ಒಡುವಾರ್ ಅಮಾನತುಲ್ ಇಸ್ಲಾಂ ಮದ್ರಸ ವಾರ್ಷಿಕೋತ್ಸವ ಮೇ 9ರಿಂದ ಪ್ರಾರಂಭ
ಕುಂಬಳೆ, ಮೇ 7: ಅಮಾನತುಲ್ ಇಸ್ಲಾಂ ಮದ್ರಸ ವತಿಯಿಂದ ವಾರ್ಷಿಕೋತ್ಸವ, ಧಾರ್ಮಿಕ ಜ್ಞಾನ ಸಮ್ಮೇಳನ ಹಾಗೂ ಇಸ್ಲಾಮಿಕ್ ಕಥಾಪ್ರಸಂಗ ಕಾರ್ಯಕ್ರಮವು ಮೇ 9ರಿಂದ 13ರವರೆಗೆ ಬದರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮೇ 9ರಂದು ಸಂಜೆ 7 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಉದ್ಘಾಟಿಸಲಿದ್ದು, ಡಾ. ಫಾರೂಖ್ ನಯೀಮಿ ಹಿಜ್ರ ಎಕ್ಸ್‌ಪೆಡಿಷನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮೇ 10 ಮತ್ತು 11ರಂದು ಖ್ಯಾತ ಕಥಾಪ್ರಸಂಗಕಾರ ಸುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಹಾಗೂ…