ಸೌದಿ ಅರೇಬಿಯಾ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರಾಯಭಾರಿ ಡಾ. ಸುಹೇಲ್ ಐಜಾಝ್ ಖಾನ್ ಅವರೊಂದಿಗೆ ಝಕರಿಯಾ ಜೋಕಟ್ಟೆ ಸಭೆ
ರಿಯಾದ್: ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲು, ಸೌದಿ ಅರೇಬಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ರಾಯಭಾರಿಯಾಗಿರುವ ಡಾ. ಸುಹೇಲ್ ಐಜಾಝ್ ಖಾನ್ ಅವರೊಂದಿಗೆ ಝಕರಿಯಾ ಜೋಕಟ್ಟೆ ಗೌರವಪೂರ್ವಕ ಸಭೆ ನಡೆಸಿದರು. ಭಾರತೀಯ ಸಮುದಾಯದ ಹಕ್ಕುಗಳು, ಸುರಕ್ಷತೆ ಹಾಗೂ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಈ ವೇಳೆ ಅಲ್ ಮುಝೈನ್ ಕಂಪನಿಯ ಸಿಇಒ ಝಕರಿಯಾ ಜೋಕಟ್ಟೆ, ಉದ್ಯಮಿ ಅಯಾಜ್…
