Headlines

ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಕುರಿಯಾಳದ ವಿಕಲಚೇತನ ಯುವತಿಗೆ ಉದ್ಯೋಗ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಭಿನಂದನೆ.

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕುರಿಯಾಳ ಗ್ರಾಮದ ವಿಕಲಚೇತನ ಪದವೀಧರೆ ಭಾಗ್ಯಶ್ರೀ ಅವರಿಗೆ ಇದೀಗ ಖಾಸಗಿ ಕಂಪೆನಿಯಲ್ಲಿ ಉದ್ಯೋಗಾವಕಾಶ ದೊರೆತಿದೆ.ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಆಳ್ವಾಸ್ ‘ಪ್ರಗತಿ ಉದ್ಯೋಗ ಮೇಳ’ದ ಕುರಿತು ಬಂಟ್ವಾಳದಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗ್ಯಶ್ರೀ ಭಾಗವಹಿಸಿದ್ದರು. ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರೂ ಸೂಕ್ತ ಉದ್ಯೋಗ ದೊರೆಯದೆ ಮನೆಯಲ್ಲೇ ಉಳಿದಿದ್ದ ಅವರಿಗೆ ಉದ್ಯೋಗ ಮೇಳ ಹೊಸ ಅವಕಾಶದ ಬಾಗಿಲು ತೆರೆದಿದೆ. ಉದ್ಯೋಗ…

Read More

ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಆ.13ರಂದು ಬೆಂಗಳೂರಿನಲ್ಲಿ ಸಮಾವೇಶ

ಮಂಗಳೂರು, ಆ.8: ರಾಜ್ಯ ಕಾರ್ಮಿಕ ಇಲಾಖೆ ವಿವಿಧ ಉದ್ಯೋಗಗಳಿಗೆ ಕನಿಷ್ಠ ವೇತನ ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ, ಪರಿಷ್ಕೃತ ವೇತನವನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ಆರೋಪಿಸಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರ ಸಂಘ, ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಆ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಗ್ರಹ ಸಮಾವೇಶ ಆಯೋಜಿಸಿದೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಬಿ. ನಾಗಣ್ಣ ಗೌಡ, ಕಾರ್ಮಿಕರ ವೇತನ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ತಕ್ಷಣ ಕ್ರಮ…

Read More

ಹೊಸಂಗಡಿಯಲ್ಲಿ 136ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

ಶ್ರೀ ಆದಿಶಕ್ತಿ ರಕ್ತೇಶ್ವರಿ ದೇವಸ್ಥಾನ ಹೊಸಂಗಡಿ, ಶಾರದಾ ಆರ್ಟ್ಸ್ ಕಲಾವಿದರು (ರಿ ) ಮಂಜೇಶ್ವರ ಶ್ರೀ ಅಯ್ಯಪ್ಪ ಸೇವಾ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ , ಚಕ್ರವರ್ತಿ (ರಿ )ಹೊಸಂಗಡಿ ಆಶ್ರಯದಲ್ಲಿ, 136ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಆಗಸ್ಟ್ 11ರಿಂದ ಆಗಸ್ಟ್ 26, 2026ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಲಭ್ಯವಿರಲಿದೆ. ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ನಡೆಯಲಿದೆ….

Read More

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಐವನ್ ಡಿಸೋಜಾ ಶ್ಲಾಘನೆ

ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ನಡೆದ ಡೇವಿಡ್ ಡಿಸೋಜಾ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸರ ಕಾರ್ಯವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಐವನ್ ಡಿಸೋಜಾ ಅವರು ಶ್ಲಾಘಿಸಿದ್ದಾರೆ. ಇಂತಹ ಗಂಭೀರ ಘಟನೆಗಳು ನಡೆದ ಸಂದರ್ಭದಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವುದರಿಂದ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ಹತ್ಯೆಯಂತಹ ಕೃತ್ಯ ಎಸಗಿದವರನ್ನು ಕಾನೂನಿನ ಅಡಿಯಲ್ಲಿ ಬಂಧಿಸಿ…

Read More

ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ -ನಮ್ಮ ಹೆಮ್ಮೆ” ಘೋಷಣೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಾಜ್ಯಮಟ್ಟದಲ್ಲಿ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ “

ಮಂಗಳೂರಿನಲ್ಲಿ 1843 ಜುಲೈ 1ರಂದು ಮಂಗಳೂರು ಸಮಾಚಾರ ಎಂಬ ಕನ್ನಡದ ಪ್ರಥಮ ಪತ್ರಿಕೆ ಮುದ್ರಣಗೊಂಡಿತ್ತು. ಕನ್ನಡ ಪತ್ರಿಕೋದ್ಯಮದ 183 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ 2026 ಜುಲೈ 1 ರಿಂದ 2027 ಜುಲೈ 1ರ ತನಕ ದೇಶದಲ್ಲೇ ಪ್ರಪ್ರಥಮವಾಗಿ ಪತ್ರಿಕಾ ಓದುಗರಿಗಾಗಿ “ನಮ್ಮ ಪತ್ರಿಕೆ ನಮ್ಮ ಹೆಮ್ಮೆ” ಘೋಷಣೆಯೊಂದಿಗೆ “ಮನೆ ಮನೆಗೆ ಕನ್ನಡ ಪತ್ರಿಕಾ ಅಭಿಯಾನ”ವನ್ನು ಪ್ರಾರಂಭಿಸಲಾಗಿದೆ. ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು…

Read More

“ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ” ಎಲ್. ಜಿ.ಜ್ಯೋತಿಶ್ವರ ಅಭಿಮತ

ಕಾಸರಗೋಡು:- ಕರ್ನಾಟಕದೊಳಗೆ ಎಲ್ಲೂ ಕಾಣಸಿಗದ ಕನ್ನಡ ಗ್ರಾಮ ಗಡಿನಾಡು ಕಾಸರಗೋಡಿನಲ್ಲಿದೆ ಶಿವರಾಮ ಕಾಸರಗೋಡು ಅವರ ಪರಿಕಲ್ಪನೆಯ ಈ ಕನ್ನಡ ಗ್ರಾಮ ಸಾಹಿತ್ಯ ಸಂಸ್ಕೃತಿ ಕಲೆಗಳಿಗೆ ಆಶ್ರಯ ಧಾಮವಾಗಿದೆ. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸುತ್ತಿರುವ ಪ್ರಧಾನ ಕೇಂದ್ರವಾಗಿ ಕನ್ನಡ ಗ್ರಾಮ ಕಾರ್ಯಾಚರಿಸುತ್ತಿರುವುದು ಅಭಿನಂದನೀಯ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಎಲ್.ಜಿ. ಜ್ಯೋತಿಶ್ವರ ಬೆಂಗಳೂರು ಹೇಳಿದರು. ಮೂರುವರೆ ದಶಕಗಳ ಇತಿಹಾಸವಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಭೇಟಿಯಾಗಲು ಬಂದ ಜ್ಯೋತಿಶ್ವರ…

Read More

ದೈವಾರಾಧನೆ🙏

“ಪಾಸದ ಪಡಿಯರಿ” ದೈವಾರಾಧನೆಯಲ್ಲಿ ಪಾಸಾದ ಪಡಿಯರಿಗೆ ಬಹಳ ಪ್ರಾಮುಖ್ಯತೆ ಇದೆ, ಪಾಸ ಅಂದ್ರೆ ಉಪವಾಸ, ದೈವನರ್ತಕರು ದೈವ ಕೋಲ ಕಟ್ಟುವ ಒಂದು ದಿನ ಮುಂಚೆಯಿಂದ ಉಪವಾಸ ಹಿಡಿದಿರಬೇಕು, ( ಕೆಲವೊಂದು ದೈವಗಳಿಗೆ ಬೇಡ )ಅದಕ್ಕೆ ಅವರು ದೈವ ಕೋಲ ಬಿರಿದ ನಂತರ ಮನೆಗೆ ಹೋಗಿ ಆ ಅಕ್ಕಿಯನ್ನು ಬೇಯಿಸಿ ಊಟ ಮಾಡುತ್ತಾರೆ, ಆಗಿನ ಕಾಲ ಹಾಗಿತ್ತು, ನಮ್ಮ ದೈವ ಕೋಲವನ್ನು ಉಪವಾಸ ಹಿಡಿದು ಕಟ್ಟಿದ ನಂತರ ನರ್ತಕ ಹಸಿವಿನಿಂದ ಇರಬಾರದು ಎಂಬ ಸಂಕಲ್ಪದಿಂದ ದೈವದ ಹೆಸರಲ್ಲಿ ಮೂರು…

Read More

ರಾಜ್ಯದಲ್ಲಿ ಅತ್ಯಂತ ಗಂಭೀರ ಮಳೆಹಾನಿ ಪರಿಸ್ಥಿತಿ: ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್

ರಾಜ್ಯದಲ್ಲಿ ಅತ್ಯಂತ ಗಂಭೀರವಾದ ಮಳೆಹಾನಿ ಪರಿಸ್ಥಿತಿ ಉಂಟಾಗಿದೆ ಎಂದು ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಳೆಹಾನಿಯಿಂದ ಮೃತಪಟ್ಟವರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ವಿಪತ್ತಿನ ಸಂದರ್ಭದಲ್ಲಿ ಜನರು ದಿಕ್ಕುತೋಚದೆ ನಿಂತಿರುವ ದೃಶ್ಯವನ್ನು ಕಾಣಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಸರ್ಕಾರದ ಪರಿಹಾರ ಕಾರ್ಯಗಳಿಗೆ ಪ್ರತಿಪಕ್ಷದ ಸಂಪೂರ್ಣ ಬೆಂಬಲವಿದೆ ಎಂದೂ ಪಿಣರಾಯಿ ವಿಜಯನ್ ವ್ಯಕ್ತಪಡಿಸಿದರು. ಕೇರಳದ ಜನತೆ ಒಗ್ಗಟ್ಟಾಗಿ ನಿಲ್ಲಬೇಕಾದ ಸಮಯ ಇದಾಗಿದೆ. ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದರು. ಜನರಿಗೆ ಸುರಕ್ಷತೆ ಒದಗಿಸುವಲ್ಲಿ ಸರ್ಕಾರದ…

Read More

ನೀಟ್ ಅಕ್ರಮ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಶಶಿ ತರೂರ್ ಟೀಕೆ; ಕಾಂಗ್ರೆಸ್ ಮರುಚಿಂತನೆ ನಡೆಸಬೇಕು

ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರತಿಭಟನೆಯ ವಿಚಾರದಲ್ಲಿ ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್ ಅವರು ರಾಹುಲ್ ಗಾಂಧಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಸಿಜಿಪಿ ಎತ್ತಿದ ಅದೇ ವಿಷಯವನ್ನು ಕಾಂಗ್ರೆಸ್ ಕೂಡ ಕೈಗೆತ್ತಿಕೊಂಡಿತ್ತು. ಆದರೆ, ರಾಹುಲ್ ಗಾಂಧಿ ಈ ವಿಚಾರದಲ್ಲಿ ನಿರೀಕ್ಷಿತ ಮಟ್ಟದ ಪರಿಣಾಮವನ್ನು ಮೂಡಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಮರುಚಿಂತನೆ ನಡೆಸಬೇಕು ಎಂದು ಶಶಿ ತರೂರ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಜಿಪಿ ಈ ವಿಷಯವನ್ನು ಎತ್ತುವ…

Read More

ಚೆನ್ನಭೈರಾದೇವಿಯ ಕಾಲದ ನೆನಪುಗಳನ್ನು ಹೊತ್ತಿರುವ ಐತಿಹಾಸಿಕ ತಾಣ ಹರಡಸೆಯ ಮೆಣಸಿನ ಬಾವಿ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಪಂಚಾಯಿತಿ ವ್ಯಾಪ್ತಿಯಲ್ಲಿ, ದಟ್ಟ ಕಾಡಿನ ನಡುವೆ ಸಾಗುವ ರಸ್ತೆಯಂಚಿನಲ್ಲಿ ಪ್ರಕೃತಿಯ ಮಡಿಲಲ್ಲಿ ಮರೆಯಾಗಿರುವ ಅಪರೂಪದ ತಾಣವೊಂದು ಗಮನ ಸೆಳೆಯುತ್ತದೆ. ಅದೇ ಹರಡಸೆಯ ಮೆಣಸಿನ ಬಾವಿ. ಇಂದು ನೋಡಿದರೆ ಮರಗಳ ಬೇರುಗಳ ನಡುವೆ ಕತ್ತಲಲ್ಲಿ ಕಾಣಿಸುವ ಈ ಬಾವಿ ಸಾಮಾನ್ಯ ಬಾವಿಯಂತೆ ಭಾಸವಾಗಬಹುದು. ಆದರೆ ಸ್ಥಳೀಯರ ಮಾತುಗಳು, ಹಿರಿಯರ ನೆನಪುಗಳು ಮತ್ತು ಐತಿಹ್ಯಗಳನ್ನು ಆಲಿಸಿದಾಗ ಇದರ ಹಿಂದೆ ಒಂದು ರೋಚಕ ಇತಿಹಾಸದ ಕಥೆ ತೆರೆದುಕೊಳ್ಳುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರಾವಳಿ…

Read More
error: Content is protected !!