ನಿವೃತ್ತ ಸರ್ಕಾರಿ ನೌಕರರಿಗೆ ‘ಸಂಧ್ಯಾಕಿರಣ’ ಆರೋಗ್ಯ ಯೋಜನೆ: ಸಚಿವ ಯು.ಟಿ. ಖಾದರ್ ಘೋಷಣೆ
ಮಂಗಳೂರು:ನಿವೃತ್ತ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗೆ 60ರಿಂದ 70 ವರ್ಷ ವಯಸ್ಸಿನವರೆಗೆ ‘ಸಂಧ್ಯಾಕಿರಣ’ ಆರೋಗ್ಯ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ನಿವೃತ್ತ ನೌಕರರು ತಮ್ಮ ಪಿಂಚಣಿಯ ಶೇ.1.25ರಷ್ಟು ಮೊತ್ತವನ್ನು ಪಾವತಿಸಬೇಕಿದ್ದು, ಕುಟುಂಬದವರಿಗೂ ಆರೋಗ್ಯ ಸೌಲಭ್ಯ ದೊರೆಯಲಿದೆ. ನೌಕರರ ನಿಧನದ ಬಳಿಕ ಕುಟುಂಬ ಪಿಂಚಣಿಯಿಂದ ಶೇ.0.75ರಷ್ಟು ಪಾವತಿಸಿದರೆ ಯೋಜನೆ ಮುಂದುವರಿಯಲಿದೆ ಎಂದರು. ಕೇಂದ್ರದ ವಯೋವಂದನ್ ಯೋಜನೆ ಕುರಿತು…
