ಗುವೇದಪಡ್ಪು : ಬಾಲವೇದಿ ಮಕ್ಕಳಿಗಾಗಿ ಸೃಜನೋತ್ಸವ ಕಾರ್ಯಕ್ರಮ ಪ್ರೇರಣಾ ಸಾರ್ವಜನಿಕ ಗ್ರಂಥಾಲಯ (ರಿ ) ಗುವೇದಪಡ್ಪು ನಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಶಿಕ್ಷಕಿ ಚೈತ್ರ ಶೆಟ್ಟಿ ನೆರವೇರಿಸಿದರು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರುಬೀನಾ ಟೀಚರ್, ಸರಸ್ವತಿ ಕೊಣಿಬೈಲ್,ಜಮೀಲಾ,ಮಾಧವ ಪರಂದಳ, ರತೀಶ್ ಕಾನ,ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ 2025-26 ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಹಾಗೂ,+2 ವಿಭಾಗದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ತದನಂತರ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

ಬಾಲವೇದಿ ಕಾರ್ಯದರ್ಶಿ ಅಂಕಿತಾ ಸ್ವಾಗತಿಸಿ,ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕಿ ಜಯಶ್ರೀ ವಂದಿಸಿದರು.






