ಶ್ರೀ ರಾಮ ಎ.ಯು.ಪಿ ಶಾಲೆ ಕುಬಣೂರಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಕುಬಣೂರು ಜುಲೈ 12 : ಶ್ರೀ ರಾಮ ಎ.ಯು.ಪಿ ಶಾಲೆ ಕುಬಣೂರಿನಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮೀನಾರು ಪಕ್ಕೀರ ಶೆಟ್ಟಿ ಸಭಾಂಗಣದಲ್ಲಿ ಜರಗಿತು. ತಾರಾಮಣಿ ಟೀಚರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವಾರ್ಡ್ ಸದಸ್ಯರಾದ ವಿಜಯ ಕುಮಾರ್ ರೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಸುರೇಶ್ ಕುಮಾರ್ ಮಂಗಲ್ಪಾಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡಿದರು. ಯು ಎಸ್ ಎಸ್ ಪ್ರತಿಭಾನ್ವಿತರಾದ ತನ್ವಿತ್ ಪಿ ಶೆಟ್ಟಿ, ವಿವೇಕ್, ಚಿನ್ಮಯಿ ಹಾಗೂ…
