Avatar

NAMMA MEDIA 24X7

ಇಂದು ಸಂಜೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ; ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ

ಬೆಂಗಳೂರು, ಜೂನ್ 03 : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ 4 ಗಂಟೆಗೆ ಲೋಕಭವನದಲ್ಲಿ ಅಧಿಕಾರ ಸ್ವೀಕರಿಸಲಿರುವ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮವನ್ನು 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರದಲ್ಲಿ ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ. ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ 4.05ಕ್ಕೆ ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಮತ್ತು ಮಹತ್ವದ ಕ್ಷಣವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು…

Read More

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026ಕ್ಕೆ ಚಾಲನೆ

ಬೆಂಗಳೂರು, ಜೂನ್ 3:ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ವತಿಯಿಂದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026” ಆರಂಭಿಸಲಾಗಿದೆ. ಈ ಸ್ಪರ್ಧೆಗೆ “ವೈದ್ಯಲೋಕ” ಆರೋಗ್ಯ ಮಾಸಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳು ಸಹಯೋಗ ನೀಡುತ್ತಿವೆ. ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಹಾಗೂ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸುವುದು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಪ್ರೇರಣೆ ನೀಡುವುದು ಈ ಸ್ಪರ್ಧೆಯ ಪ್ರಮುಖ…

Read More

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರ: ಇರಾನ್–ಅಮೆರಿಕ ಸಂಘರ್ಷ ಹೊಸ ಹಂತಕ್ಕೆ

ಮಧ್ಯಪ್ರಾಚ್ಯ, ಜೂನ್ 3:ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಳ ಕಂಡಿದ್ದು, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಹೊಸ ಹಂತ ತಲುಪಿದೆ. ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಮಂಗಳವಾರ ರಾತ್ರಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಕ್ರಮ ಕೈಗೊಂಡಿದ್ದು, ಬುಧವಾರ ಮುಂಜಾನೆ ಕೆಶ್ಮ್ ದ್ವೀಪದ ಮೇಲೆ ಸ್ವಯಂ ರಕ್ಷಣಾತ್ಮಕ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ ಘೋಷಿಸಿದೆ. ಅಮೆರಿಕದ ಕೇಂದ್ರ ಕಮಾಂಡ್ (CENTCOM)…

Read More

ಕಾಣೆಯಾದ ವ್ಯಕ್ತಿಗಾಗಿ ಸಾರ್ವಜನಿಕರ ಸಹಾಯಕ್ಕೆ ಮನವಿ

ಮಂಗಳೂರು, ಜೂನ್ 3:ನಗರದ ಕಣ್ಣೂರು ವೀರನಗರ ನಿವಾಸಿಯಾದ 59 ವರ್ಷದ ಸುರೇಶ್ ಅವರು ಮೇ 29ರಂದು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಕಾಣೆಯಾದ ಸುರೇಶ್ ಅವರ ವೈಶಿಷ್ಟ್ಯಗಳು ಹೀಗಿವೆ: ಸುಮಾರು 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ ಹಾಗೂ ಸಪೂರ ದೇಹ ಹೊಂದಿದ್ದಾರೆ. ಅವರ ಹಣೆಯ ಬಲಭಾಗದಲ್ಲಿ ಕಪ್ಪು ಮಚ್ಚೆ ಇರುವುದೂ ಗುರುತು. ಅವರು ಕೊನೆಯಾಗಿ ಕಾಣಿಸಿಕೊಂಡಾಗ ಕೆಂಪು…

Read More

ಹಿರಿಯ ಕಾಂಗ್ರೆಸ್ ನಾಯಕ ಅಬ್ದುಲ್ ರಹಿಮಾನ್ ಕನ್ಯಾನಗೆ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಹುದ್ದೆ

ಬಂಟ್ವಾಳ: ಪಕ್ಷವನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ಹಾಗೂ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶದಿಂದ ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ರಹಿಮಾನ್ ಕನ್ಯಾನ ಅವರನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇಮಕ‌ ಮಾಡಿರುತ್ತಾರೆ. ಅಬ್ದುಲ್ ರಹಿಮಾನ್ ಅವರು ದೀರ್ಘಕಾಲದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದು, ಗಡಿನಾಡು ಗ್ರಾಮ ಪಂಚಾಯತ್‌ನಲ್ಲಿ ನಾಲ್ಕು ಬಾರಿ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಗಮನಾರ್ಹ…

Read More

ಅನಾರೋಗ್ಯ ವೈದ್ಯರಿಗೆ ಮಾನವೀಯ ನೆರವು: ಪುತ್ತಿಲಪರಿವಾರ ಟ್ರಸ್ಟ್ ಕೈಹಿಡಿತ

ಪುತ್ತೂರು:ಪುತ್ತೂರಿನ ಕುಂಬ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ| ವಿಘ್ನೇಶ್ವ್ ರವರು ಅನಾರೋಗ್ಯ ದಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆ ಗಾಗಿ ಪುತ್ತಿಲಪರಿವಾರ ಸೇವಾ ಟ್ರಸ್ಟ್(ರಿ) ಪುತ್ತೂರು ವತಿಯಿಂದ ಸಹಾಯಧನ ನೀಡಲಾಯಿತು. ಈ ಸಂಧರ್ಭದಲ್ಲಿ ಪುತ್ತಿಲಪರಿವಾರ ಸೇವಾಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ,ಅದ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ ,ಟ್ರಸ್ಟ್ ನ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲ್,ಚಂದಪ್ಪ ಮೂಲ್ಯ,ಪ್ರವೀಣ್ ಶೆಟ್ಟಿ ತಿಂಗಳಾಡಿ,ಪ್ರೇಮ್ ರಾಜ್ ಆರ್ಲಪದವು,ರಾಜು ಶೆಟ್ಟಿ ,ರೂಪೇಶ್ ,ಸುನಿಲ್ ಬೋರ್ಕರ್,ಅನಿಲ್ ತೆಂಕಿಲ,ಹರೀಶ್ ಭಟ್ ಪುಣಚ,ಸುಜಿತ್ ಕಜೆ,ಮುಂತಾದವರು ಉಪಸ್ಥಿತರಿದ್ದರು.

Read More

ಜೂನ್ 5ಕ್ಕೆ ಎವಿಜಿ ಶಾಲಾ ಆರಂಭೋತ್ಸವ: 7, 8ನೇ ತರಗತಿ ಆರಂಭ

ಮೂರು ವರ್ಷಗಳಿಂದ ಕೃಷ್ಣನಗರ ಬಳಿಯ ಬನ್ನೂರು ಗ್ರಾಮದ ಅಲುಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎ.ವಿ.ಜಿ. ಇಂಗ್ಲಿಷ್ ಮೀಡಿಯಂ ಸ್ಕೂಲ್ ಜೂ.5ಕ್ಕೆ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಇದರ ಜೊತೆಗೆ ಹೊಸದಾಗಿ 7 ಮತ್ತು 8 ನೇ ತರಗತಿಯು ಆರಂಭಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅವರು ಮಾತನಾಡಿ ಎ.ವಿ.ನಾರಾಯಣ ಅವರ ತಂದೆಯ ಸ್ಮರಣಾರ್ಥ 3 ವರ್ಷಗಳ ಹಿಂದೆ ಕೇವಲ 30 ಮಕ್ಕಳಿಂದ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಾ…

Read More

ಬೆಳ್ಳಿಪರದೆಯಲ್ಲಿ ಹಳ್ಳಿ ಪ್ರತಿಭೆಯ ಮಿಂಚು : ಉದಯ ಕುಮಾರ್ ನೆಟ್ಟಣಿಗೆ ಅವರ ಕಲಾ ಪಯಣ

ಮಣ್ಣಿನ ಒಡಲಾಳದಲ್ಲಿ ಅಡಗಿರುವ ಬೀಜವೊಂದು ಸೂಕ್ತ ಕಾಲದ ಮಳೆಗಾಗಿ ಕಾಯುವಂತೆ, ಕಲೆಯೆಂಬುದು ಕೆಲವರ ಆಂತರ್ಯದಲ್ಲಿ ಸುಪ್ತ ಜ್ವಾಲೆಯಾಗಿ ಧಗಧಗಿಸುತ್ತಿರುತ್ತದೆ. ಅದಕ್ಕೆ ಪ್ರೋತ್ಸಾಹದ ತಂಗಾಳಿ ಸೋಕಿದಾಗ ಮಾತ್ರ ಅದು ಜಗತ್ತನ್ನು ಬೆಳಗುವ ನಂದಾದೀಪವಾಗುತ್ತದೆ. ಹಳ್ಳಿಯ ಹಸಿರು ಹೊದಿಕೆಯ ಪರಿಸರದಲ್ಲಿ, ಗ್ರಾಮೀಣ ಬದುಕಿನ ನೋವು ನಲಿವುಗಳ ನೈಜ ಪಾಠಶಾಲೆಯಲ್ಲಿ ಬೆಳೆದು ಬಂದ ಯುವಕ ಉದಯ ಕುಮಾರ್ ನೆಟ್ಟಣಿಗೆ. ಬಾಲ್ಯದಿಂದಲೇ ಕಲಾಭಿಮಾನದ ತೀವ್ರ ಹಂಬಲವನ್ನು ಎದೆಯೊಳಗೆ ನುಂಗಿ ಹಿಡಿದಿಟ್ಟುಕೊಂಡು, ದಿನನಿತ್ಯದ ಬದುಕಿನ ಜವಾಬ್ದಾರಿಗಳ ನಡುವೆ ಅದನ್ನು ಜಾಗೃತವಾಗಿರಿಸಿಕೊಂಡಿದ್ದ ಈ ಅಪರೂಪದ ಪ್ರತಿಭೆ…

Read More

ಡಿ.ಎಸ್‌.ಐ.ಎ ಮಹಿಳಾ ವಿಭಾಗದಿಂದ ಸರಳ ಹೇರ್ ಬನ್ ಹಾಗೂ ಹೇರ್ ಸ್ಟೈಲ್ ಕಾರ್ಯಾಗಾರ

ಮಂಗಳೂರು: ಮಂಗಳೂರು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (DSIA) ಮಹಿಳಾ ವಿಭಾಗದ ವತಿಯಿಂದ ಸರಳ ಹೇರ್ ಬನ್ ಮತ್ತು ಹೇರ್ ಸ್ಟೈಲ್ ಕುರಿತ ಕಾರ್ಯಾಗಾರವನ್ನು ಜೂನ್ 3ರಂದು ಬೆಳಿಗ್ಗೆ 10.30 ಗಂಟೆಗೆ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಡಿ.ಎಸ್‌.ಐ.ಎ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರವನ್ನು ಅನುಭವಸಂಪನ್ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೀತಾ ರಾಜಾರಾಮ ನಡೆಸಿಕೊಡಲಿದ್ದು, ಕೂದಲು ತಯಾರಿ, ಕ್ರಿಂಪಿಂಗ್ ತಂತ್ರಗಳು, ಬ್ಯಾಕ್-ಕಾಂಬಿಂಗ್ ವಿಧಾನಗಳು ಹಾಗೂ ಸರಳ ಮತ್ತು ಆಕರ್ಷಕ ಹೇರ್ ಸ್ಟೈಲ್‌ಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ. ಸೌಂದರ್ಯ ಮತ್ತು…

Read More

ಜೂನ್ 3ರಂದು ಫಾದರ್ ಮುಲ್ಲರ್‌ನಿಂದ ಬೃಹತ್ ಮಾದಕವಸ್ತು ವಿರೋಧಿ ಜಾಗೃತಿ ರ‍್ಯಾಲಿ

ಮಂಗಳೂರು: ಮಾದಕವಸ್ತು ಸೇವನೆ ಹಾಗೂ ವ್ಯಸನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಜೂನ್ 3ರಂದು ಬೆಳಿಗ್ಗೆ 7 ಗಂಟೆಗೆ ಬೃಹತ್ ಮಾದಕವಸ್ತು ವಿರೋಧಿ ಜಾಗೃತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಡಾ. ಮೈಕಲ್ ಸಾಂತೂ ಮಯರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ನರ್ಸಿಂಗ್ ಶಾಲೆ, ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ…

Read More
error: Content is protected !!