ಜೆಇಇ ಅಡ್ವಾನ್ಸ್‌ನಲ್ಲಿ AIR 79: ಮಂಗಳೂರಿನ ವಿಶ್ರುತ್ ಕೃಷ್ಣ ಭಟ್‌ಗೆ ಶಾಸಕ ವೇದವ್ಯಾಸ ಕಾಮತ್ ಅಭಿನಂದನೆ

ಜೆಇಇ ಅಡ್ವಾನ್ಸ್ 2026ರಲ್ಲಿ ಆಲ್ ಇಂಡಿಯಾ(ಎಐಆರ್) 79ನೇ ರ‍್ಯಾಂಕ್ ಮತ್ತು ಜೆಇಇ ಮೈನ್ಸ್ 2026ರಲ್ಲಿ ಆಲ್ ಇಂಡಿಯಾ 335ನೇ ರ‍್ಯಾಂಕ್ ಗಳಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಂದೂರ್ ವೆಲ್ ನಿವಾಸಿ ಬಿ.ವಿಶ್ರುತ್‌ ಕೃಷ್ಣ ಆರ್.ಭಟ್‌ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಸನ್ಮಾನಿಸಿದರು. ಸುರತ್ಕಲ್ ಎನ್‌ಐಟಿಕೆ ಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಬಡೆಕೈ ರಾಮಚಂದ್ರ ಭಟ್ ಮತ್ತು ಮಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಡಾ.ಪೂರ್ಣಿಮಾ ಆರ್.ಭಟ್ ದಂಪತಿಗಳ ಪುತ್ರನಾಗಿರುವ ಈ…

Read More

ಮುಂಗಾರು ಮಳೆ ಹಿನ್ನೆಲೆ: ಪುತ್ತೂರಿನಲ್ಲಿ ಎನ್‌ಡಿಆರ್‌ಎಫ್ ತಂಡ ಮೊಕ್ಕಾಂ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನೆಲೆ ಹಾಗೂ ಭಾರೀ ಮಳೆಯ ಮುನ್ಸೂಚನೆಯ ಕಾರಣ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಜಿಲ್ಲೆಗೆ ನಿಯೋಜಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಎನ್‌ಡಿಆರ್‌ಎಫ್ ತಂಡವು ಪುತ್ತೂರಿನಲ್ಲಿ ಮೊಕ್ಕಾಂ ಹೂಡಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಒಟ್ಟು 30 ಸದಸ್ಯರನ್ನು ಒಳಗೊಂಡಿರುವ ಈ ವಿಶೇಷ ತಂಡವು ಪ್ರವಾಹ, ಭೂಕುಸಿತ, ಕಟ್ಟಡ ಕುಸಿತ, ರಾಸಾಯನಿಕ ದುರಂತ, ವಿಕಿರಣ ಸೋರಿಕೆ ಸೇರಿದಂತೆ ವಿವಿಧ ರೀತಿಯ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಮತ್ತು…

Read More

ಹಿರಿಯ ಶಿಕ್ಷಕಿ ವೀಣಾ ಡಿಸೋಜ ನಿಧನಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಶಿಕ್ಷಕಿಯ ಅಗಲಿಕೆಗೆ ಸಂತಾಪ

ಮುನ್ನೂರು, ಜೂ. 8: ರಾಣಿಪುರ ನಿವಾಸಿ ಹಾಗೂ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ವೀಣಾ ಡಿಸೋಜಾ (49) ಅವರು ಜೂನ್ 7ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿಧನವು ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತಿ ಅರ್ಬನ್ ಡಿಸೋಜ, ಪುತ್ರ ವಿನ್ಸ್ಟನ್ ಬ್ರಯಾನ್ ಡಿಸೋಜ ಹಾಗೂ ಅಪಾರ ಬಂಧು-ಬಳಗವನ್ನು…

Read More

ಜೂನ್ 13ರಂದು ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ, ನಿರ್ಗತಿಕರ ಆಶ್ರಮದ ಉದ್ಘಾಟನೆ

ಉಡುಪಿ: ಸಿದ್ದಾಪುರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಲಾಗಿರುವ ಆಶ್ರಮದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಜೂನ್ 13 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.‘ಬಡವರ ಸೇವೆ ಕ್ರಿಸ್ತರ ಸೇವೆ’ ಹಬ್ಬದ ಸಂದೇಶ ವಾಕ್ಯವಾಗಿದ್ದು, ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ನೂತನ ಆಶ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಲಿದ್ದು ಬಳಿಕ ಮಹೋತ್ಸವದ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಕನ್ನಡ ಭಾಷೆಯಲ್ಲಿ…

Read More

ಅಂಬಾಗಿಲು: ರಸ್ತೆ ಬದಿಯ ಮಣ್ಣು ಕುಸಿತ: ಮಣ್ಣಿನಲ್ಲಿ ಸಿಲುಕಿದ ತಂಪುಪಾನೀಯ‌ ಸಾಗಾಟದ ವಾಹನ

ಉಡುಪಿ: ರಸ್ತೆ ಬದಿಯ ಮಣ್ಣು ಕುಸಿದ ಪರಿಣಾಮ ತಂಪು ಪಾನೀಯ ಸಾಗಾಟದ ವಾಹನವೊಂದು ಮಣ್ಣಿನಲ್ಲಿ ಸಿಲುಕಿಕೊಂಡ ಘಟನೆ ಅಂಬಾಗಿಲು–ಮಣಿಪಾಲ ರಸ್ತೆಯ ಸುಜಾತಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಶನಿವಾರ ನಡೆದಿದೆ. ಮಣ್ಣಿನಲ್ಲಿ ಸಿಲುಕಿದ ವಾಹನವನ್ನು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಯಿತು. ಚರಂಡಿ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಹೊಂಡವನ್ನು ತೋಡಲಾಗಿದ್ದು, ಕಾಮಗಾರಿ ಬಳಿಕ ಅದನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತೀಚಿನ ಮಳೆಯಿಂದ ನೀರು ಹರಿದು ಮಣ್ಣು ಸಡಿಲಗೊಂಡಿದ್ದು, ರಸ್ತೆಯ ಅಂಚಿನಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ರಸ್ತೆಯ ಅಂಚಿನ…

Read More

ರಾಜಕೀಯ ಗುರು ಪೂಜಾರಿಯವರ ಆಶೀರ್ವಾದ ಪಡೆದ ಆರೋಗ್ಯ ಸಚಿವ ಯು.ಟಿ. ಖಾದರ್‘ಜಿಲ್ಲೆಗೆ ಗೌರವ ತರುವ ಕೆಲಸ ಮಾಡುತ್ತೇನೆ’

ಬಂಟ್ವಾಳ, ಜೂ. 8: ಜಿಲ್ಲೆಯ ಹಿಂದಿನ ಜನಪ್ರತಿನಿಧಿಗಳಂತೆ ತಾನೂ ಕಾರ್ಯನಿರ್ವಹಿಸಿ ಜಿಲ್ಲೆಗೆ ಗೌರವ ತರುವ ಕೆಲಸ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ಭಾನುವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಅವರು ಮಾತನಾಡಿದರು. “ಜನಾರ್ಧನ ಪೂಜಾರಿಯವರು ನನ್ನ ರಾಜಕೀಯ ಗುರುಗಳು. ಕಾಲೇಜು ದಿನಗಳಿಂದಲೇ ತಂದೆಯಷ್ಟೇ ಪ್ರೀತಿ, ಮಾರ್ಗದರ್ಶನ ನೀಡಿ ರಾಜಕೀಯವಾಗಿ ಬೆಳೆಸಿದ್ದಾರೆ. ತಪ್ಪು ಮಾಡಿದಾಗ ತಿದ್ದಿ, ಉತ್ತಮ…

Read More

ಮಳೆಗಾಲದ ಅಬ್ಬರ: ಮಲ್ಪೆ ಬೀಚ್‌ನಲ್ಲಿ ಸಮುದ್ರ ಪ್ರವೇಶ ನಿಷೇಧ

ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಪಾಯಕಾರಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿಯುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಡೆಬೇಲಿ ಅಳವಡಿಸಲಾಗಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಲ್ಪೆ ಬೀಚ್‌ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಮಳೆಗಾಲದಲ್ಲಿ ಸಮುದ್ರದ ಸ್ವಭಾವ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಗಾಳಿ ಒತ್ತಡ ಹೆಚ್ಚಾದಂತೆ ಅಲೆಗಳ ಅಬ್ಬರ ತೀವ್ರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯಗಳನ್ನು…

Read More

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಯರ ಬ್ಯಾಗ್ ಕಳವು ಮಡಗಾಂವ್ ನಿಲ್ದಾಣದಲ್ಲಿ ನಡೆದ ಘಟನೆ; ಭದ್ರತೆ ಕೊರತೆ ಬಗ್ಗೆ ಪ್ರಯಾಣಿಕರ ಆಕ್ರೋಶ

ಬಂಟ್ವಾಳ: ಮುಂಬಾಯಿಂದ ಮಂಗಳೂರಿಗೆ ತೆರಳುವ ಮತ್ಸ್ಯಗಂಧ ಎಕ್ಸ್ ಪ್ರೆಸ್ ರೈಲಿನಲ್ಲಿ ಬೇರೆ ಬೇರೆ ಬೋಗಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಇಬ್ಬರು ಮಹಿಳಾ ಪ್ರಯಾಣಿಕರ ಅಮೂಲ್ಯ ವಸ್ತುಗಳಿದ್ದ ಬ್ಯಾಗ್ ಕಳವು ನಡೆದಿದೆ. ಮಡಗಾಂವ್ ರೈಲು ನಿಲ್ದಾಣದಲ್ಲಿ ಹತ್ತು ನಿಮಿಷಗಳ ರೈಲು ನಿಲ್ಲಿಸಿದ್ದ ವೇಳೆ ಕಳವು ನಡೆದಿದೆ. ರೈಲು ಸಂಖ್ಯೆ 12619 ರಲ್ಲಿ ಪ್ರಯಾಣಿಸುತ್ತಿದ್ದ ಮೂಲ್ಕಿ ಮೂಲದ ರಜನಿ ಶೆಟ್ಟಿ ಹಾಗೂ ಸುರತ್ಕಲ್ ಮೂಲದ ವಿನಯ ಶೆಟ್ಟಿ ಎಂಬಿಬ್ಬರ ಬ್ಯಾಗ್ ಕಳವು ನಡೆದಿದೆ. ಬೋಗಿ ಸಂಖ್ಯೆ ಎಸ್. ೫ ಹಾಗೂ…

Read More

ಕಣ್ಣೂರು ವಾರ್ಡಿನಲ್ಲಿ ₹45 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನ ಶ್ರೀ ವೈದ್ಯನಾಥ ದೇವಸ್ಥಾನದ ಬಳಿ ಕಾವೇರಂಗಡಿ ಯೋಗೀಶ್ ಮನೆಯವರೆಗೆ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿಯು 45ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು. ನಂತರದ ಮಾತನಾಡಿದ ಶಾಸಕರು, ಇಲ್ಲಿನ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಂತೆ ಸುಮಾರು 300 ಮೀಟರ್ ಉದ್ದದ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಲಿದ್ದು, ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಾವತಿ ವಿಶ್ವನಾಥ್ ರವರ…

Read More

ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಕುರಿತು ಕೀಳಾಗಿ ಮಾತನಾಡಿರುವ ಜತೆಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ಕಾನೂನುಕ್ರಮ ಕ್ರಮಕ್ಕೆ ಆಗ್ರಹಿಸಿ ಹಕ್ಕೋತ್ತಾಯ

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಅಧ್ಯಕ್ಷ ಭುವನೇಶ್ ಪಚಿನಡ್ಕ ಇವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ಉಪಸ್ಥಿತಿಯಲ್ಲಿ ತಾಲೂಕು ಕಛೇರಿ ಬಂಟ್ವಾಳ ದಲ್ಲಿ ಹರಿಕೃಷ್ಣ ಬಂಟ್ವಾಳ ಖಂಡನಾ ನಿರ್ಣಯ ಹಕ್ಕೋತ್ತಾಯವನ್ನು ಮಂಡಿಸಿ ಬಂಟ್ವಾಳ ತಹಶೀಲ್ದಾರರು ಮಂಜುನಾಥ್ ಇವರಿಗೆ ಮನವಿ ನೀಡಲಾಯಿತು ಹಾಗೂ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಇವರಿಗೂ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಬೂಡದ ಅದ್ಯಕ್ಷರು ಬೇಬಿ ಕುಂದರ್, ಸಂಘದ ಮಾಜಿ ಅಧ್ಯಕ್ಷರುಗಳು ರಾಮಪ್ಪ…

Read More
error: Content is protected !!