ಆಳ ಸಮುದ್ರದಲ್ಲಿ ಭಾರತೀಯ ತಟರಕ್ಷಣಾ ಪಡೆಯ ಸಾಹಸ ಕಾರ್ಯಾಚರಣೆಮುಳುಗುತ್ತಿದ್ದ ಮೀನುಗಾರಿಕಾ ಬೋಟ್‌ನಲ್ಲಿದ್ದ ಆರು ಮೀನುಗಾರರ ರಕ್ಷಣೆ
ಮಂಗಳೂರು, ಜೂನ್ 30: ಭಾರತೀಯ ತಟರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಆಳ ಸಮುದ್ರದಲ್ಲಿ ಅತ್ಯಂತ ಸವಾಲಿನ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯಕ್ಕೆ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಉಡುಪಿಯ ‘ಮಂಜು ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್‌ನ ತಳಭಾಗಕ್ಕೆ ಹಾನಿಯಾಗಿದ್ದು, ಸಮುದ್ರದ ನೀರು ಬೋಟ್‌ನೊಳಗೆ ನುಗ್ಗಲಾರಂಭಿಸಿತ್ತು. ಪರಿಣಾಮ ಬೋಟ್ ಮುಳುಗುವ ಹಂತ ತಲುಪಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರು…
