ವಿಧಾನಸಭಾ ಚುನಾವಣೆಗೆ ವಾರಗಳಷ್ಟೇ ಬಾಕಿ ಎಣ್ಮಕಜೆ ಮುಂಡ್ಯತಡ್ಕ ಪಳ್ಳತ್‌ನಲ್ಲಿ ಎಕೆಎಂ ಅಶ್ರಫ್ ಕ್ಷೇತ್ರ ಪರ್ಯಟನೆಗೆ ಚಾಲನೆ
ಪೆರ್ಲ:ಬೇಸಿಗೆಯ ಬಿಸಿ ಸುಡುತ್ತಿರುವಾಗ ಕೇರಳ ವಿಧಾನಸಭಾ ಚುನಾವಣೆಯ ಬಿಸಿ ಮುಗಿಲು ಮುಟ್ಟಿದೆ.ಸುಡು ಬಿಸಿಲಿನಲ್ಲಿಯೂ ಪ್ರಚಾರ ಸಭೆ ಭರದಿಂದ ಸಾಗುತ್ತಿದೆ.ಕುತೂಹಲ ಮೂಡಿಸಿದ ಮಂಜೇಶ್ವರ ಕ್ಷೇತ್ರದಲ್ಲಿಯೂ ಚುನಾವಣಾ ಚಟುವಟಿಕೆ ಮುಂದುವರಿದಿದೆ. ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಕ್ಷೇತ್ರ ಪ್ರವಾಸವು ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮುಂಡ್ಯತಡ್ಕ ಪಳ್ಳತ್ ನಲ್ಲಿ ಆರಂಭವಾಯಿತು.ಸಂಸದ ರಾಜ್ ಮೋಹನ್ ಉನ್ನಿಥಾನ್ ಉದ್ಘಾಟಿಸಿದರು.ಯುಡಿಎಫ್ ಕ್ಷೇತ್ರದ ಸಂಚಾಲಕ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಅಜೀಜ್ ಮೆರಿಕೆ ಸ್ವಾಗತಿಸಿದರು.ಪುತ್ತೂರು ಶಾಸಕ ಅಶೋಕ್ ರೈ, ಕರ್ನಾಟಕ ಪಿಸಿಸಿ…
