‘ಮಹಾಭಾರತ ಧಾರಾವಾಹಿ ಖ್ಯಾತಿಯ ಕರ್ಣನ ಪಾತ್ರಧಾರಿ ನಟ ಪಂಕಜ್ ಧೀರ್ ಇನಿಲ್ಲ

ಮುಂಬೈ: ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿ ಯೋಧ ಕರ್ಣನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟ ಪಂಕಜ್ ಧೀರ್ ಅಕ್ಟೋಬರ್ 15 ರಂದು ನಿಧನರಾದರು. ಅವರ ಹಳೆಯ ಸ್ನೇಹಿತ, ಸಹೋದ್ಯೋಗಿ ಮತ್ತು ಸಿನ್ಮಾ ಸದಸ್ಯ ಅಮಿತ್ ಬೆಕ್ಸ್ ಈ ಸುದ್ದಿಯನ್ನು ದೃಢಪಡಿಸಿದರು.ಮೂಲಗಳ ಪ್ರಕಾರ, ಪಂಕಜ್ ಕೆಲವು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಆ ಕಾಯಿಲೆ ಮತ್ತೆ ಕಾಣಿಸಿಕೊಂಡಿತು, ಇದರಿಂದಾಗಿ ಅವರು ತೀವು ಅಸ್ವಸ್ಥರಾದರು. ಅವರು ಪ್ರಮುಖ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

Read More

ಸಿಲ್ವ‌ರ್ ಜುಬಿಲಿ ಸಂಭ್ರಮದಲ್ಲಿರುವ ಪೇಸ್ ಎಜುಕೇಶನ್ ಗ್ರೂಪ್‌ನಿಂದ ‘ಪೇಸ್ ಸಿಲ್ವಿಯೋರಾ 2025’ ಉತ್ಸವ ಆರಂಭ.

ಮಂಗಳೂರು: ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿ 25 ವರ್ಷಗಳನ್ನು ಪೂರೈಸಿದ ಪೇಸ್ಎಜುಕೇಶನ್ ಗ್ರೂಪ್ ತನ್ನ ಸಿಲ್ವರ್ ಜುಬಿಲಿ ಸಂಭ್ರಮದ ಅಂಗವಾಗಿ ‘ಪೇಸ್ ಸಿಲ್ವಿಯೋರಾ 2025’ ಉತ್ಸವವನ್ನು ಘೋಷಿಸಿದೆ. “ಒಂದು ಪರಂಪರೆಯನ್ನು ಗೌರವಿಸುವುದು, ಭವಿಷ್ಯವನ್ನು ಬೆಳಗಿಸುವುದು” ಎಂಬ ಥೀಮ್‌ ನಡಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮೂರು ತಿಂಗಳ ಕಾಲ ಉತ್ಸವ ಜರುಗಲಿದ್ದು, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ, ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳು ಆಯೋಜನೆಯಾಗಲಿವೆ. ಅಂತಿಮ ಹಂತದ ಸಮಾರಂಭ ಡಿಸೆಂಬರ್ ಕೊನೆಯಲ್ಲಿ ಮಂಗಳೂರಿನ ವೇಸ್ ನೊಲೆಡ್ಜ್ ಸಿಟಿ…

Read More

ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು.

ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.ಬಂಟ್ವಾಳ ಹೊಸ್ಮಾರು ನಿವಾಸಿ ಗೋಪಾಲ ಎಂಬವರ ಪುತ್ರ ಧನುಷ್ (23) ಮೃತಪಟ್ಟ ಯುವಕನಾಗಿದ್ಧಾನೆ. ಸರ್ವೆ ಇಲಾಖೆಯ ಗುತ್ತಿಗೆ ಆಧಾರದ ಉದ್ಯೋಗಿಯಾಗಿರುವ ಈತ ಮಂಗಳೂರು ಕಡೆಯಿಂದ ಬಂಟ್ವಾಳ ಹೊಸ್ಮಾರು ಮನೆಗೆ ಬರುವ ಸಂಜೆ ವೇಳೆ ತುಂಬೆ ಸಮೀತ ರಾಮಲಕಟ್ಟೆ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಕೂಡಲೇ ಆಸ್ಪತ್ರೆಗೆ…

Read More

ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್, ಸಿಡಬ್ಲ್ಯುಎಫ್‌ಐ -ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆಯಿತು.ಬಳಿಕ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ ಫೆಡರೇಶನ್ ರಾಜ್ಯ ಸಮಿತಿಯ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು ಲಕ್ಷಾಂತರ ಜನತೆಗೆ ಸಂಬಂಧಿಸಿ ಆಳುವ ಪಕ್ಷ…

Read More

ಹಾಸನಾಂಭ ಜಾತ್ರೆಯಲ್ಲಿ VIP ವ್ಯವಸ್ಥೆ ಇಲ್ಲದ ಸಾಮಾನ್ಯ ದರ್ಶನಕ್ಕೆ ಆದ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಸಿದ್ದು

ಹಾಸನ: ಹಾಸನಾಂಭ ಜಾತ್ರೆಯಲ್ಲಿ ಯಾವುದೇ ರೀತಿಯ VIP ಪ್ರತಿಷ್ಠೆಗೆ ಮಣೆ ಹಾಕದೆ, ಶ್ರೀಸಾಮಾನ್ಯರ ದರ್ಶನಕ್ಕೆ ಆಧ್ಯತೆ ನೀಡಿದ ಸರ್ಕಾರದ ಪ್ರಯತ್ನದ ಯಶಸ್ಸಿಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು.ಹಾಸನಾಂಭ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ನಾನು ಕಳೆದ ವರ್ಷವೂ ದರ್ಶನ ಪಡೆದಿದ್ದೆ. ಈ ವರ್ಷವೂ ದರ್ಶನ‌ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿಗಾಗಿ,…

Read More

ಕುಂದಾಪುರ: ಕ್ರೇನ್ ಹರಿದು ಯುವಕ ಮೃತ್ಯು

ಉಡುಪಿ: ಕ್ರೇನ್ ಹರಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದೆ. ಮೃತನನ್ನು ತೆಕ್ಕಟ್ಟೆ ಗ್ರಾಮದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಳ್ಳುವ ಸ್ಥಳದಲ್ಲಿ ಖಾಸಗಿ ಬಸ್ ಪ್ರಯಾಣಿಕರನ್ನ ಹತ್ತಿಸಿ ಇಳಿಸುತ್ತಿತ್ತು. ಈ ವೇಳೆ ಬಸ್ ಪಕ್ಕದಲ್ಲಿ ದ್ವಿಚಕ್ರ ಸವಾರ ತಿರುವು ತೆಗೆದುಕೊಳ್ಳಲು ಮುಂದಾಗಿದ್ದಾನೆ.ಆಗ ಏಕಾಏಕಿ ಬಸ್ ಚಲಿಸಿದ ಪರಿಣಾಮ ಆಯತಪ್ಪಿ ದ್ವಿಚಕ್ರ ಸವಾರ ರಸ್ತೆಗೆ ಬಿದ್ದಿದ್ದಾನೆ. ಸವಾರ ಬೀಳುತ್ತಿದ್ದಂತೆ ಆತನ ಮೇಲೆ ಕ್ರೇನ್…

Read More

ಬೇರೆ ಎಲ್ಲಾ ಕೊಡುಗೆಗಳಿಂದಲೂ ನನಗೆ ತೃಪ್ತಿ ತಂದ ಕಾರ್ಯ ಮದ್ಯವರ್ಜನಾ ಶಿಬಿರಗಳು. ಇದರಿಂದ ಲಕ್ಷಾಂತರ ಮಂದಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇದು ಸಮಾಜಕ್ಕೆ ಪ್ರೇರಣೆ ನೀಡುವ ಕೆಲಸವಾಗಿದೆ- ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪುತ್ತೂರಿನಲ್ಲಿ ಹೇಳಿಕೆ

ಪುತ್ತೂರು; ಪಂಚೇಂದ್ರಿಯನ್ನು ಹತೋಟಿಯಲ್ಲಿ ಇಡುವ ಕಾರ್ಯ ಮಾಡಬೇಕಾಗಿದ್ದು, ತರಬೇತಿ ಮೂಲಕ ಇದನ್ನು ಯಶಸ್ವಿಯಾಗಿಸಬಹುದು. ಮದ್ಯ ವ್ಯಸನ ಮುಕ್ತವಾಗುವುದರಿಂದ ಸಂಸಾರಕ್ಕೆ ನೆಮ್ಮದಿ ನೀಡುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು….

Read More

ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೃತ ಬಾಲಕರ ಕುಟುಂಬಕ್ಕೆ ನೆರವು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಸಮುದ್ರಕ್ಕೆ ಈಜಲು ತೆರಳಿ ಮೃತಪಟ್ಟ ಮೂವರು ಬಾಲಕರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದ್ದಾರೆ. ‌ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸ ಹಿತ್ಲು ಬೀಚ್ ನಲ್ಲಿ ಮಂಗಳವಾರ ಈಜಲು ಹೋದ ಸಂಕೇತ್ (16), ಸೂರಜ್ (15 ), ಆಶಿಶ್ (14) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಘಟನೆ ನಡೆದ…

Read More

ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಹೃದಯಾಘಾತದಿಂದ ಕೇರಳದಲ್ಲಿ ನಿಧನ…. !

ಕೊಚ್ಚಿ: ಕೀನ್ಯಾದ ಮಾಜಿ ಪ್ರಧಾನಿ ಬುಧವಾರ ಬೆಳಿಗ್ಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೂತಟ್ಟುಕುಳಂನಲ್ಲಿ ವಾಕಿಂಗ್ ಮಾಡುವಾಗ ಹೃದಯಾಘಾತದಿಂದ ನಿಧನರಾದರು ಎಂದು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.80 ವರ್ಷದ ಓಡಿಂಗಾ ಅವರು ಬೆಳಗಿನ ವಾಕಿಂಗ್ ಸಮಯದಲ್ಲಿ ಕುಸಿದು ಬಿದ್ದಿದ್ದು. ಕೂಡಲೇ ಕೂತಟ್ಟು ಕುಳಂನಲ್ಲಿರುವ ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಬೆಳಿಗ್ಗೆ 9.52 ರ ಸುಮಾರಿಗೆ ನಿಧನರಾದರು ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಆರು ದಿನಗಳ ಹಿಂದೆ ಓಡಿಂಗಾ ಅವರ…

Read More

ಮಿಂಚಿಪದವು ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಅಕ್ಟೋಬರ್ 17 ರಂದು ಕಾವೇರಿ ತೀರ್ಥೋದ್ಭವ ಸಂಭ್ರಮ

ಮಂಗಳೂರು: ಕಾಸರಗೋಡು ಜಿಲ್ಲೆಯ ಮಿಂಚಿಪದವು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಹೊಂದಿಕೊಂಡಿರುವಂತೆ ಪೂರ್ವ ದಿಕ್ಕಿನಲ್ಲಿ ನೈಸರ್ಗಿಕವಾಗಿ ಗುಹಾದ್ವಾರದ ಮೂಲಕ ನಿರಂತರವಾಗಿ ಪ್ರವಹಿಸುವ ಮಾತೃ ಸ್ವರೂಪಿಣಿಯಾದ ಮಾತೆಯ ಸನ್ನಿಧಾನವೇ ಕಾವೇರಿಯಮ್ಮನ ಪುಷ್ಕರಿಣಿ. ಇಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ದಿನಾಂಕ ಅಕ್ಟೋಬರ್ 17 ರ ತುಲಾ ಸಂಕ್ರಮಣದಂದು ಅಪರಾಹ್ನ 1.46 ರ ಶುಭ ವೇಳೆಯಲ್ಲಿ ಕಾವೇರಿ ತೀರ್ಥೋದ್ಭವ ಸಂಭ್ರಮ ನಡೆಯಲಿದೆ ಎಂದು ಕಾವೇರಿಯಮ್ಮ ಬ್ರಹ್ಮಕಲಶ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಮಧುಸೂಧನ್ ಆಯರ್ ತಿಳಿಸಿದರು. ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ…

Read More
error: Content is protected !!