Avatar

NAMMA MEDIA 24X7

ಯೂನಿವರ್ಸಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪ್ರವೇಶಾತಿ ಪ್ರಕ್ರಿಯೆ ಆರಂಭ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಪ್ರಾಯೋಗಿಕ ತರಬೇತಿ ಹಾಗೂ ಉದ್ಯಮ ಸಂಪರ್ಕದೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸಂಯೋಜಿತ ಕೋರ್ಸ್‌ಗಳನ್ನು ಕಾಲೇಜು ನೀಡುತ್ತಿದೆ. ಪತ್ರಿಕೋದ್ಯಮ ವಿಭಾಗದಲ್ಲಿ ಇಂಗ್ಲಿಷ್ (ಐಚ್ಛಿಕ), ಪತ್ರಿಕೋದ್ಯಮ ಮತ್ತು ಅರ್ಥಶಾಸ್ತ್ರ; ಕನ್ನಡ (ಐಚ್ಛಿಕ), ಪತ್ರಿಕೋದ್ಯಮ ಮತ್ತು ಅರ್ಥಶಾಸ್ತ್ರ; ಹಿಂದಿ (ಐಚ್ಛಿಕ), ಪತ್ರಿಕೋದ್ಯಮ ಮತ್ತು ಅರ್ಥಶಾಸ್ತ್ರ; ಇತಿಹಾಸ, ಅರ್ಥಶಾಸ್ತ್ರ ಮತ್ತು ಪತ್ರಿಕೋದ್ಯಮ ಸೇರಿದಂತೆ ವಿವಿಧ ಸಂಯೋಜನೆಗಳ ಕೋರ್ಸ್‌ಗಳು ಲಭ್ಯವಿವೆ. ವಿದ್ಯಾರ್ಥಿಗಳಿಗೆ ಅನುಭವಿ ಬೋಧಕ ವರ್ಗ, ಪ್ರಾಯೋಗಿಕ ತರಬೇತಿ, ಆಧುನಿಕ ನ್ಯೂಸ್‌ರೂಂ…

Read More

ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಉಡುಪಿ ಜಿಲ್ಲೆಯ ತೆಕ್ಕಟ್ಟೆ ಪ್ರಮುಖ ಸರ್ಕಲ್ ಬಳಿ ನಡೆದಿದೆ. ಮೃತರನ್ನು ಮಣೂರು ನಿವಾಸಿ ಗಣೇಶ್ ಎಂದು ಗುರುತಿಸಲಾಗಿದ್ದು, ಅವರು ಕೋಟಿ ಪೂಜಾರಿ ಅವರ ಪುತ್ರರಾಗಿದ್ದಾರೆ. ಮಂಗಳವಾರ ರಾತ್ರಿ ಸುಮಾರು 9.47ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಣೇಶ್ ಅವರ ಬೈಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು…

Read More

ಡಿ.ಕೆ. ಶಿವಕುಮಾರ್ ಇಂದು ಸಿಎಂ ಪ್ರಮಾಣವಚನ: 13 ಸಚಿವರ ಸೇರ್ಪಡೆ ಸಾಧ್ಯತೆ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 13 ಮಂದಿ ಹಿರಿಯ ಹಾಗೂ ಪ್ರಭಾವಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೆ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸರ್ವಧರ್ಮ ಸಮಭಾವದ ಸಂದೇಶ ಸಾರುವ ಉದ್ದೇಶದಿಂದ ವಿವಿಧ ಧರ್ಮಗಳ 55 ಮಂದಿ ಸ್ವಾಮೀಜಿಗಳು, ಫಾದರ್‌ಗಳು ಹಾಗೂ ಮೌಲ್ವಿಗಳಿಗೆ ಆಹ್ವಾನ ನೀಡಲಾಗಿದೆ. ಅವರ ಸಮ್ಮುಖದಲ್ಲೇ…

Read More

ಬೀದಿ ಬದಿ ವ್ಯಾಪಾರಿಗಳ ವಿಚಾರದಲ್ಲಿ ಪಾಲಿಕೆ ವೈಫಲ್ಯ: ಎಎಪಿ ಆಕ್ರೋಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಾಪಾರ ವಲಯಗಳನ್ನು ಗುರುತಿಸಲು ವಿಫಲವಾಗಿರುವ ಪಾಲಿಕೆಯ ಕ್ರಮವನ್ನು ಆಮ್ ಆದ್ಮಿ ಪಾರ್ಟಿ (ಎಎಪಿ) ತೀವ್ರವಾಗಿ ಖಂಡಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಪುರಭವನದ ಸಮೀಪ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ವಿಚಾರವಾಗಿ ಇತ್ತೀಚೆಗೆ ಸಾರ್ವಜನಿಕರಲ್ಲಿ ವ್ಯಕ್ತವಾದ ಆಕ್ರೋಶವು ಪಾಲಿಕೆಯ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ಆರೋಪಿಸಿದರು. ನೈರ್ಮಲ್ಯದ ಕೊರತೆ, ಕಾಲುದಾರಿ ಅತಿಕ್ರಮಣ ಹಾಗೂ ಮಹಿಳೆಯರ ಸುರಕ್ಷತೆಗೆ…

Read More

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಜೂನ್ 7ರಿಂದ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ

ಅಧಿಕ ಮಾಸದ ಅಂಗವಾಗಿ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಜೂನ್ 7ರಿಂದ 13ರವರೆಗೆ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ್ ಮಹಾರಾಜ್ ತಿಳಿಸಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪ್ರಸಿದ್ಧ ಪುಣ್ಯಕ್ಷೇತ್ರ ಪಂಢರಪುರ, ಶ್ರೀ ಚೈತನ್ಯ ಸದ್ಗುರು ಹರದಾಸ್ವಾಮಿ ಹ. ಹಿರೇಹರಕರ ಬಹುಉದ್ದೇಶೀಯ ಸಂಸ್ಥೆ ಹಾಗೂ ಪಂಢರಪುರದ ಸಹಯೋಗದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ…

Read More

ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ: ಕನ್ನಡ ಶಾಲೆಗಳ ಉಳಿವಿಗೆ ಅರ್ಥಪೂರ್ಣ ಹೆಜ್ಜೆ

ಮುಡಿಪು: ದಾನಿಗಳ ಸಹಕಾರವೇ ಆಧಾರವಾಗಿರುವ ಭಾರತಿ ಅನುದಾನಿತ ಶಾಲೆ, ಮುಡಿಪು ಕುರ್ನಾಡಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಪೆನ್ನು ಹಾಗೂ ಬಳಪ ವಿತರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಕನ್ನಡ ಜಾಗೃತಿ ಸಮಿತಿಯ ಸದಸ್ಯರೂ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಸಾಮಾಜಿಕ ಟ್ರಸ್ಟ್‌ನ ನೆರವು ಹಾಗೂ ಖ್ಯಾತ ವ್ಲಾಗರ್ ಸಲಾಂ ಸಮ್ಮಿ ಅವರ ಸಹಯೋಗದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು….

Read More

ದ.ಕ.ದಲ್ಲಿ ಬಂದೂಕು ಲೈಸನ್ಸ್ ನವೀಕರಣಕ್ಕೆ ತೀವ್ರ ತೊಂದರೆ ಅನುಭಸುತ್ತಿರುವ ಕೃಷಿಕರು: ತುರ್ತು ಸ್ಪಂದನೆಗೆ ಡಿಜಿಪಿ, ಜಿಲ್ಲಾಡಳಿತಕ್ಕೆ ಸಂಸದ ಕ್ಯಾ. ಚೌಟ ಪತ್ರ ಬರೆದು ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ವನ್ಯಜೀವಿಗಳ ಉಪಟಳದಿಂದ ತಮ್ಮ ಬೆಳೆ ರಕ್ಷಣೆಗೆ ಬಳಸುವ ಕೋವಿ/ಬಂದೂಕು ಪರವಾನಗಿ ನವೀಕರಣಕ್ಕೆ ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕೆಂದು ಕೋರಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿಕರು ಕಾನೂನು ಪ್ರಕಾರ ಪಡೆದಿರುವ ಬಂದೂಕು ಪರವಾನಗಿಯ ನವೀಕರಣ ಅರ್ಜಿಗಳನ್ನು ಕಠಿಣ ನಿಯಮಗಳ ನೆಪವೊಡ್ಡಿ ಅಧಿಕಾರಿಗಳು ವ್ಯವಸ್ಥಿತವಾಗಿ ತಿರಸ್ಕರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇದರಿಂದ ಕೃಷಿಕರು…

Read More

ಯಕ್ಷಗಾನದ ಪವಿತ್ರತೆಗೆ ಧಕ್ಕೆ: ಅನಧಿಕೃತ ಚಿಕ್ಕಮೇಳಗಳ ವಿರುದ್ಧ ಕಠಿಣ ಕ್ರಮ

ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನದ ಪವಿತ್ರತೆಯನ್ನು ಹಾಳುಮಾಡಿ, ‘ಚಿಕ್ಕಮೇಳ’ಗಳ ಹೆಸರಿನಲ್ಲಿ ಹಣ ಸಂಪಾದನೆಯ ದಂಧೆ ನಡೆಸುವ ಅನಧಿಕೃತ ತಂಡಗಳ ವಿರುದ್ಧ ತೆಂಕುತಿಟ್ಟು ಸಣ್ಣ ಮೇಳಗಳ ಒಕ್ಕೂಟ ಕಠಿಣ ನಿಲುವು ತಾಳಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಒಕ್ಕೂಟದ ಅಧಿಕೃತ ಪರವಾನಗಿ ಇಲ್ಲದೆ ಯಾವುದೇ ಸಣ್ಣ ಮೇಳಗಳು ತಿರುಗಾಟ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಯಕ್ಷಗಾನದ ಜ್ಞಾನವಿಲ್ಲದವರು ತಂಡಗಳನ್ನು ಕಟ್ಟಿಕೊಂಡು ಕಲೆಯ ಘನತೆಗೆ ಧಕ್ಕೆ ತರುತ್ತಿದ್ದು, ಇಂತಹ ಚಟುವಟಿಕೆಗಳಿಗೆ…

Read More

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಹಿಫ್‌ಝ್ ಸಾಧನೆಗೆ ಗೌರವ, ಶೈಕ್ಷಣಿಕ ವರ್ಷಕ್ಕೆ ಭಕ್ತಿಪೂರ್ಣ ಚಾಲನೆ

ಮಂಜೇಶ್ವರ, ಜೂನ್ 3: ರಾಷ್ಟ್ರವನ್ನು ಸರಿಯಾದ ಶಿಕ್ಷಣದ ಮೂಲಕ ಸಬಲಗೊಳಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಆರಂಭವು ಅರ್ಥಪೂರ್ಣ ಮತ್ತು ಭಕ್ತಿಪೂರ್ಣ ಕಾರ್ಯಕ್ರಮದೊಂದಿಗೆ ನೆರವೇರಿತು. ಶಾಲೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಜೊತೆಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗುಣಮಟ್ಟದ ಶಿಕ್ಷಣದೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಮರುಆರಂಭದ ಸಂಭ್ರಮದಲ್ಲಿ ಈ ಸಾಧನೆ ವಿಶೇಷ ಮೆರಗು ನೀಡಿತು. ಸಾಹುಲ್ ಹಮೀದ್–ರಜಿಯಾ ದಂಪತಿಗಳ ಪುತ್ರ ಹಾಫಿಲ್…

Read More

​ಮಂಜೇಶ್ವರ: ಉದ್ಯಾವರದಲ್ಲಿ ಕೋಳಿ ಅಂಗಡಿಗೆ ಕಳ್ಳರ ಲಗ್ಗೆ; 20 ಸಾವಿರ ರೂಪಾಯಿ ನಗದು ಕಳವು

​ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ನಗದನ್ನು ದೋಚಿರುವ ಘಟನೆ ನಡೆದಿದೆ. ​ಉದ್ಯಾವರದ ರಫೀಕ್ ಎಂಬುವರಿಗೆ ಸೇರಿದ ಕೋಳಿ ಅಂಗಡಿಯನ್ನು ಗುರಿಯಾಗಿಸಿ ಈ ಕೃತ್ಯ ನಡೆದಿದೆ. ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ಸುಮಾರು 20,000 ರೂಪಾಯಿ ನಗದನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.​ಬುಧವಾರ ಬೆಳಿಗ್ಗೆ ಅಂಗಡಿಯ ಮಾಲಕರು ಬಂದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ…

Read More
error: Content is protected !!