Avatar

NAMMA MEDIA 24X7

ಉಡುಪಿಯಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರ – ಚಾಲಕರ ಸಂಕಷ್ಟ ಹೆಚ್ಚಳ

ಉಡುಪಿ: ಜಿಲ್ಲೆಯಲ್ಲಿ ಆಟೋ ಗ್ಯಾಸ್ (ಎಲ್‌ಪಿಜಿ) ಕೊರತೆ ತೀವ್ರಗೊಂಡಿದ್ದು, ಆಟೋ ಚಾಲಕರಿಗೆ ಭಾರೀ ಸಂಕಷ್ಟ ಎದುರಾಗಿದೆ. ಜಿಲ್ಲೆಯಾದ್ಯಂತ ಗ್ಯಾಸ್ ಸ್ಟಾಕ್ ಕೊರತೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿದ್ದರೂ ದರ ಏರಿಕೆಯಿಂದ ಚಾಲಕರು ತಕರಾರು ವ್ಯಕ್ತಪಡಿಸುತ್ತಿದ್ದಾರೆ. ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಜೀಸ್ ಗ್ಯಾಸ್ ಏಜೆನ್ಸಿ ಹಲವು ದಿನಗಳಿಂದ ಬಂದ್ ಆಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಹಿಂದೆ ಲೀಟರ್‌ಗೆ ಸುಮಾರು 60 ರೂ. ಇದ್ದ ಎಲ್‌ಪಿಜಿ ದರ ಇದೀಗ ದುಪ್ಪಟ್ಟಾಗಿ 105 ರೂ. ತಲುಪಿದೆ. ದರ…

Read More

ಮಂಗಳೂರಿನಲ್ಲಿ ಏ.11-12 ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆ

ಮಂಗಳೂರು: ದ.ಕ. ಜಿಲ್ಲಾ ಪಂಜ ಕುಸ್ತಿ ಸಂಘದ ಆಶ್ರಯದಲ್ಲಿ ಎ. 11 ಮತ್ತು 12ರಂದು ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆ ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರೇಮಂಡ್ ಡಿಸೋಜಾ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈಗಾಗಲೇ 180 ಮಂದಿ ಕುಸ್ತಿ ಸ್ಪರ್ಧಿಗಳು ನೋಂದಾಯಿಸಿದ್ದು, 250ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪುರುಷರು, ಮಹಿಳೆಯರು ಮತ್ತು ವಿಕಲ ಚೇತನರಿಗೆ ವಿವಿಧ ದೇಹದಾರ್ಡ್ಯ ಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು ….

Read More

ಕಾಸರಗೋಡಿನ ಪೆರಡಾಲ ಉದನೇಶ್ವರ ದೇವಸ್ಥಾನ -ಎ.17-28 ಬ್ರಹ್ಮಕಲಶೋತ್ಸವ, ವಾರ್ಷಿಕ ಉತ್ಸವ

ಪುತ್ತೂರು: ಪುತ್ತೂರಿನ ಅತೀ ಹೆಚ್ಚು ಭಕ್ತರನ್ನೊಳಗೊಂಡ ಕಾಸರಗೋಡು ತಾಲೂಕಿನ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನವೀಕರಣ ಪುನರ್‍ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಉತ್ಸವ ಎ.17 ರಿಂದ 28ರ ತನಕ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಪ್ರಮುಖ 5ನೇ ಕ್ಷೇತ್ರವಾಗಿರುವ ಪೆರಡಾಲದಲ್ಲಿ ಉದನೇಶ್ವರ ದೇವರು ನೆಲೆಯಾಗಿದ್ದಾರೆ. ಶಾಸ್ತಾರ ದೇವರು ಸ್ಥಳ ಸಾನಿಧ್ಯವಾಗಿದ್ದು, ಕ್ಷೇತ್ರದ ಒಳಗೋಪುರದಲ್ಲಿ ಕುಟ್ಟಿಚಾತ-ಕುಕ್ಷಿಶಾಸ್ತರ ಕಾರಣಿಕ ಶಕ್ತಿಯಾಗಿ ಪ್ರಸಿದ್ದಿ…

Read More

ಗ್ಯಾಸ್ ವಿತರಣೆಯಲ್ಲಿ ಅಕ್ರಮ ಆರೋಪ: ಡಿವೈಎಫ್‌ಐ ಆಕ್ರೋಶ

ಮಂಗಳೂರು: ಗ್ಯಾಸ್ ವಿತರಣೆಯಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದ್ದು, ಏಜನ್ಸಿಗಳು ಅಕ್ರಮ ದಂಧೆಯಲ್ಲಿ ತೊಡಗಿವೆ ಎಂದು ಆರೋಪಿಸಿ ಡಿವೈಎಫ್‌ಐ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಕೆ. ಇಮ್ತಿಯಾಝ್, ಅಮೇರಿಕಾ–ಇರಾನ್ ಯುದ್ಧ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಗ್ಯಾಸ್ ಮಾಫಿಯಾ ಸಕ್ರಿಯವಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಗ್ಯಾಸ್ ಕೊರತೆ ಇದ್ದರೂ ಮಂಗಳೂರಿನ ಎಚ್‌ಪಿಸಿಎಲ್ ಸ್ಥಾವರಗಳಿಂದ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಬುಲೆಟ್ ಟ್ಯಾಂಕರ್‌ಗಳಲ್ಲಿ ಗ್ಯಾಸ್ ಮಹಾರಾಷ್ಟ್ರಕ್ಕೆ ಸಾಗುತ್ತಿದೆ…

Read More

ಉಡುಪಿ: ಹಿರಿಯ ಜಾನಪದ ಕಲಾವಿದ, ಗಾಯಕ ಡಾ.ಗಣೇಶ್ ಗಂಗೊಳ್ಳಿ ನಿಧನ

ಉಡುಪಿ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ (64) ಅವರು ಮಂಗಳವಾರ ನಿಧನರಾದರು.ಕಳೆದ ರಾತ್ರಿ ಸಮಾರಂಭವೊಂದರಲ್ಲಿ ಗಾಯಕರಾಗಿ ಭಾಗವಹಿಸಿ ಮನೆಗೆ ಹಿಂದಿರುಗಿದ್ದ ಗಣೇಶ ಗಂಗೊಳ್ಳಿ ಅವರು ಏಕಾಏಕಿಯಾಗಿ ಕುಸಿದು ಬಿದ್ದಿದ್ದರು. ಬಳಿಕ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬ್ರೈನ್ ಹೆಮರೇಜ್ ತುತ್ತಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಮೃತರು ಪತ್ನಿ, ಇಬ್ನರು ಮಕ್ಕಳನ್ನು ‌ಅಗಲಿದ್ದಾರೆ.

Read More

ತೆಕ್ಕಟ್ಟೆ : ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆ ಮೃತ್ಯು

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ ಸಂಭವಿಸಿದೆ. ​ಕೋಟೇಶ್ವರ ಗಾಂಧಿ ನಗರದ ನಿವಾಸಿ, ದಿವಂಗತ ಉಂಙಾಕ ಅವರ ಪತ್ನಿ ಅಲಿಮಾಬಿ (62) ಮೃತಪಟ್ಟ ದುರ್ದೈವಿ.ಸೋಮವಾರ ರಾತ್ರಿ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಅಲಿಮಾಬಿ ಪಾಲ್ಗೊಂಡಿದ್ದರು. ಸಮಾರಂಭ ಮುಗಿಸಿ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮನೆಗೆ ಮರಳಲು ಇತರ ಮೂವರು ಮಹಿಳೆಯರೊಂದಿಗೆ ರಸ್ತೆ…

Read More

ಕಾರು ವೀಲಿಂಗ್‌ಗೆ ಬ್ರೇಕ್: ಆರೋಪಿ ಸಹಿತ ವಾಹನ ವಶಕ್ಕೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ವೀಲಿಂಗ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ, ಆರೋಪಿ ಸಹಿತ ಕಾರನ್ನು ಪೋಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ವೀಲಿಂಗ್ ಮಾಡಿದ ಸರ್ಫುದ್ದೀನ್ ಎಂಬಾತನನ್ನು ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದ್ದು, ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋದಲ್ಲಿ KL-09-R-6971 ಸಂಖ್ಯೆಯ ಕಪ್ಪು ಬಣ್ಣದ ಕಾರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಪ್ರದೇಶದಲ್ಲಿ ವೀಲಿಂಗ್ ಮಾಡುವ…

Read More

ಮೂಲ್ಕಿ-ಹೆಜಮಾಡಿಯಲ್ಲಿ ಜಿಪಿಎಲ್ ಉತ್ಸವ ದಶಮಾನೋತ್ಸವ ಸಂಭ್ರಮ

ಮೂಲ್ಕಿ-ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಏಪ್ರಿಲ್ 10ರಿಂದ 12ರವರೆಗೆ ಜಿಪಿಎಲ್ ಉತ್ಸವನ್ನು ದಶಮಾನೋತ್ಸವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಪಿಎಲ್ ಉತ್ಸವ ಸಮಿತಿಯ ಸದಸ್ಯರಾದ ಕಿರಣ್ ಶೆಣೈ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 2017ರಲ್ಲಿ ಆರಂಭವಾದ ಈ ಉತ್ಸವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದು, ಈ ಬಾರಿ ಮೂರು ದಿನಗಳ ಕಾಲ ಕ್ರಿಕೆಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು . ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ…

Read More

6000 ಗಾಯಕರು, 5000 ಹಾಡುಗಳು: ಕೊಂಕಣಿ ಸಂಗೀತದ ಮಹಾಸಂಭ್ರಮ

ನಲ್ವತ್ತರ ಸಂವತ್ಸರ ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶವನ್ನು ನವೆಂಬರ್ 3 ರಿಂದ 15 ರವರೆಗೆ ನಡೆಸಲು ತೀರ್ಮಾನಿಸಿದೆ . ಇದರ ಪೂರ್ವಭಾವಿಯಾಗಿ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ನವೆಂಬರ್ 10 ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 4.00 ಗಂಟೆಗೆ ನೆರವೇರಲಿದೆ ಎಂದು ಮಾಂಡ್ ಸೊಭಾಣ್ ಇದರ ಅಧ್ಯಕ್ಷರಾದ ಲುವಿ ಜೆ ಪಿಂಟೊ ತಿಳಿಸಿದರು . ಅವರು ನಗರದ…

Read More

“ಕಾಸರಗೋಡು ಗೋ- ಕುಟೀರ”ದ ನಿರ್ಮಾಣಕ್ಕೆ ಗೋ- ಭಕ್ತರು,ಗೋ- ಪೋಷಕರು ದಾನಿಗಳಿಂದ ಸಹಕಾರದ ನಿರೀಕ್ಷೆಯಲ್ಲಿ

ಕಾಸರಗೋಡು :- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ-ಕುಟೀರ”ದ ಕಾಮಗಾರಿಗೆ ಗೋ- ಭಕ್ತರು, ಗೋ -ಪೋಷಕರು, ದಾನಿಗಳಿಂದ ಆರ್ಥಿಕ ಸಹಾಯ,ಸಹಕಾರ ಪ್ರೋತ್ಸಾಹವನ್ನು ನೀಡುವಂತೆ ಮನವಿ ಮಾಡಲಾಗಿದೆ.ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರವನ್ನು ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಉದ್ದೇಶದಿಂದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ದೈವಾರ್ಷಿಕ ಕಾರ್ಯ ಯೋಜನೆಯನ್ನು…

Read More
error: Content is protected !!