ಯೂನಿಯನ್‌ಗಳ ಮತ್ತು ಅಧಿಕಾರಿಗಳ ನಡುವಿನ ಮಾತುಕತೆ ಯಶಸ್ವಿ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಬರ್ ಸೇವೆ ಪುನರಾರಂಭ
ಮಂಗಳೂರು; ಜೂ29: ಉಬರ್ ಕಂಪೆನಿಯ ಅನ್ಯಾಯದ ನೀತಿ ಹಾಗೂ ಚಾಲಕರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುತ್ತಿರುವ ಕ್ರಮಗಳನ್ನು ಖಂಡಿಸಿ ಮಂಗಳೂರು ಆನ್ ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಪೆನಿಯೊಂದಿಗೆ ಹಲವು ಬೇಡಿಕೆಗಳನ್ನು ನೀಡಿ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು ಇದಕ್ಕೆ ಸ್ಪಂದಿಸಿದ ವಿಮಾನ ನಿಲ್ದಾನದ ಅಧಿಕಾರಿಗಳು ಇವತ್ತು ಯೂನಿಯನ್ ಗಳ ನಾಯಕರ ಸಭೆ ಕರೆಸಿ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳನ್ನು ಪೂರೈಸುವುದಾಗಿ ಹೇಳಿದರು. ಈ ಸಭೆಯಲ್ಲಿ ದ.ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ…
