ಕಾರ್ಯಕರ್ತರ ಶ್ರಮ ಗೆಲುವಿನ ಸೂತ್ರ-ಆದರ್ಶ ಬಿ ಎಂ

ಕಾರ್ಯಕರ್ತರು ಗಳ ಶ್ರಮ ಹಾಗೂ ಸಿದ್ದಂತಗಳ ಮೇಲಿನ ನಂಬಿಕೆ ಗೆಲುವಿನ ಸೂತ್ರ.. ಗೆಲುವು ಪರಿಶ್ರಮಕ್ಕೆ ಮಾತ್ರ ದೊರೆಯುತ್ತದೆ ಎಂದುಬಿಜೆಪಿ ಪೈವಳಿಕೆ ಪೆರ್ವೋಡಿ ವಾರ್ಡ್ ಸಮ್ಮೇಳನ ಉದ್ಘಾಟಿಸಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಸಂಘಟನಾ ಚಟುವಟಿಕೆ, ಹಾಗೂ ಪಕ್ಷದ ಕಾರ್ಯಕ್ರಮ ಗಳ ವಿವರ ನೀಡಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಪಂಚಾಯತ್ ಸಮಿತಿ ಅಧ್ಯಕ್ಷರಾದ ಸತ್ಯ ಶಂಕರ್ ಭಟ್ ಪ್ರವೀಣ್ ರೈ ಪಟ್ಲ, ಸುಬ್ರಮಣ್ಯ ಭಟ್, ಗಣೇಶ ಪೆರ್ವೋಡಿ, ಚಂದ್ರವತಿ ಶೆಟ್ಟಿ, ಕಮಲ,…

Read More

ಉಪ್ಪಳ ಶಾರದಾ ನಗರದಲ್ಲಿ ಭೀಕರ ಕಡಲ್ಕೊರೆತ .ಹಲವಾರು ಮನೆಗಳು ಅತಂತ್ರ .ಕಡಲ್ಕೊರೆತ ಪ್ರದೇಶಕ್ಕೆ ಕೆ ಆರ್ ಜಯಾನಂದ ನಿಯೋಗ ಭೇಟಿ.ತುರ್ತು ಪರಿಹಾರಕ್ಕೆ ಆಗ್ರಹ

ಉಪ್ಪಳ : ಭೀಕರ ಕಡಲ್ಕೊರೆತದಿಂದ ಉಪ್ಪಳ ಪರಿಸರದ ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪರ, ಪೆರಿಂಗಡಿ ವರೆಗಿನ 5ಕಿ.ಮೀ ಪ್ರದೇಶದ ಕಡಲ ತಡೆಗೋಡೆ ಸಹಿತ ಪುಲಿಮುಟ್ಟು ಸಮುದ್ರ ಕೊಚ್ಚಿ ಕೊಂಡೊಯ್ದು ಸುಮಾರು 400 ಕೂಟುಂಬಗಳ ಬದುಕಿನ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಇಡೀ ಪ್ರದೇಶವನ್ನು ಕಢಲುಆಕ್ರಮಿಸಿ, ರೌದ್ರ ತೆರೆಗಳೊಂದಿಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನರು ಭೀತಿಯೊಂದಿಗೆ ಬದುಕುತ್ತಿದ್ದಾರೆ. ಈ ಪ್ರದೇಶಗಳಿಗೆ ಆದಿತ್ಯವಾರ ಸಂಜೆ ಸಿಪಿಎಂ ಸೆಕ್ರೇಟರಿಯೇಟ್ ಸದಸ್ಯ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ನೇತೃತ್ವದ ನಿಯೋಗ…

Read More

ಕಾವ್ಯದ ಮಾತು ಧ್ವನಿಯಾಗಬೇಕು- ಡಾ ಪುರುಷೋತ್ತಮ ಬಿಳಿಮಲೆ

ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಿ. ಕಾಲದ ಓಗಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು.ಕಾವ್ಯದ ಮಾತು ಧ್ವನಿ ಯಾಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಯನ್ನು ಅನುಸರಿಸಿದಾಗ ಆಶಯಗಳು ಪ್ರತಿಧ್ವನಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ರಂಗಮಂಡಲ ಹಾಗೂ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಸಮಿತಿ ಆಶ್ರಯದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ ಹನ್ನೊಂದನೆಯ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ…

Read More

ಧರ್ಮಸ್ಥಳ ಹತ್ಯಾ ಪ್ರಕರಣ. ಸಮಗ್ರ ತನಿಖೆಗೆ ವಿಮನ್ ಇಂಡ್ಯಾ ಮೂಮೆಂಟ್ ಆಗ್ರಹ

ಮಂಜೇಶ್ವರ: ಕರ್ನಾಟಕದ ಧರ್ಮಸ್ಥಳದಲ್ಲಿ ಮಲಯಾಳಿಗಳು ಸೇರಿದಂತೆ ನೂರಾರು ಮಹಿಳೆಯರ ಹತ್ಯೆಯಾಗಿರುವ ಬಗ್ಗೆ ಶುಚೀಕರಣ ಕಾರ್ಮಿಕರೊಬ್ಬರು ಬಹಿರಂಗಪಡಿಸಿದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ವಿಮನ್ ಇಂಡ್ಯಾ ಮೂಮೆಂಟ್ ರಾಜ್ಯ ಖಜಾಂಚಿ ಮಂಜುಷಾ ಮಾವಿಲಾಡಂ ಆಗ್ರಹಿಸಿದರು. ಧರ್ಮಸ್ಥಳದ ಶುಚೀಕರಣ ಕಾರ್ಮಿಕರೊಬ್ಬರು ಹೇಳುವಂತೆ ಬಾಲಕಿಯರು ಹಾಗೂ ಯುವತಿಯರು ಸೇರಿದಂತೆ 450 ಕ್ಕೂ ಹೆಚ್ಚು ಮಂದಿಯನ್ನು ಕೆಲವು ಜನರ ಸೂಚನೆಯ ಮೇರೆಗೆ ಸಮಾಧಿ ಮಾಡಲಾಗಿದೆ ಎಂದು ಬಹಿರಂಗಪಡಿಸಿರುವುದು ಆಘಾತಕಾರಿ ಸಂಗತಿ . ಕಳೆದ ಕೆಲವು ವರ್ಷಗಳಲ್ಲಿ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೀತಾಂಗೋಳಿ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯು ಭಾನುವಾರ ಸೀತಾಂಗೋಳಿ ಸಮೀಪದ ಪೆರಡಾನಮೂಲೆ ಕಮ್ಯುನಿಟಿ ಹಾಲ್’ನಲ್ಲಿ ನಡೆಯಿತು . ಒಕ್ಕೂಟದ ಅಧಕ್ಷರಾದ ಶ್ರೀಮತಿ ಸುಕೇಶಿನಿ ದೀಪ ಬೆಳಗಿಸಿ ಉದ್ಘಾಟಿಸಿದರು . ಈ ಒಕ್ಕೂಟ ಸಭೆಯಲ್ಲಿ ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ , ಸೀತಾಂಗೋಳಿ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸರಿತಾ ಸೀತಾಂಗೋಳಿ , ಹಾಗೂ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಪೆರಡಾನಮೂಲೆ ,…

Read More

ಡಾ. ಸದಾಶಿವ ಶೆಟ್ಟಿ ಪ್ರಾಯೋಜಕತ್ವದ ಉಚಿತ ವಿಮೆ ಪಾಲಿಸಿ ವಿತರಣಾ ಕಾರ್ಯಕ್ರಮ:

ಮಂಜೇಶ್ವರ : ತನ್ನ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸಬೇಕು, ಆ ನಿಟ್ಟಿನಲ್ಲಿ ಸಮಾಜದಲ್ಲಿರುವ ಅಶಕ್ತರ ಪಾಲಿಗೆ ಬೆಳಕಾಗಬೇಕೆಂದು ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿಯವರ ಕನಸಿನ ಕೂಸಾದ ಉಚಿತ ಆರೋಗ್ಯ ವಿಮೆ/ ಅಪಘಾತ ವಿಮೆಯ ಯೋಜನೆಯು ಈಗಾಗಲೇ ಕೈಗೂಡಿದ್ದು ಇದರ ಅಪಘಾತ ವಿಮಾ ಪಾಲಿಸಿ ವಿತರಣೆ ಚಿಗುರುಪಾದೆಯಲ್ಲಿರುವ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ಕಚೇರಿಯಲ್ಲಿ ಜರಗಿತು. ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ…

Read More

ಕೊಂಡೆವೂರು ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.ಶಾಸ್ತ್ರ ಮತ್ತು ಶಸ್ತ್ರ ಕ್ಕೆ ಅವಿನಾಭಾವ ಸಂಬಂಧ ಇದೆ :ಅಜಿತ್ ಹನುಮಕ್ಕ ನವರ್

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ವನ್ನು ಆಚರಿಸಲಾಯಿತು . ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡಿದರು.ಈ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡುತ್ತಾ ಭಾರತೀಯ ಸೇನೆ ಪ್ರಪಂಚದ ಅತ್ಯುನ್ನತ ನೈತಿಕತೆಯ ಸೇನೆಯಾಗಿದ್ದು ನಾವೆಲ್ಲಾ ಸುರಕ್ಷಿತ ವಾಗಿರುವುದಕ್ಕೆ ಭಾರತೀಯ ಯೋಧರ ನಿಷ್ಕಳಂಕ ಸೇವೆಯೇ ಕಾರಣವೆಂದರು. ನಮ್ಮ…

Read More

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ- ಕಾಂಗ್ರೆಸ್ ಆಶಾವಾದ

ವಾರ್ಡ್ ಮರು ನಿರ್ಣಯದಲ್ಲಿ ಸಿಪಿಎಂ ಯಾವ ಕೀಳು ರಾಜಕೀಯ ಆಟವಾಡಿದರೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಾಜ್ಯದಾದ್ಯಂತ ಉತ್ತಮ ಸಾಧನೆಗೈಯಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಎಡರಂಗದ ದುರಾಡಳಿತದಿಂದ ಬೇಸತ್ತ ಜನಸಾಮಾನ್ಯರು ಸಿಪಿಎಂಗೆ ಸರಿಯಾದ ಉತ್ತರ ಕೊಡುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಜನತೆಯ ರೋಷ ಈ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ಅವರು ಹೇಳಿದ್ದಾರೆ. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಉದ್ಘಾಟಿಸಿ ಅವರು…

Read More

ಪ್ರಶಾಂತಿ ವಿದ್ಯಾಕೇಂದ್ರ, ಬಾಯಾರು: ಕಾರ್ಗಿಲ್ ವಿಜಯ ದಿವಸ ಆಚರಣೆ

ಭಾರತೀಯ ಸೇನೆಯ ವೀರಯೋಧರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸಿ ಅವರನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯನ್ನರ್ಪಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಮನೋಭಾವನೆ ಬೆಳೆಸುವ ಉದ್ದೇಶದಿಂದ ಪ್ರಶಾಂತಿ ವಿದ್ಯಾಕೇಂದ್ರ, ಬಾಯಾರು ಮತ್ತು ಇಲ್ಲಿನ ಸಮಾಜ ವಿಜ್ಞಾನ ಸಂಘ ‘ಸಮಷ್ಟಿ’ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಶ್ರೀ ಸುರೇಶ್ ಕೆ. ಸೇನೆಯಲ್ಲಿನ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ, ರಾಷ್ಟ್ರ ಸೇವೆಯ ಮಹತ್ತ್ವವನ್ನು ವಿವರಿಸಿದರು. ಪ್ರತಿಯೊಬ್ಬರು…

Read More

ನಮ್ಮ ಮೀಡಿಯಾ 24×7 ವರದಿಗೆ ಫಲ ಶ್ರುತಿ. ಮಂಜೇಶ್ವರ ಸರ್ವಿಸ್ ರಸ್ತೆ ಬಳಿ ಇದ್ದ ಬಸ್ ನಿಲ್ದಾಣದ ಸಮೀಪವಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತಡೆ ಬೇಲಿ ನಿರ್ಮಿಸಿದ ವಿದ್ಯುತ್ ಇಲಾಖೆ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಎದುರು ರಾಗಂ ಜಂಕ್ಷನ್ ರಾಷ್ಟ್ರೀಯ ಷಟ್ಪಥ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ತಡಬೇಲಿ ಇಲ್ಲದೆ ಸ್ಥಾಪಿಸಲಾಗಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಾರ್ವಜನಿಕರಲ್ಲಿ ಭೀತಿಯ ವಾತಾವರಣಕ್ಕೆ ಕಾರಣವಾಗಿತ್ತು. ಈ ಸುದ್ದಿ ನಮ್ಮ ಮೀಡಿಯಾ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಬಳಿಕ, ವಿದ್ಯುತ್ ಇಲಾಖೆ ತಕ್ಷಣ ಸ್ಪಂಧಿಸಿ ಶನಿವಾರದಂದು ಬೆಳಿಗ್ಗೆ ತಾತ್ಕಾಲಿಕ ತಡೆಬೇಲಿ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದೆ. ನಮ್ಮ ಮೀಡಿಯಾ ದೃಶ್ಯ ಮಾಧ್ಯಮದಲ್ಲಿ ಈ ಬಗ್ಗೆ ವರದಿ…

Read More
error: Content is protected !!