ಆಪರೇಷನ್ ತೂಫಾನ್ ಭರ್ಜರಿ ದಾಳಿ: ಎಂಡಿಎಂಎ ಜೊತೆ ಮೂವರು ಅರೆಸ್ಟ್

ಕಾಸರಗೋಡು: ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕಾಸರಗೋಡು ಪೊಲೀಸರು ಮತ್ತು ಡಾನ್ಸಾಫ್ ತಂಡ ಜಾರಿಗೆ ತಂದಿರುವ ‘ಆಪರೇಷನ್ ತೂಫಾನ್’ ಕಾರ್ಯಾಚರಣೆಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಪ್ರತ್ಯೇಕ ದಿಢೀರ್ ದಾಳಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿಕೊಂಡು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸುತ್ತಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ​ಗುರುವಾರ ರಾತ್ರಿ 10:30ರ ಸುಮಾರಿಗೆ ಸಂತೋಷ್ ನಗರದಲ್ಲಿ ವಿದ್ಯಾನಗರ ಎಸ್‌ಐ ಅನೂಪ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ….

Read More

ಪೊಟ್ಟಿಪ್ಪಲ ಜಲಪಾತ ಸಾಂಸ್ಕೃತಿಕ ಎಂಬ ವಿನೂತನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ–ಗಾನ–ನೃತ್ಯ ವೈಭವ ಎಂಬ ದಾಖಲೆ ಕಾರ್ಯಕ್ರಮ

ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.), ಕಾಸರಗೋಡು ವತಿಯಿಂದ ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಕಾಸರಗೋಡು ಅವರ ನೇತೃತ್ವದಲ್ಲಿ “ಜಲಪಾತ ಸಾಂಸ್ಕೃತಿಕ ” ಎಂಬ 237 ನೇ ವಿಶಿಷ್ಟ ದಾಖಲೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಗಾನ ಮತ್ತು ನೃತ್ಯ ವೈಭವ ಕಾರ್ಯಕ್ರಮವು ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಸಮೀಪದ ಪೊಟ್ಟಿಪ್ಪಲ ಜಲಪಾತದ ಸುಂದರ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹುಲಿಕುಣಿತ, ಸಮೂಹ ನೃತ್ಯ ಭಕ್ತಿ ನೃತ್ಯ ಹಾಗೂ ಅಭಿನಯ ಗೀತೆ…

Read More

ಧರ್ಮತ್ತಡ್ಕ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ‘ಕನಕಾಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ : ವಿದ್ಯಾರ್ಥಿಗಳಲ್ಲಿ ಕನಕದಾಸರ ಚಿಂತನೆ ಬಿತ್ತಿದ ವಿಶೇಷ ಕಾರ್ಯಕ್ರಮ

ಧರ್ಮತ್ತಡ್ಕ: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ ಇವರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾಸರಗೋಡು ಜಿಲ್ಲಾ ಮಟ್ಟದ ‘ಕನಕ ಚಿಂತನೆ ಪ್ರಸಾರ ಮಾಲಿಕೆ – ಕನಕಾಭಿಯಾನ’ ಕಾರ್ಯಕ್ರಮವು ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ನೇರೋಳು ಸುಬ್ಬಣ್ಣ ಭಟ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ಉದ್ಘಾಟಿಸಿ, ಕನಕದಾಸರ ಆದರ್ಶಗಳು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ದಾರಿದೀಪವಾಗಿದ್ದು, ಅವರ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸುವ ಇಂತಹ ಕಾರ್ಯಕ್ರಮಗಳು…

Read More

ರಸ್ತೆ ಬದಿ ಸಿಕ್ಕ ಪರ್ಸ್ ಪೊಲೀಸರಿಗೆ ಒಪ್ಪಿಸಿ ವಿದ್ಯಾರ್ಥಿಗಳ ಪ್ರಾಮಾಣಿಕತೆ : ಎಲ್ಲೆಡೆ ಪ್ರಶಂಸೆ

​ಕಾಸರಗೋಡು: ರಸ್ತೆ ಬದಿ ಬಿದ್ದಿದ್ದ ದೊಡ್ಡ ಮೊತ್ತದ ಹಣ ಹಾಗೂ ಅಮೂಲ್ಯ ದಾಖಲೆಗಳಿದ್ದ ಪರ್ಸ್ ಅನ್ನು ಕುಂಬಳ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಮೊಗ್ರಾಲ್ ಸರಕಾರಿ ವೊಕೇಷನಲ್ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ. ​ಮೊಗ್ರಾಲ್ ಸರಕಾರಿ. ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ಸರ್ಫಾಸ್, ಅಕ್ಷರ್, ಅಫೀಸ್, ಇರ್ಫಾನ್ ಹಾಗೂ ಮಿದ್ಲಾಜ್ ಮಾದರಿ ಕಾರ್ಯ ಮೆರೆದ ವಿದ್ಯಾರ್ಥಿಗಳು. ಗುರುವಾರ ಸಂಜೆ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆರಿಕ್ಕಾಡಿಯ ತಮ್ಮ ಮನೆಯ ಸಮೀಪದ ರಸ್ತೆ…

Read More

ವಿವಾಹ ವಾಗ್ದಾನ ನೀಡಿ ಯುವತಿಗೆ ಪೀಡನೆ: ಆರೋಪಿಗೆ 10 ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು

​ಕಾಸರಗೋಡು: ವಿವಾಹ ವಾಗ್ದಾನ ನೀಡಿ ಯುವತಿಯನ್ನು ಹಲವು ಬಾರಿ ಪೀಡಿಸಿದ ಪ್ರಕರಣದಲ್ಲಿ ಕೊಯಿಪ್ಪಾಡಿ ಮೂಲದ ಯುವಕನಿಗೆ 10 ವರ್ಷ ಕಠಿಣ ಕಾರಾಗೃಹ ವಾಸ ಮತ್ತು ಅರ್ಧ ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ರಜಿತ ತೀರ್ಪು ನೀಡಿದ್ದಾರೆ. ​ಕೊಯಿಪ್ಪಾಡಿ ಬದ್ರಿಯಾ ನಗರದ ಪುರುಷೋತ್ತಮ (40) ಶಿಕ್ಷೆಗೆ ಒಳಗಾದ ವ್ಯಕ್ತಿ. ದಂಡದ ಮೊತ್ತವನ್ನು ಪಾವತಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳು ಕಠಿಣ ತಂಡ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ. ​2019 ಜೂನ್…

Read More

ಆ.10ರಂದು ಎಂ. ದೇವದಾಸ್ ಅವರಿಗೆ ‘ನುಡಿ ನಮನ’ ಕಾರ್ಯಕ್ರಮ; ಡಿಸಿ ಮನ್ನ ಭೂ ಹೋರಾಟ ಮುಂದುವರಿಕೆ ಘೋಷಣೆ

ಮಂಗಳೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಪ್ರೊ. ಬಿ. ಕೃಷ್ಣಪ್ಪ ಬಣ) ರಾಜ್ಯ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಹೋರಾಟಗಾರ ಎಂ. ದೇವದಾಸ್ ಅವರಿಗೆ ಗೌರವ ನುಡಿ ನಮನ ಕಾರ್ಯಕ್ರಮವನ್ನು ಆಗಸ್ಟ್‌ 10ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಉರ್ವಸ್ಟೋರ್‌ನ ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ…

Read More

ಮಂಜೇಶ್ವರ: ಅಪಾಯಕಾರಿ ಮರಗಳ ತೆರವು; ಹೊಸಂಗಡಿಯನ್ನು ಮಾದರಿ ನಗರವನ್ನಾಗಿ ಮಾಡಲು ಕ್ರಮ – ಪಂಚಾಯತು ಅಧ್ಯಕ್ಷ ಬಶೀರ್ ಕನಿಲ

​ಮಂಜೇಶ್ವರ: ಬಸ್ ಸಂಚಾರಕ್ಕೂ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೂ ತೀವ್ರ ಭೀತಿಯಾಗಿದ್ದ ಅಪಾಯಕಾರಿ ಮರಗಳನ್ನು ನಿರಂತರ ವರದಿಗಳ ಬಳಿಕ ಎಚ್ಚೆತ್ತುಕೊಂಡ ಮಂಜೇಶ್ವರ ಗ್ರಾಮ ಪಂಚಾಯತ್ ತೆರವುಗೊಳಿಸಿದೆ. ​ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆದು ಹೊಸಂಗಡಿ ಅನೆಕಲ್ಲು ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮರಗಳನ್ನು ಕಡಿದು ತೆರವುಗೊಳಿಸಲಾಗಿದೆ ಎಂದು ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ತಿಳಿಸಿದ್ದಾರೆ. ​ಮುಂದಿನ ದಿನಗಳಲ್ಲಿ ಹೊಸಂಗಡಿಯನ್ನು ಮಾದರಿ ನಗರವನ್ನಾಗಿ ರೂಪಿಸಲು ಸರ್ವ ರೀತಿಯ ಪ್ರಯತ್ನಗಳು ಉತ್ತಮ ಹಾದಿಯಲ್ಲಿ ಸಾಗುತ್ತಿವೆ ಎಂದು ಅವರು ಹೇಳಿದರು. ಅಲ್ಲದೆ, ರಸ್ತೆ ಬದಿಯಲ್ಲಿ ಮೀನು…

Read More

ಆ.9ರಂದು ಮಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ–2026’; ವಿಶ್ವ ಕುಂದಾಪ್ರ ದಿನಾಚರಣೆ ಆಚರಣೆ

ಮಂಗಳೂರು:ಕುಂದಾಪುರ ಮೂಲದವರು ವೃತ್ತಿ ನಿಮಿತ್ತ ಮಂಗಳೂರಿನಲ್ಲಿ ನೆಲೆಸಿದ್ದರೂ ತಮ್ಮ ಭಾಷೆ, ಸಂಸ್ಕೃತಿ, ಆಚರಣೆ ಹಾಗೂ ಸಂಪ್ರದಾಯವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ಆಶ್ರಯದಲ್ಲಿ ‘ವಿಶ್ವ ಕುಂದಾಪ್ರ ದಿನಾಚರಣೆ’ ಹಾಗೂ ‘ಕುಂದಾಪ್ರ ಕನ್ನಡ ಹಬ್ಬ–2026’ ಅನ್ನು ಆಗಸ್ಟ್‌ 9ರಂದು ಮಂಗಳೂರಿನ ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿಯ ಅಧ್ಯಕ್ಷೆ ಮಾಲತಿ ಎಸ್. ಶೆಟ್ಟಿ ತಿಳಿಸಿದರು. ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 7.30ರಿಂದ…

Read More

ಮಂಗಳೂರು ನಗರದ ಬಾರ್‌ಗಳ ಮೇಲೆ ಅಬಕಾರಿ ಇಲಾಖೆಯ ದಿಢೀರ್ ದಾಳಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮದ್ಯದೊಂದಿಗೆ ಆಹಾರ ಪೂರೈಸುವ ಬಾರ್‌ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆ ವೇಳೆ ಬಾರ್‌ಗಳಿಗೆ ಆಗಮಿಸಿದ್ದ ಗ್ರಾಹಕರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಯಿತು. ಅಪ್ರಾಪ್ತ ವಯಸ್ಕರಿಗೆ ಯಾವುದೇ ಕಾರಣಕ್ಕೂ ಮದ್ಯ ಪೂರೈಸಬಾರದು ಎಂದು ಬಾರ್‌ಗಳ ಸನ್ನದುದಾರರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ…

Read More

ವಿಪ್ರ ವೇದಿಕೆ ದಶಮಾನೋತ್ಸವ ಸಮಾರೋಪ ಆ.16ರಂದು; ‘ವಿಪ್ರ ಚಿತ್ರ ಸಂಚಯ’ ಲೋಕಾರ್ಪಣೆ

ಮಂಗಳೂರು:ವಿಪ್ರ ವೇದಿಕೆ (ರಿ) ಸ್ಥಾಪನೆಯಾಗಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿ 11ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ದಶಮಾನೋತ್ಸವ ಸಮಾರೋಪ ಸಮಾರಂಭವನ್ನು ಆಗಸ್ಟ್‌ 16ರಂದು ಬೆಳಿಗ್ಗೆ 8.30 ರಿಂದ ಕೋಡಿಕಲ್‌ನ ಶ್ರೀ ಬೆನಕ ಜ್ಯೋತಿಷ್ಯಾಲಯದ ವೇ.ಮೂ. ಶ್ರೀ ವಿಶ್ವಕುಮಾರ್ ಜೋಯಿಸರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಮಾನೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರೋಪ ಸಮಾರಂಭದ ಸ್ಮರಣಾರ್ಥ…

Read More
error: Content is protected !!