ಹಸಿರು ವಲಯ ಭೂಸ್ವಾಧೀನ ವಿಳಂಬಕ್ಕೆ ಆಕ್ರೋಶ: ಮೇ 1ರಿಂದ ಧರಣಿ ಎಚ್ಚರಿಕೆ

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಹಸಿರು ವಲಯ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂದಿನ ತೀರ್ಮಾನದಂತೆ ಜಿಲ್ಲಾಡಳಿತದ ಮೂಲಕವೇ ತಕ್ಷಣ ಆರಂಭಿಸಬೇಕು. ಒಂದು ವಾರದೊಳಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದಲ್ಲಿ ಮೇ 1ರಿಂದ ಎಂಆರ್‌ಪಿಎಲ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಬುಧವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಪರ್ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗೆ…

Read More

ಕುಕ್ಕಾಜೆಯಲ್ಲಿ ಭೀಕರ ಅಪಘಾತ: ಬೈಕ್ ಸಹಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ ತಾಲ್ಲೂಕಿನ ಕುಕ್ಕಾಜೆ ಪ್ರದೇಶದಲ್ಲಿ ಗೂಡ್ಸ್ ರಿಕ್ಷಾ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರನು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನು ಕುಕ್ಕಾಜೆಯ ಪಂಜಾಜೆ ನಿವಾಸಿ ಮನೀಶ್ (23) ಎಂದು ಗುರುತಿಸಲಾಗಿದೆ. ಅವರು ಸ್ನೇಹಿತ ಉದಯ ಅವರೊಂದಿಗೆ ಮೆಲ್ಕಾರ್ ಕಡೆಯಿಂದ ಕುಕ್ಕಾಜೆಯ ತಮ್ಮ ಮನೆಯತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ವೇಳೆ ಮನೀಶ್ ರಸ್ತೆ ಮೇಲೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಬೈಕ್…

Read More

ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ದಂಪತಿಗಳಿಗೆ “ಗಡಿನಾಡು ಕನ್ನಡ ಪೋಷಕ “ಪ್ರಶಸ್ತಿ

ಕಾಸರಗೋಡು : ಮಂಗಳೂರಿನ ಖ್ಯಾತ ಕನ್ನಡ ಸಂಘಟಕಿಯಾದ ರಾಣಿ ಪುಷ್ಪಲತಾ ದೇವಿ ಅಧ್ಯಕ್ಷೆಯಾದ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ರಿ.)25.4.2026.ಶನಿವಾರ ಸಂಜೆ ಗಂಟೆ 5.30 ರಿಂದ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕ್ ನಲ್ಲಿ ನಡೆಯುವ “ಕನ್ನಡ ಜೇಂಕಾರ “ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕನ್ನಡ ಭವನ “ಉಚಿತ ವಸತಿ ಸೌಕರ್ಯ “, ಕನ್ನಡ ಭವನ…

Read More

ಮಂಜೇಶ್ವರ : ಕುಂಡು ಕೊಳಕೆ ಸಮುದ್ರ ಕಿನಾರೆಯಲ್ಲಿ ಕೊಚ್ಚಿ ಹೋದ ಯುವಕ : ಮುಂದುವರಿದ ತೀವ್ರ ಶೋಧ

ಮಂಜೇಶ್ವರ: ಇಲ್ಲಿನ ಕುಂಡುಕೊಳಕೆ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದ್ದು, 18 ವರ್ಷದ ಯುವಕನೊಬ್ಬ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ. ​ಮಂಜೇಶ್ವರ ಚೌಕಿ ನಿವಾಸಿಗಳಾದ ಉಮರುಲ್ ಫಾರೂಕ್ ಮತ್ತು ರಝೀನಾ ದಂಪತಿಗಳ ಪುತ್ರ ಮೊಹಮ್ಮದ್ ಝೈನುಲ್ ಹಾಬಿದ್ ಸಮುದ್ರದಲ್ಲಿ ನಾಪತ್ತೆಯಾದ ದುರ್ದೈವಿ. ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದ ಝೈನುಲ್ ಹಾಬಿದ್, ಬುಧವಾರ ಸಂಜೆ ತನ್ನ ಕುಟುಂಬದವರೊಂದಿಗೆ ಮನಃಶಾಂತಿಗಾಗಿ ಮತ್ತು ವಿಹಾರಕ್ಕಾಗಿ ಸಮುದ್ರ ಕಿನಾರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲೆಗಳ ಸುಳಿಗೆ ಸಿಲುಕಿದ ಯುವಕ…

Read More

ಗೋವಾದ ಪಣಜಿಯಲ್ಲಿ ರಾಷ್ಟ್ರೀಯ ಕನ್ನಡ ಸಮ್ಮೇಳನ: ನಾಡು-ನುಡಿಗೆ ಸೇವೆ ಶ್ರೇಷ್ಠ ಕಾರ್ಯ – ಡಾ. ಸುಬ್ರಮಣಿ

ಪಣಜಿ: ಗೋವಾದ ಪಣಜಿಯಲ್ಲಿ ನಡೆದ 21ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಯಶಸ್ವಿಯಾಗಿ ನೆರವೇರಿದ್ದು, ನಾಡು-ನುಡಿಗೆ ಸೇವೆ ಸಲ್ಲಿಸುವ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.ವಿಷ್ಣು ನಾಯ್ಕ್ ವೇದಿಕೆ – ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ 21ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ ಸುಬ್ರಮಣಿ (ಪಲ್ಲವಿ ಮಣಿ) ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾಡು-ನುಡಿಗೆ ಸೇವೆ ಸಲ್ಲಿಸುವುದು ಒಂದು ಶ್ರೇಷ್ಠ ಕಾರ್ಯ ಹಾಗೆ ನಡೆದುಕೊಂಡಾಗ ಒಬ್ಬ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ. ನಾಡು ನುಡಿ ಮತ್ತು ಸಂಸ್ಕೃತಿಗಳಿಗೆ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ…

Read More

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶೈಕ್ಷಣಿಕ ಕ್ರಾಂತಿ: ಹೊಸ ಸೌಲಭ್ಯಗಳಿಗೆ ಚಾಲನೆ

ಮಂಜೇಶ್ವರ : ಗಡಿನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಪೀಸ್ ಕ್ರಿಯೇಟಿವ್ ಶಾಲೆ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿರುವ ಶಾಲಾ ಆಡಳಿತ ಮಂಡಳಿಯು, ಲೌಕಿಕ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಂಸ್ಕಾರಯುತ ಶಿಕ್ಷಣಕ್ಕೆ ಭರ್ಜರಿ ತಯಾರಿಗೆ ಚಾಲನೆ ನೀಡಿದೆ. ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಕ್ರೀಡಾಸಕ್ತಿಗೆ ರೆಕ್ಕೆ ನೀಡುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಅತ್ಯುತ್ತಮ ಮಟ್ಟದ ಫುಟ್ಬಾಲ್ ಟರ್ಫ್, ಬಾಸ್ಕೆಟ್ ಬಾಲ್, ವಾಲಿಬಾಲ್ ಸೇರಿದಂತೆ…

Read More

ಅಡುಗೆ ಅನಿಲ ಕೊರತೆ, ಬೆಲೆ ಏರಿಕೆ: ಕೇಂದ್ರ ಸರ್ಕಾರ ವಿರುದ್ಧ ರಮಾನಾಥ ರೈ ಕಿಡಿ

ಮಂಗಳೂರು :ಕೇಂದ್ರ ಸರಕಾರದ ವೈಫಲ್ಯದಿಂದ ದೇಶದಲ್ಲಿ ಅಡುಗೆ ಅನಿಲ ಸರಿಯಾಗಿ ಪೂರೈಕೆಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು‌ ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳೂರಿನಲ್ಲಿ‌ ಕಾಂಗ್ರೆಸ್ ಆಯೋಜಿಸಿದ್ದ ಅಡುಗೆ ಅನಿಲ ದರ ಏರಿಕೆ ವಿರುದ್ದದ ಪ್ರತಿಭಟನೆಯಲ್ಲಿ‌‌ ಪಾಲ್ಗೊಂಡು ಮಾತನಾಡಿದ ರೈ ಕೇಂದ್ರ ಸರಕರದ ಅಸ್ಪಷ್ಟ ವಿದೇಶಾಂಗ ನೀತಿಯೇ ಇದಕ್ಕೆ ಕಾರಣ ಎಂದು ಆರೋಪಿಸಿದರು. ದೇಶದ ಆರ್ಥಿಕ ಪ್ರಸಕ್ತ ಪರಿಸ್ಥಿತಿ ಚೆನ್ನಾಗಿಲ್ಲ. ಬೆಲೆ ಏರಿಕೆಯಿಂದ ಜನರು ಕೂಡ ಕಂಗಾಲಾಗಿದ್ದಾರೆ. ಆದರೂ…

Read More

“ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುವ ರಂಗೋತ್ಸವ 2026: ರಂಗ ಸ್ವರೂಪದ ಬೇಸಿಗೆ ಶಿಬಿರಕ್ಕೆ ಚೇತನ್ ಕೊಪ್ಪ ಚಾಲನೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಸ್ವರೂಪ(ರಿ) ಕುಂಜತ್ತಬೈಲ್,ಮಂಗಳೂರು ಇದರ ವತಿಯಿಂದ ರಂಗ ಸ್ವರೂಪ ‘ರಂಗೋತ್ಸವ’ 2026 ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ ದ.ಕ ಜಿ.ಪಂ ಮಾ.ಹಿರಿಯ ಪ್ರಾಥಮಿಕ ಶಾಲೆ ಮರಕಡ, ಕುಂಜತ್ತಬೈಲ್ ಇಲ್ಲಿ ರಂಗ ಸ್ವರೂಪ ತಂಡದ ಉಪಾಧ್ಯಕ್ಷರಾದ ಹುಸೈನ್ ರಿಯಾಝ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಖ್ಯಾತ ಕಲಾವಿದ ಪ್ರಶಸ್ತಿ ವಿಜೇತ ಶಿಕ್ಷಕ ಚೇತನ್ ಕೊಪ್ಪ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ,ಇತಿಹಾಸ ಮನುಷ್ಯ ನಿಗೆ ಪಾಠ ಕಲಿಸುತ್ತದೆ. ರಂಗಸ್ವರೂಪ…

Read More

ಉಳ್ಳಾಲದಲ್ಲಿ ಭೂಗತ ಕೇಬಲ್ ಯೋಜನೆಗೆ ಚಾಲನೆ

ಮಂಗಳೂರು:ಉಳ್ಳಾಲ ನಗರ ಪ್ರದೇಶ ಹಾಗೂ ಮಂಗಳೂರು ನಗರದ ಆಯ್ದ ಭಾಗಗಳಲ್ಲಿ ಭೂಗತ (ಅಂಡರ್‌ಗ್ರೌಂಡ್) ಕೇಬಲ್ ಅಳವಡಿಸುವ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.ನಗರದ ಮೆಸ್ಕಾಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಕ್ಕೊಟ್ಟು 33 ಕೆವಿ ಉಪಕೇಂದ್ರವನ್ನು 110 ಕೆವಿಗೆ ಅಪ್‌ಗ್ರೇಡ್ ಮಾಡುವ ಕಾರ್ಯ ಟೆಂಡರ್ ಹಂತದಲ್ಲಿದೆ ಎಂದರು. ಕೊಣಾಜೆ ಉಪಕೇಂದ್ರದಲ್ಲಿ ಹೆಚ್ಚುವರಿ 110/33 ಕೆವಿ, 20 ಎಂವಿಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಹೆಚ್ಚುವರಿ ಭೂಮಿ…

Read More

ಅಪಪ್ರಚಾರಕ್ಕೆ ಅನಿ ಮಂಗಳೂರು ತಿರುಗೇಟು: ಕಿಡ್ನಾಪ್, ಹಣ ವಸೂಲಿ ಆರೋಪ ಸಂಪೂರ್ಣ ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಮಂಗಳೂರಿನ ‘ಅನಿ ಕೆಫೆ’ ಮಾಲೀಕಿ ಹಾಗೂ ಮಂಗಳಮುಖಿ ಅನಿ ಮಂಗಳೂರು ಸ್ಪಷ್ಟನೆ ನೀಡಿದ್ದಾರೆ.ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿಲ್ ಕುಮಾರ್ ಎಂಬಾತ ತಮ್ಮ ಮೇಲೆ ಕಿಡ್ನಾಪ್, ದೌರ್ಜನ್ಯ ಹಾಗೂ ಹಣ ವಸೂಲಿಯ ಆರೋಪಗಳನ್ನು ಮಾಡುತ್ತಿರುವುದು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರೋ ಸಂಚು ರೂಪಿಸಿದ್ದು, ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಮೈಸೂರಿನ ಸಬರ್ ಬಸ್ ಸ್ಟ್ಯಾಂಡ್‌ನಿಂದ…

Read More
error: Content is protected !!