ಕುಂಜತ್ತೂರಿನ ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ವಾರ್ಷಿಕ ಶಾಲಾ ಕ್ರೀಡೋತ್ಸವ.
ಮಂಜೇಶ್ವರ : ಕುಂಜತ್ತೂರಿನ ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ಶುಕ್ರವಾರದಂದು ವಿಜೃಂಭಣೆಯಿಂದ ವಾರ್ಷಿಕ ಶಾಲಾ ಕ್ರೀಡೋತ್ಸವ ನಡೆಯಿತು. ಶಾಲೆಯ ಆವರಣವೇ ಕ್ರಿಯಾಶೀಲತೆಯಿಂದ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಕೆ.ಬಿ ಅವರು ಧ್ವಜಾರೋಹಣದ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಸಮೂಹ ಗಾಯನದಿಂದ ಉದ್ವೇಗಕಾರಿ ವಾತಾವರಣ ನಿರ್ಮಾಣವಾಯಿತು. ಆತಿಥ್ಯ ವಹಿಸಿದ್ದ ಶ್ರೀನಿವಾಸ್ ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಹಾಗೂ ಎಸ್‌ಪಿಸಿ ಘಟಕದ ಶ್ರೀ ರಂಜಿತ್…