ಮಂಜೇಶ್ವರ: ಪೊಯ್ಯಕಂಡ, ಬಂಗ್ರಮಂಜೇಶ್ವರದ ಶ್ರೀ ಮಲರಾಯ ಬಂಟ ಮತ್ತು ಬೊಬ್ಬರ್ಯ ದೈವಗಳ ದೈವಸ್ಥಾನದ ನೂತನ ಗರ್ಭಗುಡಿ ಹಾಗೂ ಸುತ್ತುಪೌಳಿಯ ಜೀರ್ಣೋದ್ಧಾರ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಮನವಿಪತ್ರ ಬಿಡುಗಡೆ ಕಾರ್ಯಕ್ರಮವು ಆಗಸ್ಟ್ 30ರಂದು ಭಾನುವಾರ ಬೆಳಗ್ಗೆ ನಡೆಯಿತು.


ಶ್ರೀ ಮಲರಾಯ ಮತ್ತು ಪರಿವಾರ ದೈವಗಳ ನೂತನ ಗರ್ಭಗುಡಿ ಹಾಗೂ ಸುತ್ತುಪೌಳಿಯ ಜೀರ್ಣೋದ್ಧಾರವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಭಗವಾನ್ ಶ್ರೀ ನಿತ್ಯಾನಂದ ಸೇವಾ ಸಮಿತಿ, ಮಂಜೇಶ್ವರದ ಅಧ್ಯಕ್ಷರಾದ *ಶ್ರೀ ದಿನಕರ್ ಶೆಟ್ಟಿ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಮೊಕೇಸರರಾದ **ಶ್ರೀ ಲಕ್ಷ್ಮಣ್ ಅಮೀನ್ ಕೋಡಿಕಲ್, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ **ಶ್ರೀ ಸದಾನಂದ ಬಂಗೇರ, ಉಳ್ಳಾಲ ಆಳಸಮುದ್ರ ಬೋಟು ಮಾಲಕರ ಸಂಘದ ಅಧ್ಯಕ್ಷರಾದ **ಶ್ರೀ ದಯಾನಂದ ಪುತ್ರನ್, ಮೊಗವೀರ ಮಹಾಸಭಾ ಉಪ್ಪಳದ ಅಧ್ಯಕ್ಷರಾದ **ಶ್ರೀ ಅಶೋಕ್ ಗುರಿಕಾರ, ಉಳ್ಳಾಲ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ *ಶ್ರೀ ದಯಾನಂದ ಬಂಗೇರ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಮನೋಜ್ ಸಾಲ್ಯಾನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಮಂಜೇಶ್ವರ ಮೊಗವೀರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಆಡಳಿತ ಮೊತ್ತೇಸರರು ಮತ್ತು ಗುರಿಕಾರರು, ಶ್ರೀ ಮಲರಾಯ ಬಂಟ ಮತ್ತು ಬೊಬ್ಬರ್ಯ ದೈವಗಳ ದೈವಸ್ಥಾನದ ಸಮಿತಿ ಸದಸ್ಯರು ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಶತಮಾನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ನೂತನ ಗರ್ಭಗುಡಿ ಮತ್ತು ಸುತ್ತುಪೌಳಿಯ ನಿರ್ಮಾಣದ ಮೂಲಕ ದೈವಸ್ಥಾನದ ಅಭಿವೃದ್ಧಿಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮವು ಭಕ್ತರು, ದೈವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

