ಗ್ರಾಮ ಪಂ. ಹೆಡ್ ಕ್ಲರ್ಕ್ ಮದ್ಯಪಾನ ಮಾಡಿ ವಾಹನ ಚಾಲನೆ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಬಳಿ ಪೊಲೀಸ್ ತಪಾಸಣೆ ವೇಳೆ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

​ಮಂಜೇಶ್ವರ ಗ್ರಾಮ ಪಂಚಾಯತ್ ಹೆಡ್ ಕ್ಲರ್ಕ್, ಕಾಂಜಿರಂಕುಲಂ ಮೂಲದ ಅನೀಶ್ ಕುಮಾರ್ ಕೆ.ಎ (39) ಮತ್ತು ತಯ್ಯನ್ನೂರ್ ಮೂಲದ ರವೀಂದ್ರನ್ ಎ (50) ಆರೋಪಿಗಳು.

​ ಮಂಗಳವಾರ ಸಂಜೆ ಮಂಗ್ಳೂರಿನಿಂದ ಕಾಸರಗೋಡು ಕಡೆಗೆ ಬೈಕ್‌ನಲ್ಲಿ (KL 20 E 0690) ಬರುತ್ತಿದ್ದಾಗ ಪೊಲೀಸರು ತಡೆದರೂ ನಿಲ್ಲಿಸದೆ ತೆರಳಿದ್ದರು.

ಬೈಕ್ ಚಾಲನೆ ಮಾಡುತ್ತಿದ್ದ ಅನೀಶ್ ಕುಮಾರ್ ಮದ್ಯಸೇವಿಸಿದ್ದು, ಹೆಲ್ಮೆಟ್ ಧರಿಸಿರಲಿಲ್ಲ. ಹಿಂಬದಿ ಸವಾರ ರವೀಂದ್ರನ್ ಕೂಡ ಹೆಲ್ಮೆಟ್ ಧರಿಸಿರಲಿಲ್ಲ.

​ಪೊಲೀಸರು ಬೈಕ್ ಅನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದು, ಬಿಎನ್‌ಎಸ್‌ಎಸ್ ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ.

ಮಂಜೇಶ್ವರ ಸಬ್ ಇನ್‌ಸ್ಪೆಕ್ಟರ್ ಶಬರಿ ಕೃಷ್ಣನ್ ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!