ಮರಳು ಅಕ್ರಮ ರವಾನೆಗೆ ವಾಹನಗಳಿಗೆ ಹಾದಿ ಮಾಡಿಕೊಡುವ…

Read More

ಕಾಸರಗೋಡಿನಲ್ಲಿ ಭೀಕರ ಕಾರು–ಆಟೋ ಅಪಘಾತ

​ಕಾಸರಗೋಡು : ಇಲ್ಲಿಯ ಕಲ್ಲಕಟ್ಟ ಬಳಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಟೋದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ​ಚೆಂಗಳ ಬಾರಿಕ್ಕಾಡಿನ ಆಟೋ ಚಾಲಕ ಪಿ.ಬಿ. ದಾಮೋದರನ್ (63) ರಕ್ಷಣೆಗೊಳಗಾದವರು. ಪ್ರಯಾಣಿಕರಾದ ಕಲ್ಲಕಟ್ಟ ನಿವಾಸಿ ರಾಜೇಶ್ವರಿ (48) ಮತ್ತು ಅವರ ಎಂಡೋಸಲ್ಫಾನ್ ಸಂತ್ರಸ್ತೆ ಪುತ್ರಿ ಅಂಜಲಿ (23) ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ​ಅಣಂಗೂರಿನಿಂದ ಮನೆಗೆ ಮರಳುತ್ತಿದ್ದಾಗ ಎದುರಿನಿಂದ ಬಂದ ಕಾರು ರಿಕ್ಷಾಗೆ…

Read More

ಮಂಗಳೂರಿನಲ್ಲಿ 21ನೇ ಸಚಿವ ಸಂಪುಟ ಸಭೆ

ಮಂಗಳೂರು: ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ 21ನೇ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಯು.ಟಿ. ಖಾದರ್, ರಿಜ್ವಾನ್ ಅರ್ಷದ್ ಹಾಗೂ ವಿಜಯಾನಂದ ಕಾಶಪ್ಪನವರ್ ಉಪಸ್ಥಿತರಿದ್ದರು. ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

Read More

ಖ್ಯಾತ ಕವಿ, ಗಝಲ್ ಕವಿ ಡಾ. ಸುರೇಶ್ ನೆಗಳಗುಳಿ ಯವರು ” ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ -2026ಕ್ಕೆ ಆಯ್ಕೆ

ಕಾಸರಗೋಡು : ಅಕ್ಟೋಬರಿನ 11.ಭಾನುವಾರದಿಂದ 20.10.2026ರ ವರೆಗೆ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಸಾರತ್ಯದಲ್ಲಿ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ “2026.ರ ಅಂಗವಾಗಿ 18.10.2026 ಭಾನುವಾರ ಬೆಳಿಗ್ಗಿನ 11 ಗಂಟೆಯಿಂದ ಉದ್ಘಾಟನೆ ಗೊಳ್ಳುವ “ಕಾಸರಗೋಡು ದಸರಾ ಕವಿ ಸಮ್ಮೇಳನ “ದಲ್ಲಿ ಡಾ. ಸುರೇಶ್ ನೆಗಳಗುಳಿ ಇವರೀಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ “ನೀಡಿ ಗೌರವಿಸಲಾಗುವುದು. ಸಾಹಿತ್ಯ ಸಂಘಟಕ, ಬಿ. ಶ್ರೀನಿವಾಸ್ ಬಹಾದ್ದೂರ್…

Read More

ಕೃಷಿಹೊಂಡದಲ್ಲಿ ದಂಪತಿಯ ಮೃತದೇಹ ಪತ್ತೆ; ನಿಗೂಢತೆಗೆ ತನಿಖೆ

​ಕಾಸರಗೋಡು : ವೆಳ್ಳರಿಕುಂಡ್ ಮಾಲೋಂ ಸಮೀಪದ ಕ್ಯಾರಿಯೋಟ್ ಚಾಲ್ ಎಂಬಲ್ಲಿ ತಡತ್ತಿಲ್ ನಿವಾಸಿ ಸಾಬು (56) ಹಾಗೂ ಅವರ ಪತ್ನಿ ಸಜಿ ಸಾಬು (52) ಎಂಬವರು ತಮ್ಮದೇ ಮನೆಯ ತೋಟದ ಕೃಷಿಹೊಂಡದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ​ಹೊಂಡದಲ್ಲಿ ಮೃತದೇಹಗಳನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೆಳ್ಳರಿಕ್ಕುಂಡ್ ಪೊಲೀಸರು ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ​ಸಾವು ಸಂಭವಿಸಲು ನಿಖರ ಕಾರಣ ಏನೆಂಬುದು ಸದ್ಯಕ್ಕೆ…

Read More

ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಸ್ಥಾನಮಾನ: ಡಿಕೆ ಶಿವಕುಮಾರ್ ಘೋಷಣೆ

ಮಂಗಳೂರು, ಸೆ. 18: ಕರ್ನಾಟಕದಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಹಲವು ದಶಕಗಳಿಂದ ಕೇಳಿಬರುತ್ತಿತ್ತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವಂತೆ ಹಲವು ಹೋರಾಟಗಳು ನಡೆದಿದ್ದವು. ಇದೀಗ ರಾಜ್ಯ ಸರ್ಕಾರ ತುಳುವನ್ನು…

Read More

ಹೊಸಂಗಡಿಯಲ್ಲಿ ‘Spice -N -Ice’ ಶುಭಾರಂಭ

ಹೊಸಂಗಡಿ: ಭಾಸ್ಕರ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ ಪವನ್ ಮಂಜೇಶ್ವರ ಮಾಲೀಕತ್ವದ ‘Spice N Ice’ ಹೊಸದಾಗಿ ಶುಭಾರಂಭಗೊಂಡಿದೆ. ಸರಳ ರೀತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಭ ಹಾರೈಸುವ ಮೂಲಕ ಹೊಸ ಉದ್ಯಮಕ್ಕೆ ಚಾಲನೆ ನೀಡಲಾಯಿತು. ‘Spice N Ice’ನಲ್ಲಿ ಐಸ್‌ಕ್ರೀಂ, ಶೇಕ್ಸ್, ಫಾಲೂಡಾ, ಸ್ಯಾಂಡ್‌ವಿಚ್, ಮ್ಯಾಗಿ, ಜ್ಯೂಸ್ ಸೇರಿದಂತೆ ವಿವಿಧ ಬಗೆಯ ತಿಂಡಿ-ತಿನಿಸು ಹಾಗೂ ಪಾನೀಯಗಳು ಲಭ್ಯವಿವೆ. ಹೊಸಂಗಡಿ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ವೈವಿಧ್ಯಮಯ ಆಹಾರ ಮತ್ತು ಪಾನೀಯಗಳ ಅನುಭವ ನೀಡುವ ಉದ್ದೇಶದಿಂದ ‘Spice N Ice’ ಆರಂಭಿಸಲಾಗಿದೆ….

Read More
error: Content is protected !!