ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ : ಡಾ. ಡಿ. ವೀರೇಂದ್ರ ಹೆಗ್ಗಡೆ

ಕಾಸರಗೋಡು : ಯಕ್ಷಗಾನ ಬೊಂಬೆಯಾಟವೂ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಜ ವಾಬ್ದಾರಿ ನಮ್ಮೆಲ್ಲರಿಗಿದೆ. ಈ ನಿಟ್ಟಿನಲ್ಲಿ ಮಾದರಿಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವ ಕಾಸರಗೋಡಿನ ಕೆ. ವಿ. ರಮೇಶ ಅಭಿ ನಂದನಾರ್ಹರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀ ಗೋಪಾಲಕೃಷ್ಣಯಕ್ಷಗಾನ ಬೊಂಬೆಯಾಟ ಸಂಘದ ನೂತನ ಅಭಿಯಾನವಾದ ‘ಗಣ್ಯರೆಡೆಗೆ ಬೊಂಬೆ ನಡಿಗೆ’ಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಧರ್ಮಸ್ಥಳ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ. ಹೆಗ್ಗಡೆಯವರಯ…

Read More

ಮಂಜೇಶ್ವರ: ಫೈನ್ ಇಂಡಿಯಾ ಫೈಬರ್ ನೆಟ್ LLP ಸಂಸ್ಥೆಯ ಕಾರ್ಯಾರಂಭ

ಮಂಜೇಶ್ವರ: ಫೈನ್ ಇಂಡಿಯಾ ಫೈಬರ್ ನೆಟ್ LLP ಸಂಸ್ಥೆಯ ಕಾರ್ಯಾರಂಭವು ಉಪ್ಪಳದ ಲಂಸ್ ಬೇಕರಿ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆಯಿತು. ಸಮಾರಂಭವನ್ನು ಸಿಒಎ ಜಿಲ್ಲಾ ಅಧ್ಯಕ್ಷ ವಿ.ವಿ. ಮನೋಜ್ ಕುಮಾರ್ ಉದ್ಘಾಟಿಸಿದರು. KCCL ನಿರ್ದೇಶಕ ಎಂ. ಲೋಹಿತಾಕ್ಷನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜಿಲ್ಲೆಯಲ್ಲಿ ಹಿರಿಯ ಕೇಬಲ್ ಟಿವಿ ಆಪರೇಟರ್ ಹಾಗೂ ಫೈನ್ ಟಿವಿ ಮಾಲೀಕರಾದ ಉಸ್ಮಾನ್ ಪಾಂಡಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಏಕೀಕೃತ ವ್ಯವಸ್ಥೆಯನ್ನು ಅಳವಡಿಸುವ ಉದ್ದೇಶದಿಂದ ವ್ಯಕ್ತಿಗತ ನಿಯಂತ್ರಣದಲ್ಲಿದ್ದ ಫೈನ್ ಟಿವಿ ಇದೀಗ LLP ರೂಪದಲ್ಲಿ…

Read More

ಬಾಕುಡ ಸಮುದಾಯ ಕುರಿತು ತಪ್ಪು ಮಾಹಿತಿ ಹರಡಿದ ಆರೋಪ: ನವೀನ್ ಸೂರಿಂಜೆ ವಿರುದ್ಧ ಖಂಡನೆ:ಬಾಲಕೃಷ್ಣ ವಿ.ಎನ್.(ಬಾಕುಡ ಪ್ರತಿನಿಧಿ)

ಕಾಸರಗೋಡು: ಬಾಕುಡ ಸಮುದಾಯದ ದೈವದಪಾತ್ರಿ–ಕಾರ್ನವರ ಒಕ್ಕೂಟದ ಇತ್ತೀಚಿನ ವಾರ್ಷಿಕ ಸಭೆಯಲ್ಲಿ ಮುಖ್ಯ ಧಾರ್ಮಿಕ ಭಾಷಣಗಾರರಾಗಿ ಭಾಗವಹಿಸಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಹಂಚಿಕೊಂಡ ಭಾಷಣದ ಕೆಲವು ಭಾಗಗಳು ವಿವಾದಕ್ಕೆ ಕಾರಣವಾಗಿವೆ. ಕರಾವಳಿಯ ನಾಗಬನಗಳ ಮೇಲಿನ ಅಧಿಕಾರ ಬಾಕುಡರಿಗೆ ಮಾತ್ರ ಇದ್ದು, ಕೋಟಿಗಟ್ಟಲೆ ಆದಾಯದ ವ್ಯವಹಾರವನ್ನು ಬ್ರಾಹ್ಮಣರು ಕಸಿದುಕೊಂಡಿದ್ದಾರೆ, ಬಾಕುಡರ ಹಕ್ಕಿನ ನಾಗಾರಾಧನೆಯಿಂದ ಅವರನ್ನು ಹೊರಹಾಕಲಾಗಿದೆ, ಬಾಕುಡರ ಜಮೀನನ್ನು ಬ್ರಾಹ್ಮಣರು ಕಬಳಿಸಿದ್ದಾರೆ ಎಂಬ ರೀತಿಯ ಅಕ್ಷರಶಃ ಸುಳ್ಳು ಮಾಹಿತಿಯನ್ನು ಅವರು ಹರಡಿದ್ದಾರೆ ಎಂದು…

Read More

ಮಂಜೇಶ್ವರ: ಅರಿಕ್ಕಾಡಿ ಟೋಲ್ ಗೇಟ್‌ನಲ್ಲಿ ಪೊಲೀಸ್ ದೌರ್ಜನ್ಯ ಆರೋಪ—ಡಿಜಿಪಿ ತನಿಖೆಗೆ ಆದೇಶ

ಮಂಜೇಶ್ವರ: ಅರಿಕ್ಕಾಡಿ ಟೋಲ್ ಗೇಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸುತಿದ್ದಂತೆ ಟೋಲ್ ಪ್ಲಾಜಾದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಆರೋಪಗಳು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಕುಳತ್ತೂರು ಜೈಸಿಂಗ್ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ, ರಾಜ್ಯ ಡಿಜಿಪಿ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಮಾನವ ಹಕ್ಕು ಆಯೋಗವು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.ಟೋಲ್ ಪ್ಲಾಜಾದಲ್ಲಿ ಬೋವಿಕಾನ ಆಲೂರು ನಿವಾಸಿಯೊಬ್ಬರನ್ನು ಪೊಲೀಸರು ಕಾರಿನಿಂದ ಬಲವಂತವಾಗಿ ಎಳೆದೊಯ್ಯುವ…

Read More

ಕುಂಬಳೆ ಎಕ್ಸೈಸ್ ದಾಳಿ: 130 ಟೆಟ್ರಾ ಪ್ಯಾಕ್ ಮದ್ಯದೊಂದಿಗೆ ಯುವಕ ಅರೆಸ್ಟ್

ಕುಂಬಳೆ : ಮಂಗಲ್ಪಾಡಿ ಅಡ್ಕ ಪ್ರದೇಶದಲ್ಲಿ 23.4 ಲೀಟರ್ ಕರ್ನಾಟಕ ವಿದೇಶಿ ಮದ್ಯದೊಂದಿಗೆ ಯುವಕನನ್ನು ಕುಂಬಳೆ ಎಕ್ಸೈಸ್ ರೇಂಜ್ ಪ್ರಿವೆಂಟಿವ್ ಅಧಿಕಾರಿ ಜಿಜಿನ್ ಎಂ.ವಿ. ಅವರು ಬಂಧಿಸಿದ್ದಾರೆ. ಬಂಧಿತನನ್ನು ಮಂಗಲ್ಪಾಡಿ ಅಡ್ಕ ಭಗವತಿ ನಗರ ನಿವಾಸಿ ಹರೀಶ್ ಎ. ಎಂದು ಗುರುತಿಸಲಾಗಿದೆ. ಅಡ್ಕ ಅಂಗನವಾಡಿ ಸಮೀಪ 180 ಮಿಲಿ ಗಾತ್ರದ 130 ಟೆಟ್ರಾ ಪ್ಯಾಕೆಟ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿಯಲ್ಲಿ ಪ್ರಿವೆಂಟಿವ್ ಅಧಿಕಾರಿಗಳಾದ ಮೊಯ್ತೀನ್ ಸಾದಿಕ್, ಕಬೀರ್ ಹಾಗೂ ಸಿವಿಲ್…

Read More

ನೋವು–ದುಃಖದ ಮಧ್ಯೆ ಮಯ್ಯತ್ ನಮಾಜ್: ಮಂಜೇಶ್ವರದಲ್ಲಿ ಇಬ್ಬರ ಅಂತಿಮ ವಿಶ್ರಾಂತಿ

ಮಂಜೇಶ್ವರ: ಮಂಜೇಶ್ವರದ ತೂಮಿನಾಡು ಹಿಲ್‌ಟಾಪ್‌ನಲ್ಲಿ ನಡೆದ ದಾರುಣ ಕುಟುಂಬ ಕಲಹದಲ್ಲಿ ಜೀವ ಕಳೆದುಕೊಂಡ ಜುಮೈಲ ಹಾಗೂ ಆಕೆಯ ಚಿಕ್ಕಪ್ಪ ಶೇಕುಂಞ ಅವರಿಗೆ ಕಣ್ಣೀರಿನೊಂದಿಗೆ ಅಂತಿಮ ವಿದಾಯ ದೊರೆಯಿತು. ನೋವು ಮತ್ತು ದುಃಖದಿಂದ ತುಂಬಿದ ವಾತಾವರಣದಲ್ಲಿ ಇಬ್ಬರನ್ನೂ ಬಂಗ್ರ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಖಬರ್‌ಸ್ಥಾನದಲ್ಲಿ ಅಂತಿಮ ವಿಶ್ರಾಂತಿಗೆ ಒಪ್ಪಿಸಲಾಯಿತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಂಗಳವಾರ ಸಂಜೆ ಮೃತದೇಹಗಳನ್ನು ತೊಮಿನಾಡಿನಲ್ಲಿರುವ ಮನೆಗೆ ತರಲಾಯಿತು. ಅಂತಿಮ ದರ್ಶನಕ್ಕಾಗಿ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯರು ಸೇರಿದಂತೆ…

Read More

ಕುಟುಂಬ ಕಲಹದ ಕರಾಳ ಅಧ್ಯಾಯ; ಮಂಜೇಶ್ವರದಲ್ಲಿ ಜುಮ್ಲಾ–ಶೇಕುಂಞ ದಫನ

ಮಂಜೇಶ್ವರ: ಮಂಜೇಶ್ವರ ತೊಮಿನಾಡು ಹಿಲ್‌ಟಾಪ್‌ನಲ್ಲಿ ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಕಲಹದಿಂದ ಮೃತಪಟ್ಟ ಜುಮ್ಲಾ ಮತ್ತು ಆಕೆಯ ಚಿಕ್ಕಪ್ಪ ಶೇಕುಂಞ ಅವರ ಮೃತದೇಹಗಳನ್ನು ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಅಂಗಳದಲ್ಲಿ ದಫನ ಮಾಡಲಾಯಿತು. ಸೋಮವಾರ ಶೇಕುಂಞ ಅವರ ಮನೆಯಲ್ಲಿ ನಡೆದ ಹಲ್ಲೆಯ ವೇಳೆ ತಂದೆಯ ಇರಿತಕ್ಕೆ ಒಳಗಾದ ಜುಮ್ಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ…

Read More

ಕುಂಬಳೆ ಆರಿಕ್ಕಾಡಿ ಟೋಲ್ ಗೇಟ್ ನಿಲ್ಲಿಸಲು ಕೇಂದ್ರ ಸರಕಾರ ನಿರ್ಧಾರ,ಇದುವರೆಗೆ ಸ್ವೀಕರಿಸಿದ ಟೋಲ್ ಹಿಂತಿರುಗಿಸಬೇಕು: ಸಿಪಿಎಎಂ

ಕುಂಬಳೆ: ಕುಂಬಳೆ ಆರಿಕ್ಕಾಡಿ ಟೋಲ್ ಸಂಗ್ರಹ NH 66 ರಸ್ತೆಯಲ್ಲಿ ಯಾತ್ರೆ ಮಾಡುವವರಿಗೆ ಬಾರಿ ತೊಂದರೆ ಉಂಟು ಮಾಡಿದ್ದು,ಇದಕ್ಕೆದುರಾಗಿ ಸಿಪಿಐಎಂ ಹಾಗೂ ಜನಕೀಯ ಪ್ರತಿಭಟನಾ ಸಮಿತಿ ಹೋರಾಟ ಸಮರ ನಡೆಸಿದ್ದು ಬಿಜೆಪಿ ಸರಕಾರಕ್ಕೆ ಬಿಸಿ ಎಬ್ಬಿಸಿದೆ.ಈಗ ಈ ಟೋಲ್ ನಿಲ್ಲಿಸಲು ಆದೇಶ ಹೊರಡಿಸಿದ ಕೇಂದ್ರ ಬಿಜೆಪಿ ಸರಕಾರವು ಇದುವರೆಗೂ ಹಗಲು ರಾತ್ರಿ ಹೋರಾಟ ನಡೆಸಿದ ನಾಗರಿಕರ ಮೇಲೆ ದಾಖಲಿಸಿದ ಕೇಸು ,ಆರ್ಥಿಕ ನಷ್ಟಗಳನ್ನು ಕೂಡ ಪರಿಹರಿಸಬೇಕಾಗಿದೆ.ಇದುವರೆಗೂ ಸಂಗ್ರಹಿಸಿದ ಟೋಲ್ ಯಾತ್ರಿಕರಿಗೆ ಹಿಂತಿರುಗಿಸಲು ಕೇಂದ್ರ ಸರಕಾರ ತಯಾರಾಗಬೇಕೆಂದು ಸಿಪಿಐಎಂ…

Read More

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಕೇಂದ್ರ ಸರ್ಕಾರದಿಂದ ರದ್ದು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಲಭಿಸಿದ್ದು, ಸಂಬಂಧಿಸಿದ ಆದೇಶ ನಾಳೆ ಲಭ್ಯವಾಗಲಿದೆ ಎಂದು ಬಿಜೆಪಿ ಮುಖಂಡರಾದ ಕೆ. ಸುರೇಂದ್ರನ್ ಹಾಗೂ ಎಂ.ಎಲ್. ಅಶ್ವಿನಿ ಅವರು ತಿಳಿಸಿದ್ದಾರೆ. ಟೋಲ್ ಬೂತ್ ರದ್ದುಪಡಿಸಿರುವ ವಿಷಯ ತಿಳಿದ ಕೂಡಲೇ ಬಿಜೆಪಿ ಕಾರ್ಯಕರ್ತರು ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಕುಂಬಳೆಯಲ್ಲಿ ಸಂಭ್ರಮಾಚರಣೆ ನಡೆಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ, ವಿಜಯೋತ್ಸವದ…

Read More

ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದು….!

ಕುಂಬಳೆ: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದುಗೊಂಡಿದ್ದು, ಟೋಲ್ ವಿರೋಧಿ ಕ್ರಿಯಾ ಸಮಿತಿ ಮತ್ತು ಬಿಜೆಪಿ ಮುಖಂಡರು ಮಂಗಳವಾರ(ಫೆ.3) ಸಂಜೆ ಕುಂಬಳೆಯಲ್ಲಿ ಪ್ರತ್ಯೇಕ ವಿಜಯೋತ್ಸವ ನಡೆಸಿದರು. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದು, ಲಿಖಿತ ಆದೇಶಕ್ಕೆ ಸಹಿ ಹಾಕಿದ್ದಾರೆ. ಇಂದು(ಫೆ.4) ಅಧಿಕೃತ ಪ್ರಕಟನೆ ಹೊರಬೀಳಲಿದೆ. ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷರನ್ನು ದೂರವಾಣಿ ಮೂಲಕ…

Read More
error: Content is protected !!