11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ನಿವೃತ್ತ ಪೊಲೀಸ್ ಸಿಬ್ಬಂದಿ ಬಂಧನ
ಕಾಸರಗೋಡು:ಆಟವಾಡಲು ಹೋದ ಹನ್ನೊಂದರ ಬಾಲಕಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ ಘಟನೆ ವರದಿ. ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಪೊಲೀಸ್ ನೌಕರನನ್ನು ಪೋಕ್ಸೋ ಕೇಸು ದಾಖಲಿಸಿ ಬಂಧಿಸಲಾಗಿದೆ. ಪಯ್ಯನ್ನೂರಿನ ಕಾಪುಮ್ಮೇಲ್ ಇಳಯಡತ್ತ್ ನಿವಾಸಿ ಇ. ವಿ. ಗೋಪಿನಾಥ್ (62) ಬಂಧಿತ ವ್ಯಕ್ತಿ. ಪರಿಯಾರಂ ಪೊಲೀಸ್ ಇನ್ಸ್ಪೆಕ್ಟರ್ ಕೆ. ಪಿ. ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಧಿತ ವ್ಯಕ್ತಿಯು ಸುದೀರ್ಘ ಕಾಲ ಪೊಲೀಸ್ ಇಲಾಖೆಯಲ್ಲಿ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದನು.ಬುಧವಾರ ಮಧ್ಯಾಹ್ನ ಈ ಅಮಾನುಷ ಕೃತ್ಯ ನಡೆದಿದೆ…
