ಪಾವೂರು :ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಮುಡಿಮಾರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯನ್ನು ಮುಡಿಮಾರು ಶ್ರೀ ಮಲರಾಯ ಗುಳಿಗ ದೈವಸ್ಥಾನದ ವಠಾರದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿ ಮಂಜೇಶ್ವರ ಇದರ ಅಧ್ಯಕ್ಷರಾದ ಕೃಷ್ಣ ಶಿವ ಕೃಪ ರವರು ಗುರುಗಳ ಸಂದೇಶಗಳನ್ನು ನೀಡಿದರು.

ಸಭೆಯಲ್ಲಿ ಅರಿಬೈಲು ಧೂಮಾವತಿ ದೈವದ ದರ್ಶನ ಪಾತ್ರಿ ಅರಸ ಪೂಜಾರಿ ಕುದುಕೋರಿ, ಮುಡಿಮಾರು ಮಲರಾಯ ದೈವಸ್ಥಾನದ ಅರ್ಚಕರಾದ ಚಂದ್ರಹಾಸ ಪೂಜಾರಿ ಮುಡಿಮಾರು, ಯುವ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಮಾಧವ ಪೂಜಾರಿ ಕುದುಕೋರಿ, ಹಿರಿಯರಾದ ಗುರುವಪ್ಪ ಪೂಜಾರಿ ಮುಡಿಮಾರು, ನಾರಾಯಣ ಪೂಜಾರಿ ಕೆದುಂಬಾಡಿ ,ಐತಪ್ಪ ಪೂಜಾರಿ ಮುಡಿಮಾರು, ಯುವ ವೇದಿಕೆ ಅಧ್ಯಕ್ಷರಾದ ಚಂದ್ರಹಾಸ ಕೆದುಂಬಾಡಿ, ಮುಂತಾದವರು ಉಪಸ್ಥಿತರಿದ್ದರು. ರವಿ ಮುಡಿಮಾರು ಗುರು ಪೂಜೆಯನ್ನು ನಿರ್ವಹಿಸಿದರು.

