ಕೋಝಿಕ್ಕೋಡಿನಿಂದ ಬೆಂಗಳೂರಿಗೆ ಹೊರಟ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ : ಚಾಲಕ ಹಾಗೂ ನಿರ್ವಾಹಕ ಸಾವು : 15 ಜನರಿಗೆ ಗಾಯ

ಮಂಜೇಶ್ವರ /​ಬೆಂಗಳೂರು: ಕೋಝಿಕ್ಕೋಡಿನಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ದಾರುಣವಾಗಿ ಸಾವನ್ನಪ್ಪಿದ್ದಾರೆ. ​ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ರಾಮನಗರದ ಬಿದದಿ ಬಳಿ ಶನಿವಾರ ಬೆಳಗ್ಗೆ 6:40 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಸೂಚನಾ ಫಲಕಕ್ಕೆ ಡಿಕ್ಕಿಹೊಡೆದು ತಲೆಕೆಳಗಾಗಿ ಮಗುಚಿ ಬಿದ್ದಿದೆ.ಅಪಘಾತದಲ್ಲಿ ಬಸ್ ಚಾಲಕ ಬಿಜಿಲೇಶ್ ಮತ್ತು ನಿರ್ವಾಹಕ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ದುರ್ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರಿಗೆ…

Read More

ತೂಮಿನಾಡಿನಲ್ಲಿ ಟೆಂಪೋ ತಡೆದು ಯುವಕನ ಮೇಲೆ ಹಲ್ಲೆ: ನಾಲ್ವರ ಸೆರೆ

​ಮಂಜೇಶ್ವರ: ಮಚ್ಚಂಪಾಡಿಯ ಯುವಕನೊಬ್ಬನ ಟೆಂಪೋವನ್ನು ತಡೆದು, ವಾಹನಕ್ಕೆ ಹಾನಿಗೈದು ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ ನಾಲ್ವರ ತಂಡವನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಸಂಜೆ ತೂಮಿನಾಡಿನಲ್ಲಿ ಸಂಭವಿಸಿದೆ. ​ತೂಮಿನಾಡು ಹಿಲ್ ಟಾಪ್ ನಗರ ಪರಿಸರದಲ್ಲಿ ಈ ಘಟನೆ ನಡೆದಿದೆ. ಮಚ್ಚಂಪಾಡಿ ನಿವಾಸಿ ಎನ್ನಲಾದ ಯುವಕನ ಟೆಂಪೋವನ್ನು ನಾಲ್ವರು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ, ವಾಹನಕ್ಕೆ ಹಾನಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯುವಕ ಸಮೀಪದಲ್ಲಿದ್ದ ಮಸೀದಿಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ. ​ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ…

Read More

ತ್ರಿಷಾ ದಿನ ಆಚರಣೆ ಆ.10ರಂದು; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಮಂಗಳೂರು, ಸಿದ್ಧಾಂತ ಫೌಂಡೇಶನ್ ವತಿಯಿಂದ ತ್ರಿಷಾ ಶಿಕ್ಷಣ ಸಂಸ್ಥೆಗಳ ಉನ್ನತ ಶಿಕ್ಷಣ ಹಾಗೂ ಶೈಕ್ಷಣಿಕ ಶ್ರೇಷ್ಠತೆಯ 28 ವರ್ಷಗಳ ಸೇವೆಯನ್ನು ಸ್ಮರಿಸುವ ಅಂಗವಾಗಿ ‘ತ್ರಿಷಾ ದಿನ ಆಚರಣೆ’ ಕಾರ್ಯಕ್ರಮವನ್ನು ಆ.10ರಂದು ಬೆಳಗ್ಗೆ 9 ಗಂಟೆಯಿಂದ ಮಂಗಳೂರಿನ ಬಲ್ಮಠದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ ಕಾಯರ್‌ಕಟ್ಟೆ, ತ್ರಿಷಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ,…

Read More

ಉಡುಪಿ ಕೃಷ್ಣಮಠಕ್ಕೆ ವಿಹಿಂಪ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಭೇಟಿ

ಉಡುಪಿ: ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಶುಕ್ರವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನ ಉದಯಕುಮಾರ್ ಸರಳತ್ತಾಯ, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಕುಮಾರ್ ಪಂಪ್‌ವೆಲ್, ಉಡುಪಿ ಜಿಲ್ಲಾ ವಿಹಿಂಪ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್., ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್ ಪೆರಲ್ಕೆ…

Read More

ಕಲ್ಮಾಡಿ ಚರ್ಚ್: ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ನವದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ‘ಆತ ಹೇಳಿದಂತೆ ಮಾಡಿ’ಹಬ್ಬದ ಸಂದೇಶವಾಗಿದ್ದು, ಪೂರ್ವ ಸಿದ್ದತೆಯಾಗಿ 9 ದಿನಗಳ ನವೇನಾ ಪ್ರಾರ್ಥನೆಗೆ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಧ್ವಜಾರೋಹಣದ ಮೂಲಕ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಪ್ರವಚನದಲ್ಲಿ ಸಂದೇಶವನ್ನು ನೀಡಿ ಕ್ರೈಸ್ತ ವಿಶ್ವಾಸಿಗಳು…

Read More

ಪಿಣರಾಯಿ-ಸತೀಶನ್ ಸರ್ವೀಸ್ ಕಮಿಷನ್ ಆಗಿ ಕೆಳಮಟ್ಟಕ್ಕಿಳಿದ ಪಿ.ಎಸ್.ಸಿ: ವರುಣ್ ಪ್ರಸಾದ್

ಕಾಸರಗೋಡು: ಉದ್ಯೋಗಾಕಾಂಕ್ಷಿ ಯುವಕರನ್ನು ಮತ್ತು ಪಿ.ಎಸ್.ಸಿ ರ್ಯಾಂಕ್ ವಿಜೇತರನ್ನು ವಂಚಿಸುವ ವಿಚಾರದಲ್ಲಿ ವಿ.ಡಿ. ಸತೀಶನ್ ಸರ್ಕಾರವು ಪಿಣರಾಯಿ ಸರ್ಕಾರದ ಹಾದಿಯಲ್ಲೇ ಸಾಗುತ್ತಿದೆ ಹಾಗೂ ಪಿ.ಎಸ್.ಸಿ ಇಂದು “ಪಿಣರಾಯಿ-ಸತೀಶನ್ ಸರ್ವೀಸ್ ಕಮಿಷನ್” ಆಗಿ ಅಧೋಗತಿಗೆ ತಲುಪಿದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರುಣ್ ಪ್ರಸಾದ್ ಆರೋಪಿಸಿದರು. ಪಿ.ಎಸ್.ಸಿ ಅಕ್ರಮಗಳ ವಿರುದ್ಧ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯು ಕಲೆಕ್ಟರೇಟ್‌ಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ​ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು ಹಾಗೂ ಪ್ರಸ್ತುತ ಯುವಜನ ಕ್ಷೇಮ…

Read More

ಬೈಂದೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ: ಎಂಟು ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡಲು ಆಗ್ರಹ

ಉಡುಪಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಎಂಟು ಗ್ರಾಮಗಳನ್ನು ಕೈಬಿಟ್ಟು, ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಒಂದು ವರ್ಷದ ಹೋರಾಟ ಶುಕ್ರವಾರ ತೀವ್ರ ಸ್ವರೂಪ ಪಡೆದುಕೊಂಡಿತು.ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು. ಸೇನೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿವರೆಗೆ ಸಾಗಿತು. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದರಿಂದ ಗ್ರಾಮೀಣ…

Read More

ಅಮೃತ ಯಕ್ಷಮಿತ್ರ ಬಳಗಕ್ಕೆ ದಶಕದ ಸಂಭ್ರಮ; ಆ.15ರಂದು ‘ಅಮೃತ ಯಕ್ಷಯಾನ’ ದಶಮಾನೋತ್ಸವ ಕಾರ್ಯಕ್ರಮ

ಮಂಗಳೂರು, ಆ.7: ಕರಾವಳಿಯಲ್ಲಿ ಯಕ್ಷಗಾನದ ತಾಳಮದ್ದಳೆ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೃತ ಯಕ್ಷಮಿತ್ರ ಬಳಗ ತನ್ನ ಯಶಸ್ವಿ 10ನೇ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ, ದಶಮಾನೋತ್ಸವ ಅಂಗವಾಗಿ ‘ಅಮೃತ ಯಕ್ಷಯಾನ’ ಕಾರ್ಯಕ್ರಮವನ್ನು ಆಗಸ್ಟ್ 15ರಂದು ಬೆಳಿಗ್ಗೆ 10 ಗಂಟೆಯಿಂದ ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸೂರ್ಯರಶ್ಮಿ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಪ್ರಮುಖರಾದ ಕದ್ರಿ ನವನೀತ ಶೆಟ್ಟಿ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಳಮದ್ದಳೆಯ…

Read More

ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಮತ್ತೊಂದು ಬಲಿ: ಸುರಿಕುಮೇರು ಬಳಿ ಆರು ಮಂದಿಗೆ ಗಾಯ

ಮಂಗಳೂರು:ವಿಟ್ಲ ಸಮೀಪದ ಸುರಿಕುಮೇರು ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಬಳಿ ಗುರುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಇಬ್ಬರು ದೊಡ್ಡವರು ಹಾಗೂ ನಾಲ್ವರು ಮಕ್ಕಳು ಪ್ರಯಾಣಿಸುತ್ತಿದ್ದರು. ಈ ವೇಳೆ ಸುರಿಕುಮೇರು ಸಮೀಪದ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಹಾಗೂ ರಸ್ತೆಯ ಅಸಮರ್ಪಕ ವ್ಯವಸ್ಥೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಕ್ಕೀಡಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲ ಆರು…

Read More

ಹಿರಿಯ ನಾಟಕಕಾರ, ಕಲಾ ನಿರ್ದೇಶಕ ತಮ್ಮ ಲಕ್ಷಣ್ ಅವರಿಗೆ “ತೌಳವ ಪ್ರಶಸ್ತಿ”

ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇವರ ಈ ಬಾರಿಯ ‘ತೌಳವ ಪ್ರಶಸ್ತಿ’ಗೆ ಹಿರಿಯ ನಾಟಕಕಾರ ಹಾಗೂ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣರು ಆಯ್ಕೆಯಾಗಿರುತ್ತಾರೆ. ಆಗಸ್ಟ್ 11ರಂದು ಪುರಭವನದಲ್ಲಿ ಜರಗಲಿರುವ ವಾರ್ಷಿಕ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿರುವ ಕಿಶೋರ್ ಡಿ. ಶೆಟ್ಟಿ ತಿಳಿಸಿದ್ದಾರೆ. ತಮ್ಮಲಕ್ಷ್ಮಣ ಅವರು ನಾಟಕ ರಂಗ ಮತ್ತು ಸಿನಿಮಾರಂಗದಲ್ಲಿ 57 ವರ್ಷಗಳ ಕಾಲ ದುಡಿದು ಸಾಧನೆ ಮಾಡಿರುವ ಅನುಭವಸ್ಥ ಹಿರಿಯ ಕಲಾವಿದರಾಗಿದ್ದಾರೆ. ಸಿನಿಮಾಕ್ಕೆ…

Read More
error: Content is protected !!