ನಗದು ಕಳ್ಳತನ ಕೇಸ್: ವ್ಯಕ್ತಿ ಅರೆಸ್ಟ್
ಮಂಗಳೂರು ನಗರದ ಪೊಲೀಸರು ನಗದು ಕಳವು ಪ್ರಕರಣವನ್ನು ಭೇಧಿಸಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ ಆರೋಪಿತನನ್ನು ಬಂಧಿಸಿದ್ದಾರೆ.ಮಹಮ್ಮದ್ ನಿಜಾಮುದ್ದಿನ್ ಎಂಬವರು ದಿನಾಂಕ 07/02/2026 ರಂದು ಶ್ರೀಧರ ಆಳ್ವರವರಿಗೆ ಸೇರಿದ ಅಡಿಕೆಯನ್ನು ಕೆಎ-19-AE-8663 ನೇ ಟಾಟಾ ಇಂಟ್ರಾ ವಾಹನದಲ್ಲಿ ತುಂಬಿಸಿಕೊಂಡು ಬೀಬಿ ಅಲಾಬಿಯಲ್ಲಿರುವ ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿ ಅವರು ನೀಡಿದ 1,28740ನ್ನು ತನ್ನ ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟು ವಾಹನವನ್ನು ಚಲಾಯಿಸಿಕೊಂಡು 10.30ಕ್ಕೆ ಬಂದರ್ ನ ಜೆ.ಎಂ.ರೋಡ್ ನಲ್ಲಿರುವ ಸದರ್ನ್ ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿ ಮಾಡಿ…