ಕಾಸರಗೋಡಿನ ಕನ್ನಡದುಳಿವಿಗಾಗಿ ಮಡಿದ ಶಾಂತಾರಾಮ ಶೆಣೈ – ಸುಧಾಕರ ಅಗ್ಗಿತ್ತಾಯರ ಬಲಿದಾನ ಮತ್ತು ಮರೆತುಹೋದ ‘ಮಹಾಜನ’ ನ್ಯಾಯ
(ಮೂಕ ಸಾಕ್ಷಿಯಾಗಿ ನಿಂತಿರುವ ಕಾಸರಗೋಡಿನ ಮಲ್ಲಿಕಾರ್ಜುನ ದೇವಳದ ಪರಿಸರ) ಕಾಸರಗೋಡು ಎಂದರೆ ಅದು ಕೇವಲ ಮಲಯಾಳ ಮತ್ತು ಕನ್ನಡದ ಭಾಷಾ ಸಂಗಮದ ಭೂಮಿಯಲ್ಲ; ಅದು ಕನ್ನಡದ ಅಸ್ಮಿತೆಗಾಗಿ ಹಸಿರಕ್ತದ ಪವಿತ್ರ ತರ್ಪಣವಿತ್ತ ಪುಣ್ಯನೆಲೆ! 1956ರ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಸಂದರ್ಭದಲ್ಲಿ, ಶೇ. 90ಕ್ಕೂ ಹೆಚ್ಚು ಕನ್ನಡಿಗರಿದ್ದ ಈ ಮಣ್ಣನ್ನು ಕೇವಲ ಆಡಳಿತಾತ್ಮಕ ಹಿತಾಸಕ್ತಿಗಾಗಿ ಕೇರಳದ ತೆಕ್ಕೆಗೆ ತಳ್ಳಿದ್ದು ಭಾರತದ ಗಡಿ ಇತಿಹಾಸದ ಅತಿದೊಡ್ಡ ಅನ್ಯಾಯಗಳಲ್ಲೊಂದು.ಈ ಅನ್ಯಾಯದ ವಿರುದ್ಧ ಸಿಡಿದೆದ್ದ ಕನ್ನಡಿಗರ ಹೋರಾಟಕ್ಕೆ ಏಳು ದಶಕಗಳ ಸುದೀರ್ಘ ಇತಿಹಾಸವಿದೆ….
