ಕೇರಳದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ- ಕಾಂಗ್ರೆಸ್ ಆರೋಪ
ಕೇರಳದ ಎಡರಂಗ ಸರಕಾರದ ಜನದ್ರೋಹಿ ಆಡಳಿತದಿಂದ ಆರೋಗ್ಯ ಇಲಾಖೆಯು ಐಸಿಯುವಿನಲ್ಲಿ ಚಡಪಡಿಸುತ್ತಿರುವಂತೆ ಭಾಸವಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಲ್ಲ, ವೈದ್ಯರಿದ್ದರೆ ಸಹಾಯಕ ಸಿಬ್ಬಂದಿಗಳಿಲ್ಲ, ಎಲ್ಲವೂ ಇದ್ದರೆ ಔಷಧಿಯಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳಿಲ್ಲ, ರೇಬೀಸ್ ರೋಗಕ್ಕೆ ಬೇಕಾದ ಕನಿಷ್ಠ ಮಟ್ಟದ ಔಷಧಿಗಳ ಕೊರತೆಯ ಕಾರಣ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ, ಆಸ್ಪತ್ರೆಗಳಲ್ಲಿ ಡಾಕ್ಟರ್ ಗಳು ಹತ್ಯೆಗೀಡಾದ ದಾರುಣ ಘಟನೆಯೂ ನಡೆದಿವೆ. ವಿದ್ಯುತ್ ಸಂಪರ್ಕ ಕಡಿತವಾದಾಗ ಜನರೇಟರ್ ಇಲ್ಲದೆ ಕಷ್ಟ ಪಡುತ್ತಿರುವ ನಾಚಿಕೆಗೇಡಿನ ಪರಿಸ್ಥಿತಿ ಇದೆ. ಇವೆಲ್ಲಾ ಕೊರತೆಗಳ ನಡುವೆಯೂ ಎಡರಂಗ…