ಮಂಜೇಶ್ವರ ಬ್ಲಾಕ್ ಪಂ.ನಲ್ಲಿ ಏಕದಿನ ತರಬೇತಿ ಶಿಬಿರ

ಮಂಜೇಶ್ವರ ಉದ್ಯೋಗಕ್ಕಾಗಿ ಅಲೆದಾಡುವ ಬದಲು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಯುವಕರು ಮೊದಲ ಆದ್ಯತೆ ನೀಡಬೇಕೆಂಬ ಉದ್ದೇಶದೊಂದಿಗೆ ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಲು ಆಸಕ್ತಿ ಹೊಂದಿರುವವರಿಗೂ, ಈಗಾಗಲೇ ನಡೆಸುತ್ತಿರುವ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವವರಿಗೂ ಸರ್ಕಾರದಿಂದ ಲಭ್ಯವಾಗುವ ವಿವಿಧ ಆರ್ಥಿಕ ನೆರವುಗಳು, ಸಾಲಗಳು, ಸಬ್ಸಿಡಿಗಳು ಹಾಗೂ ಇತರ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲು ಮಂಜೇಶ್ವರ ಬ್ಲಾಕ್ ಪಂಚಾಯತ್ ವತಿಯಿಂದ ಏಕದಿನ ತರಬೇತಿ ಶಿಬಿರ ಆಯೋಜಿಸಲಾಯಿತು.

ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕುಚ್ಚಿಕ್ಕಾಡ್ ರವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಪುಲ್ಲಾ ತಂಘಲ್ ಉದ್ಘಾಟಿಸಿದರು.


ಈ ಸಂದರ್ಭ ಉಪಾಧ್ಯಕ್ಷೆ ಶ್ರೀಮತಿ ಕೆ. ಕಮಲಾಕ್ಷಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಮೋಹನ್ ರೈ, ಸದಸ್ಯರಾದ ಜುನೈದ್ ಉರುಮಿ, ನಾಗೇಶ್ ಮಂಜೇಶ್ವರ, ಜ್ಯೋತಿ ಪಿ. ರೈ, ಚಂದ್ರಾವತಿ ಶೆಟ್ಟಿ, ಬೀಫಾತು ಅವರು ಶುಭಾಶಂಸೆಗಳನ್ನು ಸಲ್ಲಿಸಿದರು.


ಅಭಿವೃದ್ಧಿ ಹೊಂದಿದ ದೇಶಗಳು ಈ ವಿಷಯದಲ್ಲಿ ಆ ಹಂತಕ್ಕೆ ತಲುಪಲು ಅಲ್ಲಿನ ಯುವಕರು ಕಾಲಕ್ಕೆ ತಕ್ಕ ಉದ್ಯಮ ಕ್ಷೇತ್ರಗಳಿಗೆ ಪ್ರವೇಶಿಸಿದ್ದೇ ಪ್ರಮುಖ ಕಾರಣವೆಂಬುದಾಗಿ ವೇದಿಕೆಯಲ್ಲಿ ಅಭಿಪ್ರಾಯ ಕೇಳಿ ಬಂತು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯಾಗಿ ದೇವಕುಮಾರ್, ಸಂಯೋಜಕ ವಿಪಿನ್ ಅನಿಲ್ ಕುಮಾರ್ ಹಣಕಾಸು ಸಾಕ್ಷರತಾ ಸಲಹೆಗಾರರಾದ ಸಬೀನ ಅವರು ತರಗತಿಗೆ ನೇತೃತ್ವ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!