ಮಂಜೇಶ್ವರ ಯು ಡಿ ಎಫ್ ಅಭ್ಯರ್ಥಿಯಿಂದ ಮೀoಜ – ಪೈವಳಿಕೆ ಪಂಚಾಯತಿನಲ್ಲಿ ಎರಡನೇ ದಿನದ ಮಂಡಲ ಪರ್ಯಟನೆ
ಮಿಯಾಪದವು : ಯು.ಡಿ.ಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಅವರ ಕ್ಷೇತ್ರ ಪರ್ಯಟನೆಎರಡನೇ ದಿನವೂ ಭಾರೀ ಉತ್ಸಾಹದಿಂದ ಮುಂದುವರಿಯಿತು. ಎ.ಕೆ.ಎಂ ಅಶ್ರಫ್ ಅವರು ಮೀoಜಾ ಹಾಗೂ ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪರ್ಯಟನೆ ನಡೆಸಿದರು. ಬೆಳಗ್ಗೆ ದೈಗೋಳಿ ಪ್ರದೇಶದಿಂದ ಆರಂಭವಾದ ಈ ಪರ್ಯಟನೆ ಮಜೀರ್ಪಳ್ಳ, ಗಾಂಧಿನಗರ, ಮದಂಕಲ್, ಮಿಯಾಪದವು, ಚಿಗುರುಪಾದೆ , ಬಾಳಿಯೂರು, ಮೂಡಂಬೈಲ್ , ಕಡಂಬಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿ ಕಡಂಬಾರ್‌ನಲ್ಲಿ ಸಮಾರೋಪಗೊಂಡಿತು . ಮಧ್ಯಾಹ್ನದ ನಂತರ ಲಾಲ್‌ಬಾಗ್, ಬಾಯಾರಪದವು, ಸಿರಂತಡ್ಕ, ಸುಂಕದಕಟ್ಟೆ , ಕುರುಡಪದವು,…