ಮಂಗಳೂರು ಸರಕಾರಿ ಸಂಸ್ಥೆಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ .. !

ಮಂಗಳೂರು: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಪೊಲೀಸ್ ಇಲಾಖೆಗಳ , ಜಂಟಿ ಆಶ್ರಯದಲ್ಲಿ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತ್ತು . ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಎಚ್.ವಿ. ಮಾತನಾಡಿ , ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ ಭಾರತದ ನಾಗರಿಕರಿಗೆ ಮುಖ್ಯವಾಗಿದೆ . ಡಾ.ಬಿ.ಆರ್.ಅಂಬೇಡ್ಕರ್ ಅವರು ನಾಗರಿಕರಿಗೆ ಸರಕಾರದಿಂದ ಬರುವ ಎಲ್ಲಾ ಅವಶ್ಯಕ…

Read More

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದೆ : ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿರುವ ಅತ್ಯಂತ ಗಂಭೀರ ವಿಚಾರವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಜಾರಿ ನಿರ್ದೇಶನಾಲಯದ(ಇಡಿ) 2025ರ ನವೆಂಬರ್ 8ರ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ಚೌಟ ಅವರು, ಎಸ್‌ಡಿಪಿಐಯು ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ. ಅಷ್ಟೇಅಲ್ಲ, ಈ…

Read More

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಭೇಟಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪತ್ನಿಗೆ ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ …. !

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಭೇಟಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪತ್ನಿಗೆ ಅವಕಾಶ ನೀಡಿರುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಮರ್ಥಿಸಿಕೊಂಡಿದ್ದಾರೆ. ಅವರೇನು ಕ್ರಿಮಿನಲ್ ಅಲ್ಲ ಅವರು ಬಿಜೆಪಿ ಪಕ್ಷದ ಸದಸ್ಯೆ ಎಂದು ಹೇಳಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಬೇಕು ಅನ್ನೋ ವಿಚಾರದ ಪರವಾಗಿ ನಾನೂ‌ ಇದ್ದೇನೆ. ಸಾಮಾನ್ಯ ಕಾರ್ಯಕರ್ತನಿಗೆ ಈ ಅವಕಾಶ ಕೊಡಬೇಕು ಅನ್ನುವವರ ವಾದ ಸರಿಯಿದೆ. ಆದರೆ ಕಿಶೋರ್ ಕುಮಾರ್ ಅವರ ಪತ್ನಿಯ ವಿಚಾರವಾಗಿ ನಡೆಯುತ್ತಿರುವ ವಿವಾದ…

Read More

ಡಿಸೆಂಬರ್ 8: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸಿಪಿಐಎಂನಿಂದ ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ ಬೃಹತ್ ಹೋರಾಟ… !

ಮಂಗಳೂರು: ಜಿಲ್ಲೆಯ ಜನ ಸಾಮಾನ್ಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ, ಜಿಲ್ಲೆಯ ಜನರ ಬದುಕಿನ ಮೌಲ್ಯಗಳ ಬಲವರ್ಧನೆಗಾಗಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ತಾ. 08-12-2025ರಂದು “ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆ ಅಡಿಯಲ್ಲಿ ಬೃಹತ್ ಹೋರಾಟ ರೂಪಿಸಲಾಗಿದ್ದು ಈ ಬೃಹತ್ ಹೋರಾಟದಲ್ಲಿ ಮಂಗಳೂರು ನಗರದ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ….

Read More

ಸರ್ಕಾರಿ ಪದವಿ ಪೂರ್ವ ಕಾಲೇಜು ಹಂಪನಕಟ್ಟೆ .ಕಂಪ್ಯೂಟ‌ರ್ ಪ್ರಯೋಗಾಲಯ ಕೊಠಡಿ ಉದ್ಘಾಟನೆ

ಸರ್ಕಾರಿ ಪದವಿ ಪೂರ್ವ ಕಾಲೇಜು ಹಂಪನಕಟ್ಟೆಯಲ್ಲಿ ರೂ. 5.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಂಪ್ಯೂಟ‌ರ್ ಪ್ರಯೋಗಾಲಯದ ಕೊಠಡಿಯನ್ನು ಶಾಸಕ ಡಿ.ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, 2025-26 ನೇ ಸಾಲಿನಿಂದ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಪ್ರಾರಂಭಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯವಿರುವ ಅನೇಕ ವಿಷಯಗಳ ಬಗ್ಗೆ ಕಾಲೇಜಿನವರು ನನ್ನ ಬಳಿ ಮನವಿ ಮಾಡಿದ್ದರು. ಅದರಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಕಂಪ್ಯೂಟರ್ ಹಾಗೂ ಸುಸಜ್ಜಿತ…

Read More

ಜನವರಿ 11 ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮ

ಮಂಗಳೂರು:ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ , ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.), ಉಳ್ಳಾಲ , ರಾಮರಾಜ ಕ್ಷತ್ರಿಯ ಮಹಿಳಾ ಸಂಘ ಉಳ್ಳಾಲಅರ್ಪಿಸುವ ಕೃಷ್ಣ ಜೆ. ಪಾಲೆಮಾ‌ರ್ ಇವರ ಭವ್ಯ ಸಾರಥ್ಯದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮವು ಜನವರಿ 11 ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮುಂಜಾನೆ 7.00 ರಿಂದ ನಡೆಯಲಿದೆ ಮತ್ತು ಸಂಜೆ 6.00ಕ್ಕೆ ‘ಪದಗ್ರಹಣ ಕಾರ್ಯಕ್ರಮ’ ನಡೆಯಲಿದೆ . ಯುವ ಸಂಭ್ರಮ ಕ್ರೀಡೋತ್ಸವದಲ್ಲಿ ಓವರ್-ಆರ್ಮ್ ಕ್ರಿಕೆಟ್ ಮತ್ತು…

Read More

ವಿಧಿಯೇ ನೀನೆಷ್ಟು ಕ್ರೂರಿ …. !

ಮಂಗಳೂರು: ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ ಮಗು ಹಿಂತಿರುಗಿ ಬರುತ್ತಿದ್ದಾಗ ಕಾರು ಡಿಕ್ಕಿಯಾಗಿ ಮೃತ ಪಟ್ಟ ದಾರುಣ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.ಅಜ್ಜನ ಜೊತೆಗೆ ಕೈ ಹಿಡಿದು ತಿಂಡಿಗೆ ತೆರಳಿದ್ದ ಮಗು ಹೆದ್ದಾರಿಯಲ್ಲಿ ಕೈ ಬಿಟ್ಟು ಹಿಂದಕ್ಕೆ ತೆರಳಿದ ವೇಳೆ ಕಾರು ಡಿಕ್ಕಿಯಾಗಿ ಮೂರು ವರ್ಷದ ಮಗು ದಾರುಣ ಮೃತಪಟ್ಟಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಘಟನೆ ನಡೆದಿದೆ.ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ…

Read More

ಕಾಂತಾರ ಸಿನೆಮಾಗೆ ಜಯ ತಂದ ಬಾರೆಬೈಲು ಪಂಜುರ್ಲಿ-ಪರಿವಾರ ದೈವಗಳಿಗೆ ರಿಷಬ್ ಶೆಟ್ಟಿ ಕೋಲ

ಮಂಗಳೂರು: ‘ಕಾಂತಾರ-1’ ಸಿನಿಮಾ ಯಶಸ್ಸಿನ ಸಂಭ್ರಮವು ಚಲನಚಿತ್ರರಂಗದಾಚೆಗೂ ದೈವ ನಂಬಿಕೆಯ ಮೈದಾನಕ್ಕೆ ವಿಸ್ತರಿಸಿದ್ದಂತಹ ದೃಶ್ಯ ಗುರುವಾರ ರಾತ್ರಿ ಮಂಗಳೂರಿನಲ್ಲಿ ಕಂಡುಬಂತು. ನಟ-ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ಕುಟುಂಬ ಸಮೇತರಾಗಿ ಬಾರಬೈಲ್ ದೈವಸ್ಥಾನದಲ್ಲಿ ಹರಕೆಯ ಕೋಲ ಸಮರ್ಪಿಸಿದರು. ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಗಳಿಗೆ ನಡೆದ ಈ ನೇಮದಲ್ಲಿ ರಿಷಬ್ ಶೆಟ್ಟಿ ತಮ್ಮ ಮನದಾಳದ ಕೃತಜ್ಞತೆಯನ್ನು ದೈವಕ್ಕೆ ಅರ್ಪಿಸಿದರು. ‘ಕಾಂತಾರ’ ಸಿನಿಮಾದಲ್ಲಿ ದೈವ-ನಂಬಿಕೆ ಮಹತ್ವದ ಅಂಶವಾಗಿದ್ದುದರಿಂದ, ಚಿತ್ರದ ಯಶಸ್ಸಿನ ನಂತರ ಈ ಹರಕೆ ನೆರವೇರಿಸುವುದು ವಿಶಿಷ್ಟ ಅರ್ಥವನ್ನೂ…

Read More

ಬಿಜೆಪಿಯಲ್ಲಿ ಹೈಕಮಾಂಡ್ ಇದೆ ಅವರನ್ನು ಏಜೆಂಟ್‌ ಎನ್ನುತ್ತೀರಾ ಆರ್‌.ಅಶೋಕ…. ? ಎಂದು ಪ್ರಶ್ನೆ ಮಾಡಿದ ಮಾಜಿ ಸಚಿವ ಬಿ.ರಮಾನಾಥ ರೈ

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಏಜೆಂಟ್‌’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿರುವುದು ಸರಿಯಲ್ಲ ಬಿಜೆಪಿಯಲ್ಲಿ ಕೂಡ ಹೈಕಮಾಂಡ್ ಇದೆ ಅವರನ್ನು ಈ ರೀತಿಯಾಗಿಯೇ ಟೀಕಿಸುತ್ತಾರೆಯೇ ಎಂದು ಆರ್‌.ಅಶೋಕ್ ಗೆ ಮಾಜಿ ಸಚಿವರಾದ ಬಿ.ರಮಾನಾಥ ರೈ ಪ್ರಶ್ನೆ ಮಾಡಿದರು . ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಅಶೋಕ್ ಅವರು ಕಿಡಿಕೇಡಿ ತನದ ಹೇಳಿಕೆಯನ್ನು ನೀಡಿದ್ದಾರೆ .ಪ್ರಬುದ್ಧತೆ ಇಲ್ಲದಂತಹ ಮಾತುಗಳನ್ನು ತುಟಿ ಬಿಚ್ಚಿ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.9ರಂದು ಸ್ವಚ್ಛತಾ ಪೌರ ಕಾರ್ಮಿಕರಿಂದ ಕಾಲ್ನಡಿಗೆ ಜಾಥಾ…. !

ದ.ಕ. ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ಮೂಲಕ ದುಡಿಯುತ್ತಿರುವ ಸ್ವಚ್ಛತಾ ಪೌರಕಾರ್ಮಿಕರು ಡಿ.9ರಂದು ತಮ್ಮ ಕೆಲಸ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೇಡಿಹಿಲ್‌ನ ಪತ್ರಿಕಾ ಭವನದ ಬಳಿಯಿಂದ ಜಿಪಂ ತನಕ ಕಾಲ್ನಡಿಗೆ ಜಾಥಾ ನಡೆಸಲಿರುವರು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಆನಂದ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಪ್ರತಿಭಟನೆ…

Read More
error: Content is protected !!