174 ಪ್ರಯಾಣಿಕರಿದ್ದ ವಿಮಾನ ಪತನಕ್ಕೆ ಸಂಚು: ಕೋ-ಪೈಲಟ್ ಹಮ್ಮಾಮಿ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ

ಅಬುಧಾಬಿ: 174 ಪ್ರಯಾಣಿಕರಿದ್ದ ವಿಮಾನವನ್ನು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಕಟ್ಟಡಕ್ಕೆ 9/11 ಮಾದರಿಯಲ್ಲಿ ಡಿಕ್ಕಿ ಹೊಡೆಸಿ ಪತನಗೊಳಿಸುವ ಸಂಚು ರೂಪಿಸಿದ್ದಾಗಿ ಬಂಧಿತ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಸಂಚಿಗೆ ಅಡ್ಡಿಯಾಗಿದ್ದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಮೊದಲು ಹತ್ಯೆ ಮಾಡಲು ಹಮ್ಮಾಮಿ ಯತ್ನಿಸಿದ್ದ. ಆದರೆ ದಾಳಿಯಿಂದ ಗಾಯಗೊಂಡರೂ ಮಚ್ಚರ್ ಪ್ರತಿರೋಧ ತೋರಿಸಿ ತುರ್ತು ಸಂಕೇತ ಕಳುಹಿಸಿ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರು ಹಮ್ಮಾಮಿಯನ್ನು ಹಿಡಿದು ವಿಮಾನದ ನಿಯಂತ್ರಣ ಪಡೆದುಕೊಂಡರು.

ಯೋಜನೆ ವಿಫಲವಾದರೆ ಟೆಲ್ ಅವೀವ್‌ನ ಗಗನಚುಂಬಿ ಕಟ್ಟಡ ಅಥವಾ ಜೋರ್ಡಾನ್‌ನ ಅಮೆರಿಕ ಸೇನಾ ನೆಲೆಗೆ ವಿಮಾನ ಡಿಕ್ಕಿ ಹೊಡೆಸುವ ಪರ್ಯಾಯ ಯೋಜನೆಯೂ ಇತ್ತು ಎನ್ನಲಾಗಿದೆ. ಜುಲೈನಲ್ಲೇ ದಾಳಿ ನಡೆಸಲು ಸಂಚು ರೂಪಿಸಿದ್ದ ಹಮ್ಮಾಮಿ, ಬಳಿಕ ದುಬೈಗೆ ತೆರಳಿ ಯೋಜನೆ ರೂಪಿಸಿದ್ದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.

SHARE
Loading spinner

One thought on “174 ಪ್ರಯಾಣಿಕರಿದ್ದ ವಿಮಾನ ಪತನಕ್ಕೆ ಸಂಚು: ಕೋ-ಪೈಲಟ್ ಹಮ್ಮಾಮಿ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ”

Leave a Reply

Your email address will not be published. Required fields are marked *

error: Content is protected !!