ಅಮೆರಿಕದ ‘ಆಪರೇಶನ್ ಎಪಿಕ್ ಫ್ಯೂರಿ’ಗೆ ಭಾರೀ ನಷ್ಟ: ಕಾಂಗ್ರೆಸ್ ಅಧೀನದ CRS ವರದಿ ಬಹಿರಂಗ

ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ‘ಆಪರೇಶನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಅಮೆರಿಕ ಕಾಂಗ್ರೆಸ್ ಅಧೀನದ ಸಂಸತ್ತೀಯ ಸಂಶೋಧನಾ ಸೇವೆ (CRS) ವರದಿ ಬಹಿರಂಗಪಡಿಸಿದೆ.

ಫೆಬ್ರವರಿ 28ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಅಮೆರಿಕದ 42 ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾನಿಗೊಳಗಾದವುಗಳಲ್ಲಿ F-15E, F-35A, A-10 ಯುದ್ಧ ವಿಮಾನಗಳು, KC-135 ಇಂಧನ ಪೂರೈಕೆ ವಿಮಾನಗಳು, E-3 ಸೆಂಟ್ರಿ AWACS ಹಾಗೂ ವಿಶೇಷ ಕಾರ್ಯಾಚರಣೆ ವಿಮಾನಗಳು ಸೇರಿವೆ. ಜೊತೆಗೆ 24 MQ-9 ರೀಪರ್ ಡ್ರೋನ್‌ಗಳು ಹಾಗೂ ಒಂದು MQ-4C ಟ್ರಿಟಾನ್ ಡ್ರೋನ್ ಕೂಡ ನಾಶವಾಗಿವೆ ಎಂದು ತಿಳಿಸಲಾಗಿದೆ.

ಈ ಕಾರ್ಯಾಚರಣೆಯಿಂದ ಅಮೆರಿಕದ ಸೈನಿಕ ಸಾಮರ್ಥ್ಯ ಮತ್ತು ಆರ್ಥಿಕ ಹೊರೆ ಕುರಿತು ಚರ್ಚೆಗಳು ತೀವ್ರಗೊಂಡಿದ್ದು, ಯುದ್ಧದ ಒಟ್ಟು ವೆಚ್ಚ ಈಗಾಗಲೇ 29 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಅಂದಾಜಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!