​ಮಂಜೇಶ್ವರದಲ್ಲಿ ಚುನಾವಣಾ ಕಹಳೆ: ಬಿಜೆಪಿ ಪರ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅಬ್ಬರದ ಪ್ರಚಾರ

​ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಗಡಿಭಾಗದ ಪ್ರತಿಷ್ಠಿತ ಕ್ಷೇತ್ರವಾದ ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಗೆಲುವಿಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು. ​ಕ್ಷೇತ್ರದಾದ್ಯಂತ ಸಂಚರಿಸಿದ ಶಾಸಕ ವೇದವ್ಯಾಸ ಕಾಮತ್ ಅವರು, ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ…

Read More

ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೈನಡ್ಕ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಮಧೂರು ಸಮೀಪದ ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೈನಡ್ಕ ಇದರ ನೂತನ ಪಧಾದಿಕಾರಿಗಳ ಆಯ್ಕೆ ಸಭೆಯು ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ ಬೈನಡ್ಕದಲ್ಲಿ ಇತ್ತೀಚೆಗೆ ನಡೆಯಿತು . ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀ ಪುರಶೋತ್ತಮ ಕೋಟೆವಲಪ್ಪು ಆಯ್ಕೆಗೊಂಡರು . ಗೌರವ ಅಧ್ಯಕ್ಷರಾಗಿ ಶ್ರೀ ರಾಜೇಶ್ವರ ಹೊಳ್ಳ , ಹಾಗೂ ಶ್ರೀ ವೆಂಕಪ್ಪ ನಾಯಕ್ , ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಯಾದವ್ ಬೈನಡ್ಕ , ಕಾರ್ಯದರ್ಶಿ ಶ್ರೀ…

Read More

ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇವಾರಿನಲ್ಲಿ 2025–26ನೇ ಸಾಲಿನ ವಿದಾಯ ಕೂಟ ಸಮಾರಂಭ

ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇವಾರಿನಲ್ಲಿ 2025–26ನೇ ಸಾಲಿನ ವಿದಾಯ ಕೂಟ ಸಮಾರಂಭವು ಅತ್ಯಂತ ಸಂಭ್ರಮ ಹಾಗೂ ಗೌರವದ ವಾತಾವರಣದಲ್ಲಿ ನೆರವೇರಿತು . ಕಾರ್ಯಕ್ರಮವನ್ನು ಪ್ರೀಮ ಕ್ರಾಸ್ತ ಟೀಚರ್ ಅವರು ಸುಂದರವಾಗಿ ನಿರೂಪಣೆ ಮಾಡಿದರು .ಕಾರ್ಯಕ್ರಮಕ್ಕೆ ಸಾತ್ವಿಕ್ ಸರ್ ಅವರು ಆತ್ಮೀಯ ಸ್ವಾಗತ ಕೋರಿದರು . ಹಿರಿಯ ಅಧ್ಯಾಪಿಕೆ ರಾಜೇಶ್ವರಿ ಟೀಚರ್ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು . ನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶಾಮ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿ,…

Read More

​ವಿದಾಯದ ಕಣ್ಣೀರು: ವಿಶೇಷ ಚೇತನರ ಪಾಲಿನ ‘ಗಿಫ್ಟ್’ ಆಗಿದ್ದ ರೂಪಾ ಟೀಚರ್ ಇನ್ನಿಲ್ಲ

​ಮಂಜೇಶ್ವರ: ಅವರ ಹೆಸರಲ್ಲೇ ಒಂದು ವಿಶಿಷ್ಟತೆ ಇತ್ತು, ಅವರ ನಗುವಿನಲ್ಲೇ ಒಂದು ಆತ್ಮೀಯತೆ ಇತ್ತು. ಮಂಜೇಶ್ವರ ಬಿ.ಆರ್.ಸಿ. ವ್ಯಾಪ್ತಿಯ ಸಾವಿರಾರು ವಿಶೇಷ ಚೇತನ ಮಕ್ಕಳ ಬಾಳಿಗೆ ಬೆಳಕಾಗಿದ್ದ, ಪ್ರೀತಿಯ ರೂಪಾ ರೋಯಲ್ ಗಿಫ್ಟ್ ಡಿ ಸೋಜ (44) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ​ಮೀಯಪದವಿನ ಜನಪ್ರಿಯ ವ್ಯಕ್ತಿತ್ವ, ಚಲನಚಿತ್ರ ನಟ ಹಾಗೂ ನಾಟಕ ಕಲಾವಿದ ರಾಜೇಶ್ ಮೀಯಪದವು ಅವರ ಪತ್ನಿಯಾಗಿದ್ದ ರೂಪಾ ಟೀಚರ್, ಕೇವಲ ಒಬ್ಬ ಶಿಕ್ಷಕಿಯಷ್ಟೇ ಆಗಿರಲಿಲ್ಲ; ವಿಶೇಷ ಅಗತ್ಯವಿರುವ ಮಕ್ಕಳ…

Read More

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಕಾಸರಗೋಡು ಕರ್ನಾಟಕ ಮಕ್ಕಳ ಕವಿಗೋಷ್ಟಿ- ಮಕ್ಕಳ ಸಾಂಸ್ಕೃತಿಕ ಉತ್ಸವ

ಕಾಸರಗೋಡು: ಮಕ್ಕಳ ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಮಕ್ಕಳ ಸಾಹಿತಿಗಳು,ಕವಿ, ಕವಯತ್ರಿಯರು, ಬರಹಗಾರರು, ಸಾಹಿತಿಗಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಇದರ ಕೇರಳ ರಾಜ್ಯ ಘಟಕವಾಗಿ 2019 ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿ ಮತ್ತು ಕನ್ನಡಪರ ಚಟುವಟಿಕೆಗಳನ್ನು…

Read More

ಅನಧಿಕೃತ ಮರಳು ಸಾಗಾಟ; ಪೊಲೀಸರ ದಾಳಿ : ಐವರ ವಿರುದ್ಧ ಜಾಮೀನು ರಹಿತ ಕೇಸು

ಮಂಜೇಶ್ವರ: ಕುಂಬಳೆ ಶಿರಿಯ ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಮೇಲೆ ಕುಂಬಳೆ ಪೊಲೀಸರು ದಾಳಿ ನಡೆಸಿದ್ದು, ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ​ಹೇರೂರು ಗ್ರಾಮದ ಪಯ್ಯಾ‌ರ್ ಕಡವಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸರ್ಕಾರಿ ಸ್ವತ್ತಾದ ಹೊಳೆ ಮರಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಲಾರಿ ಚಾಲಕ ಸೇರಿದಂತೆ ಐವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ವಿರುದ್ಧ ಪೊಲೀಸರು ಜಾಮೀನು ರಹಿತ ಕಳವು ಪ್ರಕರಣ…

Read More

ಕೂಳೂರು ಕೋಡಿಮಾರ್ ರಸ್ತೆಗೆ ಡ್ರೈನೇಜ್ ನೀರು ಚೆಲ್ಲಿದ ದುಷ್ಕರ್ಮಿಗಳು ಸಾರ್ವಜನಿಕರಿಗೆ ತೀವ್ರ ಸಂಕಷ್ಟ

ಮಂಜೇಶ್ವರ: ಕೂಳೂರು ಕೋಡಿಮಾರ್ ರಸ್ತೆಯಲ್ಲಿ ಅನಾಮಿಕರು ಡ್ರೈನೇಜ್ ನೀರನ್ನು ರಸ್ತೆಗೆ ಚೆಲ್ಲಿದ ಪರಿಣಾಮ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಕೂಳೂರಿನ ಕೋಡಿಮಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನಗಳಿಂದ ಇದೇ ರೀತಿಯ ಕೃತ್ಯಗಳು ನಡೆಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಡ್ರೈನೇಜ್ ನೀರನ್ನು ವಾಹನದ ಮೂಲಕ ತಂದು ರಸ್ತೆಗೆ ಸುರಿದ ಪರಿಣಾಮ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ. ಅಶುಚಿ…

Read More

ಮಂಜೇಶ್ವರ ಕ್ಷೇತ್ರದಲ್ಲಿ ತ್ರಿಕೋನ ಪೈಪೋಟಿ ತೀವ್ರ: ಅಶ್ರಪ್ ಪರ ಅಸ್ಮ ಹಸೈನಾರ್ ಪ್ರಚಾರ

ಕಾಸರಗೋಡು: ಕೇರಳ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ತ್ರಿಕೋನ ಸ್ಪರ್ಧೆಯಿಂದ ಮಂಜೇಶ್ವರ ಕ್ಷೇತ್ರದಲ್ಲಿ ರಾಜಕೀಯ ಪೈಪೋಟಿ ತೀವ್ರಗೊಂಡಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯಗಳನ್ನು ವೇಗಗೊಳಿಸಿ ಮತದಾರರ ಮನಗೆಲ್ಲಲು ಹರಸಾಹಸ ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರ, ಪಾವೂರು ಮತ್ತು ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಮಹಿಳಾ ಕಾಂಗ್ರೆಸ್ ಪ್ರಮುಖ ನಾಯಕಿ ಕೆ.ಎ. ಅಸ್ಮ ಹಸೈನಾರ್ ಭಾಗವಹಿಸಿ ಮತಯಾಚನೆ ನಡೆಸಿದರು….

Read More

ಮಾನವೀಯತೆ ಮೆರೆದ ತಲಪಾಡಿ ಬಿಎಂಎಸ್ ಲಾಟರಿ ಮಾರಾಟಗಾರರು: ಕ್ಯಾನ್ಸರ್ ಪೀಡಿತನಿಗೆ ಆರ್ಥಿಕ ನೆರವು

ಮಾನವೀಯತೆಯ ಮೆರುಗು ತೋರಿದ ತಲಪಾಡಿ ಬಿಎಂಎಸ್ ಕೇರಳ ಲಾಟರಿ ಮಾರಾಟಗಾರರು, ಕ್ಯಾನ್ಸರ್‌ ಪೀಡಿತನಿಗೆ ಆರ್ಥಿಕ ನೆರವು ನೀಡಿ ಸಮಾಜ ಸೇವೆಗೆ ಮಾದರಿಯಾದರು. ಕಾಸರಗೋಡು ತಾಲೂಕಿನ ತಲಪಾಡಿ ಗ್ರಾಮದ ಮಾಧವ ಅವರ ಪುತ್ರ ಪ್ರದೀಪ್ ಅವರು ಕೊರಳು ಭಾಗದ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಗೆ ಸಹಾಯ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ತಲಪಾಡಿ ಬಿಎಂಎಸ್ ಲಾಟರಿ ಮಾರಾಟಗಾರರ ಸಂಘದ ಸದಸ್ಯರು ಒಟ್ಟುಗೂಡಿ ಸಂಗ್ರಹಿಸಿದ ನೆರವುಧನವನ್ನು ಶ್ರೀ ಭ್ರಾಮರಿ…

Read More

ಬಂದ್ಯೋಡು: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಕೆ.ಸಿ. ರೋಡ್ ಯುವಕನ ದಾರುಣ ಅಂತ್ಯ

​ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ​ತಲಪಾಡಿ ಸಮೀಪದ ಕೆ. ಸಿ. ರೋಡ್ ನಿವಾಸಿ ಮುಹ್ಯುದ್ದೀನ್ ನಿಸಾನ್ (28) ಸಾವನ್ನಪ್ಪಿದ ದುರ್ದೈವಿ. ​ಮಂಗಳವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ಬಂದ್ಯೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ ಲಾರಿಯ ಹಿಂಭಾಗಕ್ಕೆ ನಿಸಾನ್ ಚಲಾಯಿಸುತ್ತಿದ್ದ ಬೈಕ್ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಸಾನ್ ಗಂಭೀರವಾಗಿ…

Read More
error: Content is protected !!