Avatar

NAMMA MEDIA 24X7

ಮಂಜೇಶ್ವರ ಶಾಸಕನ ಭರವಸೆಗಳ ವಿರುದ್ಧ ಬಿಜೆಪಿ ವಾಗ್ದಾಳಿ

ಹೊಸಂಗಡಿ :ಶಾಸಕನಾಗಿ ಖಾಸಗಿ ಕಟ್ಟಡದ ಮೂರನೇ ಅಂತಸ್ತೀನಲ್ಲಿ ಇರುವ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಾಡಲಾಗದ ಮಂಜೇಶ್ವರ ಶಾಸಕರ ಭರವಸೆ ಗಳು ಹಾಸ್ಯಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಈ ಬಾರಿ ಗೆದ್ದರೆ ಮಹಿಳೆಯರಿಗೆ ಬಸ್ ಉಚಿತ ಎಂಬ ಶಾಸಕರ ಘೋಷಣೆ ವಂಚನೆಯ ಪರಮಾವಧಿ ಯಾಕೆಂದರೆ ಮಂಜೇಶ್ವರ ವಿ ಸಾ ವ್ಯಾಪ್ತಿಯಲ್ಲಿ ksrtc ಬಸ್ ಎಲ್ಲಿಯೂ ಲೋಕಲ್ ಸರ್ವಿಸ್ ನಡೆಸುವುದಿಲ್ಲ. ಕಾಸರಗೋಡು ಮಂಗಳೂರು ಅಂತರ ರಾಜ್ಯ ksrtc ಗಳಲ್ಲಿ ಉಚಿತ…

Read More

ದಾವಣಗೆರೆ ದಕ್ಷಿಣ ಉಪಚುನಾವಣೆ: ಸಮರ್ಥ್ ಗೆದ್ದರೆ ನನಗೆ ಶಕ್ತಿ – ಸಿಎಂ ಸಿದ್ದರಾಮಯ್ಯ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗನೂರು, ಶರಮಗೊಂಡನಳ್ಳಿ, ತುರ್ಚಘಟ್ಟ, ಹದಡಿ ಮುಂತಾದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದರು. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ‌ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ ? ಅದು ಕುಟುಂಬ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು. ಸಮರ್ಥ್ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣದ ಎಲ್ಲ ಅರ್ಹತೆಗಳಿರುವ ಸಮರ್ಥ ಅಭ್ಯರ್ಥಿ….

Read More

ಉಡುಪಿ: ಅಪಹರಣ ಪ್ರಕರಣ – 7 ಮಂದಿ ಬಂಧನ, ಪ್ರಮುಖ ಆರೋಪಿಗಳ ಸುಳಿವಿಗೆ ₹50,000 ಬಹುಮಾನ

ಉಡುಪಿ: ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನದಲ್ಲಿ ನಡೆದ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.ಕೊಲ್ಲೂರು ಕೆಳಮನೆಯ ದೇವಿ ಪ್ರಸಾದ್ ಶೆಟ್ಟಿ ಯಾನೆ ದೀಕ್ಷಿತ್ (33), ಹಿರಿಯಡ್ಕದ ಸುಜಿತ್ (27), ಕಾಟಿಪಳ್ಳದ ಸುದೀಪ್ (22), ಕೃಷ್ಣಾಪುರ ಶ್ರೀಷಾ ಆನಂದ ಶೆಟ್ಟಿ (35), ಕೈಕಂಬ ಮಿಥುನ್ ಕೈಕಂಬ (20), ಕೆಮ್ಮಣ್ಣು ಸುಹಾಸ್ (31) ಹಾಗೂ ಹೂಡೆ ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ…

Read More

ಬಂಟ್ವಾಳ: ಗ್ಯಾಸ್ ಪಂಪ್‌ನಲ್ಲಿ ಹೆಚ್ಚುವರಿ ದರ ಆರೋಪ – ರಿಕ್ಷಾ ಚಾಲಕರಿಂದ ಮತ್ತೆ ಪ್ರತಿಭಟನೆ

ಬಂಟ್ವಾಳ: ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ರಿಕ್ಷಾ ಚಾಲಕರು ಗ್ಯಾಸ್ ಪಂಪ್ ಎದುರು ಸತತ ಎರಡನೇ ಬಾರಿ ಪ್ರತಿಭಟನೆ ನಡೆಸಿದ ಘಟನೆ ತಲಪಾಡಿ, ಬಿಸಿರೋಡು ಪ್ರದೇಶದಲ್ಲಿ ನಡೆದಿದೆ. ತಲಪಾಡಿಯಲ್ಲಿರುವ ಅಟೋ ಗ್ಯಾಸ್ ಪಂಪ್‌ನಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ. ಇದಲ್ಲದೆ, ಪಂಪ್ ಸಿಬ್ಬಂದಿ ದರ್ಪದ ಮಾತುಗಳಿಂದ ಬೆದರಿಸುವುದೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಕೆಲವು ದಿನಗಳ ಹಿಂದೆಯೂ ಇದೇ…

Read More

ಕಾಸರಗೋಡು: ಹವಾಲಾ ಹಣದ ಕಳ್ಳಸಾಗಣೆ ವಿರುದ್ಧ ಪೊಲೀಸರ ಕಟ್ಟೆಚ್ಚರ – 72.9 ಲಕ್ಷ ರೂ. ವಶ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಹವಾಲಾ ಹಣದ ಕಳ್ಳಸಾಗಣೆ ತೀವ್ರಗೊಳ್ಳುತ್ತಿದ್ದು, ಕಾಸರಗೋಡು ಮತ್ತು ಕುಂಬಳೆ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 72.9 ಲಕ್ಷ ರೂಪಾಯಿ ದಾಖಲೆಗಳಿಲ್ಲದೆ ವಶಪಡಿಸಿಕೊಂಡಿದ್ದಾರೆ. ಕುಂಬಳೆಯಲ್ಲಿ 61.5 ಲಕ್ಷ ರೂಪಾಯಿ ಹಾಗೂ ಕಾಸರಗೋಡು ತಾಲೂಕು ಕಚೇರಿ ಸಮೀಪದ ಸಂಚಾರ ವೃತ್ತದ ಬಳಿ 11.40 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಕುಂಬಳೆಯ ಘಟನೆಯಲ್ಲಿ ಕಪ್ಪು ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾಸರಗೋಡು ತಲಂಕರದ ಮಾಡನ್ನೂರ್ ಹೌಸ್ ನಿವಾಸಿ ಶಬೀರ್ ಬಂಧಿತನಾಗಿದ್ದಾನೆ. ಗುಪ್ತ…

Read More

ಬಜಪೆ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಅಂತರ್ ರಾಜ್ಯ ಆರೋಪಿಯ ಬಂಧನ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಮೂಲದ ಅಂತರ್ ರಾಜ್ಯ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದಿಂಡಿಗುಲ್ ಜಿಲ್ಲೆಯ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25) ಎಂದು ಗುರುತಿಸಲಾಗಿದೆ. ಕಳೆದ ಮಾರ್ಚ್ 03, 2026 ರಂದು ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಆರೋಪಿ, ದೇವಸ್ಥಾನದಲ್ಲಿದ್ದ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಸುಮಾರು 25,000 ರೂಪಾಯಿ ನಗದನ್ನು…

Read More

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೋತ್ಸವದ ಪೂರ್ವಭಾವಿ ಸಭೆ – ಭಾರಿ ಸಿದ್ಧತೆ

ಪುತ್ತೂರು; ಪುತ್ತೂರು ಮಹತೋಬಾರ ಪುತ್ತೂರು ಮಹಾಲಿಂಗೇಶ್ವರದ ದೇವಳದ ಜಾತ್ರೋತ್ಸವವು ಎ.10-20 ತನಕ ನಡೆಯಲಿದ್ದು, ಜಾತ್ರೆಯ ಯಶಸ್ವಿಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಬಾವಿ ಸಭೆಯು ದೇವಳದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಜಾತ್ರೋತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದ್ದು, ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಿರ್ವಹಿಸಲು ಇಲಾಖೆಗಳ ಸಹಭಾಗಿತ್ವ ಅಗತ್ಯವಿದೆ. ವಿವಿಧ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಮಹಾರಥೋತ್ಸವ ಎ.17ರಂದು…

Read More

ಕಾವೂರು: ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು – ಶೋಧ ಕಾರ್ಯ ಮುಂದುವರಿಕೆ

ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು ನದಿ ಪಾಲಾದ ದಾರುಣ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ (ಏ.1) ಮುಂಜಾನೆ ಸಂಭವಿಸಿದೆ. ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ್ (28), ರಾಯಲ್ (24) ನೀರುಪಾಲಾದ ಯುವಕರು. ಬುಧವಾರ ಮುಂಜಾನೆ ಸುಮಾರು 1:30ರ ವೇಳೆಗೆ ಗಣೇಶ್, ರಾಯಲ್ ಹಾಗೂ ನಿತೇಶ್ ಫಲ್ಗುಣಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಇದ್ದ ದೋಣಿ ಹಠಾತ್ತನೆ ನದಿಯಲ್ಲಿ ಮಗುಚಿ ಬಿದ್ದಿದೆ. ಈ ಸಮಯ ಈಜಲು…

Read More

ಮಂಗಳೂರು: ಕಲಾಕೃತಿಯಿಂದ ಅಲಂಕೃತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಭವ್ಯ ಸ್ವಾಗತ

ಕಲಾಕೃತಿ ಗಳಿಂದ ಅಲಂಕೃತವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್ ವಿಮಾನ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇದು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ “ಟೇಲ್ಸ್ ಆಫ್ ಇಂಡಿಯಾ’ ಉಪಕ್ರಮದ ಭಾಗವಾಗಿದೆ. ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಬೋಯಿಂಗ್ 737-8 (ವಿಟಿ-ಬಿ ಡಬ್ಲ್ಯುವಿ) ವಿಮಾನವನ್ನು ಫೈಯಿಂಗ್ ಕ್ಯಾನ್ ವಾಸ್ (ಹಾರಾಡುವ ಕಲಾಕೃತಿ) ಆಗಿ ನಿಯೋಜಿಸಲಾಗಿದೆ. ಇದು ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ಶೈಲಿಯೊಂದಿಗೆ ಸಂಯೋಜಿಸಿ, ಪ್ರಯಾಣವನ್ನು ಒಂದು ಚಲಿಸುವ ಸಾಂಸ್ಕೃತಿಕ ಅನುಭವವನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.ಈ ವಿಮಾನ ಮಂಗಳೂರು…

Read More

ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗು ಬ್ರಹ್ಮಕಲಶೋತ್ಸವ , ನೇಮೋತ್ಸವ ಉತ್ಸವಕ್ಕೆ ಸಕಲ ಸಿದ್ಧತೆ

ಕುಂಜತ್ತೋರು ತೂಮಿನಾಡು, ಪ್ರದೇಶದಲ್ಲಿರುವ ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಸಕಲ ಸಿದ್ಧತೆಯು ನಡೆದಿದ್ದು ಏಪ್ರಿಲ್ 2ರಿಂದ 6,ರ ವರೆಗೆ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಶ್ರೀ ಕೆ. ಮರಿಭಟ್ ಅವರ ದಿವ್ಯ ಹಸ್ತದಿಂದ ವೈದಿಕ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವಪೂರ್ಣವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಏಪ್ರಿಲ್ 2 ರಂದು ಬೆಳಗ್ಗೆ ಗಣಹೋಮ , ತೋರಣ ಮುಹೂರ್ತ ,ಉಗ್ರಾಣ ಮುಹೂರ್ತ ಚಪ್ಪರ ಮುಹೂರ್ತ ಗಳೊಂದಿಗೆ ಆರಂಭವಾಗುವ ಧಾರ್ಮಿಕಗಳೊಂದಿಗೆ ಮಹೋತ್ಸವಕ್ಕೆ ಚಾಲನೆ…

Read More
error: Content is protected !!