ಬ್ರಹ್ಮಾವರ: ಲಾಡ್ಜ್ ನಲ್ಲಿ‌ ಅಂದರ್ ಬಾಹರ್- ಆರು ಮಂದಿಯ‌ ಬಂಧನ

ಉಡುಪಿ: ಬ್ರಹ್ಮಾವರ ಲಾಡ್ಜ್‌ವೊಂದರ ರೂಮಿನಲ್ಲಿ ಜು.31ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿ ಆರೋಪಿಗಳನ್ನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗೋಪಾಲ, ರಮೇಶ್, ಅಭಿಲಾಷ, ವಿಕ್ರಮ್, ರತ್ನಾಕರ, ಹುಸೇನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು ನಗದು 2,38,000ರೂ. ನಗದು, ಐದು ಮೊಬೈಲ್ ಫೋನ್‌ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪುರ: ದನ ಕಳವು ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಉಡುಪಿ: ಕುಂದಾಪುರ ತಾಲೂಕಿನ ಕಾಳಾವರ ಜಂಕ್ಷನ್‌ನಲ್ಲಿ ಮೂರು ದಿನಗಳ ಹಿಂದೆ ದನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು ಕುಂದಾಪುರ ಪೊಲೀಸರು ಆ.1ರಂದು ಬಂಧಿಸಿದ್ದಾರೆ. ಗುಲ್ವಾಡಿಯ ಅಬೂಬಕರ್(39), ಮಹಮ್ಮದ್ ರಫೀಕ್(36), ಯಾಕೂಬ್(24), ತಲ್ಲೂರು ಕೋಟೆ ಬಾಗಿಲಿನ ಸುನಿಲ್(33) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 5,00,000ರೂ. ಎಂದು ಅಂದಾಜಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

ವೆನ್‌ಲಾಕ್‌ ಆಸ್ಪತ್ರೆಯ ಒಪಿಡಿ ನವೀಕರಣ ಶಿಲನ್ಯಾಸ ಶೀಘ್ರ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು : ವೆನ್‌ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಅಮೂಲಾಗ್ರ ಬದಲಾವಣೆಯೊಂದಿಗೆ ನವೀಕರಣಗೊಳಿಸಲಾಗುತ್ತಿದ್ದು, ನವೆಂಬರ್‌ನಲ್ಲಿ ಶಿಲಾನ್ಯಾಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಹೇಳಿದರು. ವೆನ್‌ಲಾಕ್‌ನ ಆರ್‌ಎಪಿಸಿಸಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೆನ್‌ಲಾಕ್‌ನ ಒಪಿಡಿ ಬ್ಲಾಕ್ ನವೀಕರಣಕ್ಕೆ ಸರಕಾರದಿಂದ ಈಗಾಗಲೇ 70 ಕೋಟಿ ರೂ. ಒದಗಿಸಲಾಗಿದ್ದು, ಆಸ್ಪತ್ರೆಯ ಅಮೂಲಾಗ್ರ ಬದಲಾವಣೆಯೊಂದಿಗೆ ಸುಸಜ್ಜಿತ ರೀತಿಯಲ್ಲಿ ನವೀಕರಣಗೊಳಿಸುವ ಅಗತ್ಯ ರೂಪುರೇಷೆಗಳನ್ನು ಒದಗಿಸುವಂತೆ ಅವರು ಸಭೆಯಲ್ಲಿ…

Read More

ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಸುರತ್ಕಲ್ ಬಜ್ಪೆ ಸೇರಿ 14 ಸ್ಥಳಗಳಲ್ಲಿ ಎನ್‌ಐಎ ಮಿಂಚಿನ ದಾಳಿ !

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆಗಸ್ಟ್ 2 ರ ಶನಿವಾರ ಸುರತ್ಕಲ್ ಮತ್ತು ಬಜ್ಪೆ ಪೊಲೀಸ್ ವ್ಯಾಪ್ತಿಯ ಹಲವು ಸ್ಥಳಗಳಲ್ಲಿ ಮಿಂಚಿನ ದಾಳಿಯನ್ನು ನಡೆಸಿದೆ . ಮೂಲಗಳ ಪ್ರಕಾರ, ಎನ್‌ಐಎ ಅಧಿಕಾರಿಗಳು ಬಂಧಿತ ಆರೋಪಿಗಳ ನಿವಾಸಗಳು ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ದಾಳಿ ಪ್ರಾರಂಭವಾಯಿತು ಎಂದು ವರದಿಯಾಗಿದೆ.ಮೇ 1 ರ ಸಂಜೆ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸುಹಾಸ್ ಶೆಟ್ಟಿ…

Read More

‘ದಿ ಕೇರಳ ಸ್ಟೋರಿ’ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡನೆ

ತಿರುವನಂತಪುರ: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಸುದಿತ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ಹಾಗೂ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ನೀಡಿರುವುದನ್ನು ಕೇರಳದ ಸಿಎಂ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಕೋಮುವಾದ ಪ್ರಚೋದಿಸಲು ಹಾಗೂ ಕೇರಳಕ್ಕೆ ಅವಹೇಳನ ಮಾಡಲು ಯತ್ನಿಸಿದ್ದ ಸಿನಿಮಾವನ್ನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ…

Read More

ಅಕ್ರಮ ಮರಳು ಅಡ್ಡೆಗೆ ಧಾಳಿ ನಡೆಸಿದ ವಿಟ್ಲ ಠಾಣಾ ಪೊಲೀಸರು

ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಅಡ್ಡೆಗೆ ವಿಟ್ಲ ಪೋಲೀಸರ ತಂಡ ದಾಳ ನಡೆಸಿದ್ದು ಅರೋಪಿಗಳ ಸಹಿತ ಮರಳುಗಾರಿಕೆಗೆ ಬಳಸಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ, ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ, ಆರೋಪಿತನಾದ ಅಬ್ದುಲ್‌ ಸಮದ್‌ ಎಂಬಾತನು ಹೊಳೆಯಿಂದ ಯಂತ್ರದ ಮೂಲಕ ಮರಳನ್ನು ಅಕ್ರಮವಾಗಿ ತೆಗೆದು ಸಂಗ್ರಹಿಸಿಟ್ಟಿರುವ ಬಗ್ಗೆ ದೂರಿನ‌ ಹಿನ್ನೆಲೆಯಲ್ಲಿ ವಿಟ್ಲ ಪೋಲೀಸರಿಂದ ದಾಳಿ ನಡೆದಿದೆ. ಕೇರಳ ಗಡಿಭಾಗದಿಂದ ಅಂದಾಜು ಒಂದು ಕಿ.ಮೀ ದೂರದ ಸಾಲೆತ್ತೂರು ಕಟ್ಟತ್ತಿಲ ಹೊಳೆಯ ಸೇತುವೆ ಬಳಿ, ಸುಮಾರು 2 ರಿಂದ 3 ಪಿಕಪ್‌…

Read More

ಪ್ರಜ್ಞೆ ತಪ್ಪಿ ಬಿದ್ದ ಸರಕಾರಿ ಬಸ್ ನಿರ್ವಾಹಕಸಮಯ ಪ್ರಜ್ಞೆ ತೋರಿ ಜೀವ ಉಳಿಸಿದ ಚಾಲಕ,ಆಸ್ಪತ್ರೆಯ ಚೇರ್ ಮೆನ್ ರಿಂದ ಚಾಲಕನಿಗೆ ಸನ್ಮಾನ

ಮಂಗಳೂರು: ಚಲಿಸುತ್ತಿದ್ದ ಬಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಬಸ್ ನಿರ್ವಹಕನನ್ನು ತಕ್ಷಣ ನೇರವಾಗಿ ಸಮೀಪದ ಆಸ್ಪತ್ರೆಗೆ ಚಲಾಯಿಸಿ ಎಮರ್ಜೆನ್ಸಿ ಯಲ್ಲಿ ಕ್ಲಪ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ನಿರ್ವಾಹಕನ ಜೀವ ಉಳಿಸಿದ್ದಾರೆ. ಒಂದು ಜೀವ ಉಳಿಸಿದ ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚಿದ ಆಸ್ಪತ್ರೆಯ ಚೇರ್ ಮೆನ್ ಸೂಚನೆ ಮೇರೆಗೆ ಸಿಬ್ಬಂದಿ ಸನ್ಮಾಸಿದ್ದಾರೆ. ಶುಕ್ರವಾರ ಬೆಳಗ್ಗೆ 8.00ಗಂಟೆ ಮುಡಿಪುವಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ನಿರ್ವಾಹಕ ಸಂಜೀವ್ ಪ್ರಯಾಣಿಕರಿಗೆ ಟಿಕೆಟ್ ನೀಡಿ ದರ ವಸೂಲಿ ಮಾಡುತ್ತಿದ್ದನಂತೆ….

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆ – ಮೂರನೆ ವರ್ಷಕ್ಕೆ ಪಾದಾರ್ಪಣೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯೋಜನೆಗಳಲ್ಲಿ ಒಂದಾದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಯಕ್ಷಗಾನ ಕಲೆಯನ್ನು‌ ಶೈಕ್ಷಣಿಕ ಆಯಾಮದೊಂದಿಗೆ ಪರಿಚಯಿಸಬೇಕೆಂದುಕೊಂಡು 2023ರಲ್ಲಿ ಕಾರ್ಯರೂಪಕ್ಕೆ ಬಂದ ಈ ಯೋಜನೆಯು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ಮುಂದುವರಿಯುತ್ತಿದೆ. ಆರಂಭದಲ್ಲಿ ದ.ಕ ಜಿಲ್ಲೆಯ ಒಟ್ಟು 38 ಶಾಲೆಗಳಲ್ಲಿ ಪ್ರಾರಂಭವಾದ ಈ ಯೋಜನೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು ನಾಲ್ಕು ಜಿಲ್ಲೆಯ 87 ಶಾಲೆಗಳು ಒಳಪಟ್ಟಿದ್ದವು. ಈ ಬಾರಿ ದ.ಕ…

Read More

ಪುತ್ತೂರಿನ ಕೂರ್ನಡ್ಕದಲ್ಲಿ ಹಲವಾರು ಹಿರಿಯರು ಮತ್ತು ಯುವಕರು SDPI ಪಕ್ಷಕ್ಕೆ ಸೇರ್ಪಡೆ.

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವು ಕೂರ್ನಡ್ಕದಲ್ಲಿ ನಡೆಯಿತು. ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ ಸವಿಸ್ತಾರವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಸುಮಾರು 22 ಮಂದಿ ಹಿರಿಯರು ಮತ್ತು ಯುವಕರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ…

Read More

ರಾಜ್ಯದಲ್ಲಿ ವರ್ಷಕ್ಕೆ 2 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ- ಸಂಸದ ಕೋಟ ಆತಂಕ,

ಉಡುಪಿ : ರಾಜ್ಯದಲ್ಲಿ ವರ್ಷಕ್ಕೆ 2000 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ ಅನ್ನೋದು ಬೇಸರದ ಸಂಗತಿ. ಅನುದಾನಿತ ಶಾಲೆಗಳು ಮಲತಾಯಿ ಧೋರಣೆಗೆ ಸಿಲುಕಿರುವ ಬಡ ಮಕ್ಕಳ ಶಾಲೆ. ನಮ್ಮೂರಿಗೆ ಶಿಕ್ಷಣ ನೀಡುವ ಉದ್ಧೇಶಕ್ಕೆ ಅನುದಾನಿತ ಶಾಲೆಗಳು ಪ್ರಾರಂಭವಾಗಿದೆ. 48000 ಸರಕಾರ ಶಾಲೆಗಳ ಜೊತೆ 2400 ಅನುದಾನಿತ ಶಾಲೆಗಳನ್ನು ಸರಕಾರವೇ ನಡೆಸಲಿ ಎನ್ನುವುದು ನಮ್ಮ ಬಹುಕಾಲದ ಬೇಡಿಕೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಹೆಗ್ಗುಂಜೆ…

Read More
error: Content is protected !!