Avatar

NAMMA MEDIA 24X7

“37 ವರ್ಷಗಳ ಆದರ್ಶ ಶಿಕ್ಷಕ ಸೇವೆ ಸಲ್ಲಿಸಿದ ಕಾಡುಮಠ ಶಾಲೆಯ ಕುಸುಮ ಎನ್. ಅವರಿಗೆ ಬೀಳ್ಕೊಡುಗೆ”

ಬಂಟ್ವಾಳ: ಬಂಟ್ವಾಳ ತಾಲೂಕಿನ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಡುಮಠ,ಕೊಳ್ನಾಡು ಇಲ್ಲಿನ ಶಿಕ್ಷಕಿಗೆ ಬಿಳ್ಕೋಡುಗೆ ಸಮಾರಂಭವು ದಿನಾಂಕ 31/12/2025 ರಂದು ಶಾಲೆಯಲ್ಲಿ ನಡೆಯಿತು. “ಶಿಕ್ಷಣಕ್ಕೆ ಬದುಕನ್ನೇ ಅರ್ಪಿಸಿದ ಆದರ್ಶ ಶಿಕ್ಷಕಿ” – ಆಶಾ ನಾಯಕ್ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರದ ದೈಹಿಕ ಶಿಕ್ಷಣಾಧಿಕಾರಿಯೂ,ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಒಬ್ಬ ಉತ್ತಮ ಶಿಕ್ಷಕಿ ನಿವೃತ್ತಿಯಾಗುತ್ತಿರುವುದು ಹೆಮ್ಮೆಯ ಜೊತೆಗೆ ನೋವಿನ ಕ್ಷಣವೂ ಹೌದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ ಕುಸುಮ ಎನ್….

Read More

ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಜನವರಿ 4 ರಿಂದ 8 ರ ವರೆಗೆ ಮಂಗಳೂರಿನ ವಿವಿಧ ಧಾರ್ಮಿಕ ಕಾರ್ಯದಲ್ಲಿ ಭಾಗಿ …. ! ಭಕ್ತರಿಗೆ ಪಾದ ಪೂಜೆಗೆ ಅವಕಾಶ

ಮಂಗಳೂರು:ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜನವರಿ 4 ರಂದು ಸಂಜೆ 4:00 ಗಂಟೆಗೆ ಸರಿಯಾಗಿ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರ ಪ್ರವೇಶ ಮಾಡಲಿರುವರು ಎಂದು ಗೌರವಾಧ್ಯಕ್ಷರಾದ ಡಾ.ಎಂ ಬಿ ಪುರಾಣಿಕ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಠಾಧೀಶರ ಆಗಮನದ ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು’…

Read More

ಕುದ್ರೋಳಿಯಲ್ಲಿ ವಿಶೇಷ ಗುರುಪೂಜೆ, ರಥೋತ್ಸವ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಕ್ಯಾಲೆಂಡರ್ ಹೊಸ ವರ್ಷದ ಪ್ರಯುಕ್ತ ವಿಶೇಷ ಗುರುಪೂಜೆ, ಗಣಪತಿ ಹೋಮ ಹಾಗು ರಥೋತ್ಸವ ನೆರವೇರಿತು. ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ,ಸದಸ್ಯರಾದ ವೇದಕುಮಾರ್, ಪಿ.ಕೆ.ಗೌರವಿ, ರಾಧಾಕೃಷ್ಣ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಕಾವೂರು, ಜಯರಾಮ‌ ಕಾರಂದೂರು,…

Read More

ಹೊಸ ತನದ ಹುರುಪಿನಲ್ಲಿ ಮತ್ತೆ ಬಂದಿದೆ ಹೊಸ ವರ್ಷ

ಎಲ್ಲರಿಗೂ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಹೌದು ಮತ್ತೆ ಬಂದೇ ಬಿಟ್ಟಿತ್ತು ಕ್ಯಾಲೆಂಡರ್ ಹೊಸ ವರ್ಷ. ಕಳೆದು ಹೋದ ದಿನಗಳಲ್ಲಿ ಅದೆಷ್ಟೋ ತುಂಬಿದ ಕ್ಷಣಗಳು ಬೇಸರದ ನಿಮಿಷಗಳು ಸಂತಸದ ಗಳಿಗೆಗಳು ಕಳೆದು ಹೋಗಿರಬಹುದು. ಅನುಭವದ ಸಂತೆಯಲ್ಲಿ ಆ ದಿನಗಳು ತನ್ನ ಛಾಪನ್ನು ಮೂಡಿಸಿರಬಹುದು. ಕೆಲವರಿಗೆ ಈ ವರ್ಷ ಹರ್ಷವನ್ನು ಇನ್ನು ಕೆಲವರಿಗೆ ಸಂಕಷ್ಟವನ್ನು ತಂದಿರಬಹುದು. ಏಳು ಬೀಳಿನ ಸುತ್ತ ಹೆಜ್ಜೆ ಹಾಕುವ ಜೀವನಕ್ಕೆ ಇದೆಲ್ಲಾ ಮಾಮೂಲಿ ಎಂದು ನೆನೆಯಬೇಕು. ಈ ವರ್ಷ ನನ್ನ ಜೀವನದಲ್ಲಿ ಸಂತಸದ ಸಮಯವನ್ನು ಜಾಸ್ತಿಯೇ…

Read More

ಜನಪ್ರಿಯ ವೈದ್ಯ, ಕವಿ, ಕಲಾವಿದ ಗಡಿನಾಡಿನ ಡಾ. ಜನಾರ್ಧನ ನಾಯ್ಕ್ ಸಿ. ಎಚ್ ಕನ್ನಡ ಭವನದ ಗೌರವಾನ್ವಿತ “ಸಮಾಜ ಸೇವಾ ರತ್ನ ಪ್ರಶಸ್ತಿ 2026” ಕ್ಕೆ ಆಯ್ಕೆ

ಕಾಸರಗೋಡು: ಕಾಸರಗೋಡಿನ ಹೆಮ್ಮೆಯ ವೈದ್ಯ ಶಿರೋಮಣಿ, ದೇಶೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೆರಿಸಿಕೊಂಡಿರುವ ಕವಿಹೃದಯಿ ಡಾ. ಜನಾರ್ದನ ನಾಯ್ಕ್ ಸಿ. ಎಚ್ ಇವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026,ರಂದು ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮ ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ…

Read More

ಪಂಡಿತವರೇಣ್ಯ,, ರಾಜ್ಯ ಪ್ರಶಸ್ತಿ ವಿಜೇತ ಡಾ. ಸಂಗನಗೌಡ ವೆಂಕನಗೌಡ ತಮ್ಮನಗೌಡರಿಗೆ ಕನ್ನಡ ಭವನದ ಶ್ರೇಷ್ಠ “ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ಕ್ಕೆ ಆಯ್ಕೆ.. !

ಕಾಸರಗೋಡು: ಜನಮೆಚ್ಚಿದ ಸಾಹಿತಿ, ಶಿಕ್ಷಕ, ನೂರಾರು ಕೃತಿ, ನೂರಾರು ಸಂಘಟನೆ, ನೂರಾರು ಪ್ರಶಸ್ತಿ, ಪುರಸ್ಕಾರಗಳ ಸರದಾರ ಡಾ. ಸಂಗನಗೌಡ ವೆಂಕನಗೌಡ ತಮ್ಮನ ಗೌಡ ಗದಗ ಇವರಿಗೆ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸುವ ಸೌಭಾಗ್ಯ ಕನ್ನಡ ಭವನದ್ದು. ಇದೇ ಬರುವ 18.01.2026,ಭಾನುವಾರ ಕಾಸರಗೋಡು ಕನ್ನಡ ಭವನ “ರಜತ ಸಂಭ್ರಮ “ಅದ್ದೂರಿ ಕಾರ್ಯಕ್ರಮವಾದ “ನಾಡು -ನುಡಿ ಸಂಭ್ರಮ ” ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ…

Read More

ನಿಟ್ಟೆ ಕುಲಪತಿ ಡಾ.ವಿನಯ್ ಹೆಗ್ಡೆ ನಿಧನಕ್ಕೆ ಶಾಸಕ ಮಂಜುನಾಥ ಭಂಡಾರಿ ಸಂತಾಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‌ಶೈಕ್ಷಣಿಕ-ಕೈಗಾರಿಕಾ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ವಿನಯ್ ಹೆಗ್ಡೆ ಅವರು ಶಿಕ್ಷಣ ತಜ್ಞ ಮಾತ್ರವಲ್ಲದೆ ಉದ್ಯಮಿ, ಸಮಾಜ ಸೇವಕರಾಗಿ ಹೆಸರು ಪಡೆದಿದ್ದರು. ಅವರು ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸಹಿತ ಹಲವು…

Read More

ಜ್ವರ ಬಾಧಿಸಿ ಯುವಕನೊಬ್ಬ ಚಿಕಿತ್ಸೆಗೆ ಸ್ಪಂಧಿಸಿದೆ ಸಾವು

ಮಂಜೇಶ್ವರ: ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂಧಿಸಿದೆ ಸಾವನ್ನಪ್ಪಿದ್ದಾನೆ.ಕುಂಜತ್ತೂರು ಉದ್ಯಾವರ ನಿವಾಸಿ ಉಮ್ಮರ್ ಫಾರೂಕ್ (26) ಸಾವನ್ನಪ್ಪಿದ ದುರ್ದೈವಿ. ಇವರಿಗೆ ಕಳೆದ ಶನಿವಾರದಿಂದ ಜ್ವರ ಬಾಧಿಸಿತ್ತೆನ್ನಲಾಗಿದೆ.ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದರೂ ಜ್ವರ ವಾಸಿಯಾಗದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಉಮ್ಮರ್ ಫಾರೂಕ್ ಹೊಸಂಗಡಿಯ ಮಟನ್‌ ಸ್ಟಾಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.

Read More

ಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು

ಮಂಜೇಶ್ವರ : ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮದ್ರಸಾ ಅಧ್ಯಾಪಕನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ 14 ವರ್ಷ ಕಠಿಣ ಸಜೆ ಹಾಗೂ 40,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕಿದೂರು ನಿವಾಸಿ ಎ. ಅಬ್ದುಲ್ ಹಮೀದ್ (46) ಶಿಕ್ಷಗೊಳಗಾದ ಆರೋಪಿ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಮೂರು ತಿಂಗಳು ಹೆಚ್ಚು ವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ನಿವಾಸಿಯಾಗಿರುವ 12…

Read More

ರಾಜ್ಯ ಸರಕಾರಿ ಸಾರಿಗೆ ನೌಕರರು ಮುಂದಿನ ಆರು ತಿಂಗಳವರೆಗೆ ಯಾವುದೇ ರೀತಿಯ ಮುಷ್ಕರ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಸರಕಾರ.. !

ಬೆಂಗಳೂರು : ಹೊಸ ವರ್ಷದ ಸಂಭ್ರಮದಲ್ಲಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಸರ್ಕಾರ, ಸಾರಿಗೆ ನೌಕರರು ಮುಂದಿನ ಆರು ತಿಂಗಳವರೆಗೆ ಯಾವುದೇ ರೀತಿಯ ಮುಷ್ಕರ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 2026ರ ಜನವರಿ 1 ರಿಂದ ಜೂನ್ ತಿಂಗಳವರೆಗೆ ಸಾರಿಗೆ ನೌಕರರು ಪ್ರತಿಭಟನೆ ಅಥವಾ ಮುಷ್ಕರ ನಡೆಸುವಂತಿಲ್ಲ. ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿ ಮುಷ್ಕರಕ್ಕೆ ಮುಂದಾದಲ್ಲಿ, ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು…

Read More
error: Content is protected !!