ಉಡುಪಿ: ಎಂಡಿಎಂಎ, ಹೈಡ್ರೋಗಾಂಜಾ ಮಾರಾಟ ಜಾಲ ಭೇದಿಸಿದ ಪೊಲೀಸರು
ಉಡುಪಿ: ಎಂಡಿಎಂಎ ಪೌಡರ್, ಹೈಡ್ರೋಗಾಂಜಾ ಹಾಗೂ ಎಂಡಿಎಂಎ ಟ್ಯಾಬ್ಲೆಟ್‌ಗಳನ್ನು ಹೊಂದಿದ್ದು, ಉಡುಪಿ, ಕಾಪು, ಮಣಿಪಾಲ ಮತ್ತು ಕಾರ್ಕಳ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹3.31 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಉದ್ಯಾವರದ ಪಿತ್ರೋಡಿ ನಿವಾಸಿ ವಿಜಯ ಪೂಜಾರಿ (36), ಕುಕ್ಕಂದೂರು ಹಾರ್ಜಿಡ್ಡು ನಿವಾಸಿ ಪಿ.ಎ. ಮೊಹಮ್ಮದ್ ಸಮ್ಮಾಸ್ (24) ಹಾಗೂ ಕಾರ್ಕಳ ತಾಲ್ಲೂಕಿನ ಮಿಯಾರು ಗ್ರಾಮದ ಕುಂಟಿಬೈಲು ನಿವಾಸಿ ಆಕಾಶ್ ಶೆಟ್ಟಿ (20) ಎಂದು ಗುರುತಿಸಲಾಗಿದೆ….
