ಕೇರಳ ಚುನಾವಣಾ ಫಲಿತಾಂಶ: ಎಡಕೋಟೆ ನಡುಗಿಸಿದ ಯುಡಿಎಫ್ ಸುನಾಮಿ: ಕಮಲ ಪಾಳಯದಲ್ಲಿ ಹೊಸ ಸಂಚಲನ
ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಇಡೀ ರಾಜ್ಯದಲ್ಲಿ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಭದ್ರವಾಗಿದ್ದ ಎಡರಂಗದ ಕೋಟೆ ಈ ಬಾರಿ ಧರಾಶಾಯಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಬೆಳಿಗ್ಗೆ 10:20ರ ವೇಳೆಗೆಯುಡಿಎಫ್: 91 ಸ್ಥಾನಗಳಲ್ಲಿ ಮುನ್ನಡೆಎಲ್ ಡಿ ಎಫ್: 46 ಸ್ಥಾನಗಳಲ್ಲಿ ಮುನ್ನಡೆಎನ್ ಡಿಎ: 02 ಸ್ಥಾನಗಳಲ್ಲಿ ಮುನ್ನಡೆ ಕಣ್ಣೂರಿನ ಧರ್ಮಡಂ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಆರಂಭಿಕ ಹಿನ್ನಡೆ ಅನುಭವಿಸಿರುವುದು…